Pages

Wednesday, September 30, 2009

ಕರ್ಕಿಯವರ ದಿವ್ಯ ಜ್ಯೋತಿ!

ದಿವ್ಯ ಜ್ಯೋತಿ
ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರ
ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು: ಇನ್ನೊಮ್ಮೆ ಏಕೆ ಬಾರ?

ಅಂದು ಸಂಜೆ ಪ್ರಾಥಱನೆಗೆ ದೇವಮಂದಿರದ ದಾರಿಯಲ್ಲಿ
ಆಚೆ ಈಚೆ ಮೊಮ್ಮಕ್ಕಳಿಬ್ಬರಲಿ ಮೈಯಭಾರ ಚೆಲ್ಲಿ
ಜಗದ ಕರುಣೆ ನಡೆವಂತೆ ನಡೆದು ಮಂದಿರದ ಪೀಠವೇರಿ
ನಿಂದನಿಲ್ಲೊ! ಜಡವುಳಿದು ಜೀವವೊಂದಾಯ್ತು ದೇವನಲ್ಲಿ.

ಎಸೆದ ಗುಂಡಿಗಾ ಕುಸಿದ ದೇಹದಲಿ ವಿಮಲ ರಕ್ತ ಚೆಲ್ಲಿ
ಮೀಯಿಸಿತ್ತು ಈ ಜಗದ ಮನವನೇ ಶೋಕ ಜಲಧಿಯಲ್ಲಿ
ಮುಗಿದ ಕೈಯು ಮುಗಿದಂತೆ ಇತ್ತು: ನೆಲಸಿತ್ತು ಕ್ಷಮೆಯು ಮೊಗದಿ
ಎದೆಯೊಳೆಂಥ ತಿಳಿಭಾವವಿತ್ತು! ಅದನಾವ ಬಲ್ಲ ಜಗದಿ?

ಹೋದ ಹೋದನವ ತ್ಯಾಗಜೀವನದ ತುತ್ತ ತುದಿಯನೇರಿ
ಏರಿ ಏರಿದೊಲು ಅಂತರಂಗದೈಸಿರಿಯ ಜಗಕೆ ತೂರಿ
ಸತ್ಯ ಪ್ರೇಮಗಳ ಸತ್ವವನ್ನೆ ಕಣ್ಣೆದುರು ಎತ್ತಿ ತೋರಿ
ಬೇರೆ ಲೋಕದನುಭಾವ ಬೀರಿ ಹೋದನಾವ ದಾರಿ?

ಎನಿತು ಸರಳ ನುಡಿ, ಎಷ್ಟು ಸಹಜ ನಡೆ ಮನದ ಮಹತಿಯೇನು!
ಅವನ ಎದೆಯ ಉನ್ನತಿಯ ನಿಲುಕುವುದು ಯಾವ ಗಿರಿಯ ಸಾನು?
ಇಹುದೆ ಅವನ ಕರುಣೆಯನು ಧರೆಗೆ ಕರೆವಂಥ ಕಾಮಧೇನು?
ಅವನು ಗೈದ ಲೀಲೆಯಲಿ ಲಯಸಿತೆಂಥವರ "ನಾನು-ನಾನು ".

ತಿಳಿದಿಹುದು ಚಿತ್ತ, ಹರಿದಿಹುದು ನೋಟ ಮೇಲಕ್ಕೆ ಬಾನಿನೆಡೆಗೆ
ಆ ಜಾಡ ಹಿಡಿದು ಇಳಿದಂತೆ ಇಹುದು ಬೆಳಕೊಂದು ಕೆಳಗೆ ಇಳೆಗೆ
"ಏನಷ್ಟು ಭ್ರಾಂತಿ? ಕಾಣದೆಯೆ ಜ್ಯೋತಿ?" ಎಂಬರುಹು ಮೂಡಲೊಡನೆ
ಬೆಳಕ ನಂಬಿ ನಿಂದಿಹನು ಧೀರ ಎದೆ ತೆರೆದು ನಾಡ ಕರೆಗೆ.
--ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ

ಯಾವುದೇ ಕನ್ನಡ ಸಮಾರಂಭ ಸಾಮಾನ್ಯವಾಗಿ ಶುರುವಾಗುವುದು "ಹಚ್ಚೇವು ಕನ್ನಡದ ದೀಪ" ಭಾವ ಗೀತೆಯಿಂದ. ಹಾಡು ಇಲ್ಲಿ ಕೇಳಿ ಈ ಗೀತೆಯಿಂದ, ಇದರ ರಚನಕಾರ "ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ" ಯವರು ಕನ್ನಡಿಗರ ಮನೆಮಾತಾಗಿಬಿಟ್ಟಿದ್ದಾರೆ. ಇವರ ಕವನ ಸಂಕಲನಗಳು ನಕ್ಷತ್ರ ಗಾನ, ಭಾವ ತೀರ್ಥ, ಗೀತ ಗೌರವ, ಕರಿಕೆ ಕಣಗಿಲು, ನಮನ, ತನನ ತೋಂ, ಬಣ್ಣದ ಚೆಂಡು... ನಕ್ಷತ್ರ ಗಾನ ಪ್ರಕಟವಾದ ಕರ್ಕಿಯವರ ಮೊದಲ ಕವನ ಸಂಕಲನ. ’ಹಚ್ಚೇವು ಕನ್ನಡದ ದೀಪ’ ವನ್ನು ಒಳಗೊಂಡಿರುವ ಕವನಸಂಕಲನ ಇದು. ಭಾವತೀರ್ಥ ದಲ್ಲಿ, ನಮ್ಮ ನಾಡಿನ ಕಾರಾವರ, ಗೋಕರ್ಣ, ಕೂಡಲ ಸಂಗಮ, ಜೋಗ ಇತ್ಯಾದಿ ಹಲವಾರು ಪ್ರೇಕ್ಷಣೀಯ ಸ್ಥಳಗಳ ವರ್ಣನೆಯಿದೆ. ಕರ್ಕಿಯವರು ಮಕ್ಕಳಿಗಾಗಿ ರಚಿಸಿರುವ ಬಣ್ಣದ ಚೆಂಡು (ನನ್ನ ಮಗಳ ಬ್ಲಾಗ್ ನಲ್ಲಿದೆ ಓದಿ) ಮತ್ತು ತನನ ತೋಂ ಕವನ ಸಂಕಲನಗಳು ಬಹಳ ಸರಳವಾಗಿದ್ದು, ಮಕ್ಕಳಿಗೆ ಕಲಿಸಿಕೊಡಲು ಚೆನ್ನಾಗಿವೆ. ಬೆಲ್ಲ ತಿನ್ನುವ ಮಲ್ಲ ಇತ್ಯಾದಿ ಕಥಾನಕ ಪದ್ಯಗಳಾಗಿದ್ದು ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತವಾಗಿವೆ. ಕರ್ಕಿಯವರ "ದಿವ್ಯ ಜ್ಯೋತಿ", ಮಹಾತ್ಮ ಗಾಂಧಿಯವರು ಮರಣ ಹೊಂದಿದಾಗ ಬರೆದ ಕವನ.

ಕರ್ಕಿಯವರ ತನನ ತೋಂ ಜೊತೆಗೆ ಈ ಕವನವನ್ನು ಕಳುಹಿಸಿ ಕೊಟ್ಟ ಮಂಜುನಾಥ್ ಬೊಮ್ಮನಕಟ್ಟಿ ಅವರಿಗೆ ವಂದನೆಗಳು!!

12 comments:

shivu.k said...

ರೂಪಶ್ರೀ,

ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ ಯವರ ಬಗೆಗಿನ ವಿಚಾರ ಮತ್ತು ಅವರ ಕವನ ಸಂಕಲನ, ಗಾಂಧೀಜಿಯವರ ಮೇಲೆ ಬರೆದ ಕವನವನ್ನು ಪರಿಚಯಿಸಿದ್ದೀರಿ...ಧನ್ಯವಾದಗಳು.

ಮನಸು said...

roopa,
kavana tumba chennagide,aa mahan kaviya parichayisidda nimage namma dhanyavadagaLu

ಕ್ಷಣ... ಚಿಂತನೆ... said...

ರೂಪಶ್ರೀ ಮೇಡಮ್,
ಡಿ.ಎಸ್. ಕರ್ಕಿಯವರ ಪೂರ್ಣ ಹೆಸರು ತಿಳಿದಿರಲಿಲ್ಲ. ಈ ನಿಮ್ಮ ಲೇಖನದಿಂದ ತಿಳಿಯಿತು. ಹಾಗೆಯೇ ಕವನವೂ ತುಂಬ ಚೆನ್ನಾಗಿದೆ.

ಅಕ್ಟೋಬರ್‍ ೨, ಗಾಂಧೀಜಿಯವರ ಜನ್ಮದಿನಕ್ಕೆ ಅನುಗುಣವಾಗಿ ಈ ಕವಿತೆಯನ್ನು ನಮಗೆಲ್ಲ ಪರಿಚಯಿಸಿದ್ದೀರಿ. ಧನ್ಯವಾದಗಳು. ಹಾಗೂ ಈ ಕವಿತೆಯನ್ನು ನಿಮಗೆ ಕಳುಹಿಸಿಕೊಟ್ಟವರಿಗೂ ಧನ್ಯವಾದಗಳು.

ಸಾಗರದಾಚೆಯ ಇಂಚರ said...

ರೂಪಶ್ರಿ,
ಕವನವನ್ನು ತಿಳಿಸಿ ನಮಗೆ ಜ್ಞಾನ ನೀಡಿದ್ದಿರಿ, ಕರ್ಕಿ ಕನ್ನಡ ಮೇರು ಕವಿ, ಹಚ್ಚೇವು ಕನಡದ ದೀಪ ಹಾಡು ಕೇಳುವಾಗ ಮೈ ನವಿರೇಳುತ್ತದೆ,
ತಿಳಿಸದ್ದಕ್ಕೆ ಧನ್ಯವಾದಗಳು

ಸೀತಾರಾಮ. ಕೆ. / SITARAM.K said...

ಕರ್ಕಿಯವರ ಉತ್ತಮ ಕವಿತೆಗಳನ್ನ ಜ್ಞಾಪಿಸಿದ್ದಿರಾ! ಧನ್ಯವಾದಗಳು.

Guruprasad said...

ರೂಪಶ್ರಿ,
ಹಚ್ಚೇವು ಕನ್ನಡದ ದೀಪ, ಹಾಡು ಚೆನ್ನಾಗಿ ಗೊತ್ತಿತ್ತು,, ಆದರೆ ಕರ್ಕೆ ಅವರ ಬಗ್ಗೆ ಇಸ್ಟೊಂದು ಮಾಹಿತಿ ತಿಳಿದಿರಲಿಲ್ಲ...
ಗಾಂದಿ ಜಯಂತಿ ಅಂಗವಾಗಿ ಅವರ ಒಂದು ಬಗ್ಗೆ ಒಂದು ಒಳ್ಳೆಯ ಕವನ ಓದಲು ಅನುಕೂಲ ಮಾಡಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು....
ಗುರು

ಸವಿಗನಸು said...

ತುಂಬ ಚೆನ್ನಾಗಿದೆ...
ಧನ್ಯವಾದಗಳು....

ರೂpaश्री said...

ಕಮೆಂಟಿಸಿದ ಎಲ್ಲರಿಗೂ ವಂದನೆಗಳು!!
ಆಕ್ಟೋಬರ್ ೨ ಗಾಂಧಿಜಿ ಅಲ್ಲದೇ ಲಾಲ್ ಬಹಾದೂರ್ ಶಾಸ್ತಿ, ಕವಿ ವಿ ಸೀತಾರಾಮಯ್ಯ (ವಿಸೀ) ನವರ ಜನ್ಮದಿನ ಕೂಡ....

ವನಿತಾ / Vanitha said...

'ಹಚ್ಚೇವು ಕನ್ನಡದ ದೀಪ' ಪದ್ಯ ಗೊತ್ತಿತ್ತು..ಆದರೆ ಕರ್ಕಿ ಅವರ ಬಗ್ಗೆ ಇನ್ನು ಜಾಸ್ತಿ ವಿವರಣೆ ಕೊಟ್ಟ ನಿಮಗೆ ತುಂಬಾ ಥ್ಯಾಂಕ್ಸ್..

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀಯವರೆ,
ತುಮಕೂರಿನ ಬಳಿ ಹೊದೇಕಲ್‌ನಲ್ಲಿ ರಂಗಮ್ಮ ಎಂಬ ಟೀಚರ್ ಇದ್ದಾರೆ. ಹತ್ತು ವರ್ಷಗಳಿಂದ "ಶೈನಾ" ಎಂಬ ಪತ್ರಿಕೆ ನಡೆಸುತ್ತಿದ್ದಾರೆ. ಅವರಿಗೆ ಫೋನ್ ಮಾಡಿದಾಗಲೆಲ್ಲಾ "ಹಚ್ಚೇವು ಕನ್ನಡದ ದೀಪ..." ಹಾಡು ಬರುತ್ತದೆ. ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ ಯವರು ಅದನ್ನು ಬರೆದಿರುವುದು ತಿಳಿದಿರಲಿಲ್ಲ. ಗಾಂಧಿ ಜಯಂತಿ ಸಂದರ್ಭದಲ್ಲಿ ಅವರ ಬಗ್ಗೆ ಅವರ ಕವನದೊಂದಿಗೆ ಪ್ರಕಟಿಸಿರುವುದು ಸೂಕ್ತವಾಗಿದೆ.

ಜಲನಯನ said...

ರೂಪश्री
ನಿಮ್ಮ ಬಾಪುಕುರಿತ ಲೇಖನ ಬಹಳ ಸಮ್ಯೋಚಿತ ಮತ್ತು...
ಛೇ ಬಿಡಿ..ಇವರಿಗೆ ಅವರ ಹೆಸರನ್ನು ಹೇಳುವ ಅರ್ಹತೆಯೂ ಇಲ್ಲ
ನಮ್ಮ ಮಕ್ಕಳಲ್ಲಿ ಬಾಪೂಜಿ ಬಗ್ಗೆ ಅವರ ತ್ಯಾಗ ದೇಶಪ್ರೇಮದ ಬಗ್ಗೆ ಅರಿವು ಮೂಡಿಸಬೇಕು...ಏನಂತೀರಿ??

ರೂpaश्री said...

ವನಿತಾ, ಮಲ್ಲಿಕಾರ್ಜುನ್ ಮತ್ತು ಅಜಾದ್, ಪ್ರತಿಕ್ರಿಯಿಸಿದಕ್ಕೆ ವಂದನೆಗಳು!! ಕಳೆದ ಕೆಲವು ವಾರದಲ್ಲಿ ಬಹಳ ಬ್ಯುಸಿಯಾದ್ದರಿಂದ ನಿಮ್ಮಗಳ ಬ್ಲಾಗಿಗೆ ಭೇಟಿ ಕೊಟ್ಟಿಲ್ಲ, ಕ್ಷಮಿಸಿ.

ಮಲ್ಲಿಕಾರ್ಜುನ್ ಅವರೆ,
’ಶೈನಾ’ ಪತ್ರಿಕೆ ನಡೆಸುತ್ತಿರುವ ರಂಗಮ್ಮ ಟೇಚರ್ ಬಗ್ಗೆ ತಿಳಿಸಿದಕ್ಕೆ ಥ್ಯಾಂಕ್ಸ್:)