Pages

Thursday, September 25, 2008

ನಾಮಕರಣ ವಿಧಾನದ ಹಿನ್ನಲೆ !!!

ಮಗುವಿಗೆ ಹೆಸರಿಡುವ ಹಬ್ಬವೇ ನಾಮಕರಣ. ವ್ಯವಹಾರ ನಾಮದ ಜೊತೆಗೆ ಕೆಲವರು ಐದು ಹೆಸರುಗಳನ್ನು ಇಡುತ್ತಾರೆ. ಮಗುವಿನ ರಕ್ಷಣೆಯ ದೃಷ್ಟಿಯಿಂದ ದೇವರ ಹೆಸರು, ಹಿರಿಯರ ನೆನಪಿಗಾಗಿ ಒಂದು, ನಕ್ಷತ್ರನಾಮ, ಮಾಸ ನಾಮ ಇತ್ಯಾದಿ... ಗಂಡು ಮಗುವಿಗೆ ಆದರೆ ೨,೪,೬ ಅಕ್ಷರಗಳ(even number) ಹೆಣ್ಣು ಮಗುವಿಗೆ ೩,೫,೭ (odd number) ಅಕ್ಷರಗಳ ಹೆಸರು ಇಡಬೇಕಂತೆ. ತಂದೆಯು ತನ್ನ ಬೆರಳುಂಗುರದಿಂದ ಅಕ್ಕಿಯ ಮೇಲೆ ಮಗುವಿನ ಹೆಸರು ಬರೆದು, ನಂತರ ಮಗುವಿನ ಕಿವಿಯಲ್ಲಿ ಹೆಸರು ಹೇಳಿ, ಉಂಗುರವನ್ನು ಜೇನುತುಪ್ಪದಲ್ಲಿ ಹಾಕಿ ಅದನ್ನು ಮಗುವಿಗೆ ನೆಕ್ಕಿಸುತ್ತಾರೆ. ಈ ಎಲ್ಲದರ ಹಿಂದಿನ ಕಾರಣವೇನಿರ ಬಹುದು ಅಂತಾ ಯೋಚಿಸಿದಾಗ ನನಗೆ ಅನಿಸಿದ್ದು ಇವು. ಈ ಕಾರಣಗಳು ಸರಿಯಿಲ್ಲದಿರಲೂ ಬಹುದು, ನಿಮಗೆ ಹೆಚ್ಚಿನ ಮಾಹಿತಿಯಿದ್ದರೆ ಹಂಚಿಕೊಳ್ಳಿ.

ಹೆಸರು ಬರೆಯಲು ತಂದೆಯು ತನ್ನ ಉಂಗುರವನ್ನೇ ಏಕೆ ಬಳಸುತ್ತಾನೆ?
ಚಿನ್ನಕ್ಕೆ ಲೋಪವಿಲ್ಲ, ಅದು ಶ್ರೇಷ್ಠವಾದದ್ದು. ಹೆಸರಿಡುವ ಕೆಲಸ ತಂದೆಯದ್ದಾದ್ದರಿಂದ ಅವನು ತೊಡುವ ಒಡವೆಗಳಲ್ಲಿ ಉಂಗುರ ಬಹಳ ಸುಲುಭವಾಗಿ ತೆಗೆದು ಹಾಕಬಹುದು. ಅಲ್ಲದೆ ಬೇರೆ ಆಭರಗಳಿಗೆ ಹೋಲಿಸಿದರೆ ಉಂಗುರದಲ್ಲಿ ಬರೆಯುವುದು ಸುಲಭ. ಜೊತೆಗೆ ರೋಮನ್ನರ ನಂಬೆಕೆಯಂತೆ ನಮ್ಮ ಎಡಗೈಯ ೪ನೇ ಬೆರಳಿನಿಂದ ಶುರುವಾಗುವ ರಕ್ತನಾಳವೊಂದು ನೇರ ಹೃದಯ ಸೇರುತ್ತದಂತೆ. ಮಗುವಿನ ಹೆಸರನ್ನು ಬರೆಯಲು ತಂದೆಯು ತನ್ನ ಹೃದಯಕ್ಕೆ ಹತ್ತಿರವಿರುವ ಬೆರಳಿನ ಉಂಗುರವನ್ನು ಬಳಸಿ ಮಗುವಿಗೆ "ನೀನು ನನಗೆ ಬಹಳ ಪ್ರೀತಿಪಾತ್ರನಾದವಳು/ನು" ಅಂತ ಹೇಳುವಂತಿದೆ.


ಅಕ್ಕಿಯ ಮೇಲೆ ಮಗುವಿನ ಹೆಸರು ಬರೆಯಲು ಕಾರಣವೇನು?
ಅಕ್ಕಿಯ ಮೆಲೆ ಬರೆದ ಹೆಸರು ತಟ್ಟೆ ಸ್ವಲ್ಪ ಅಲುಗಾಡಿದರೆ ಅಳಿಸುವುದು, ಹಾಗೆಯೇ ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ ಎಂದು ಮಗುವಿಗೆ ತಿಳಿಸಲು.


ಉಂಗುರವನ್ನು ಜೇನುತುಪ್ಪದಲ್ಲಿ ಹಾಕಿ ಅದನ್ನು ಮಗುವಿಗೆ ನೆಕ್ಕಿಸುವುದು ಏಕೆ?
  • ಜೇನಿನಷ್ಟೇ ಸಿಹಿಯಾದ ಹೆಸರನ್ನು ನಿನಗೆ ಇಡುತ್ತಿರುವೆವು ಕಂದ ಅಂತ ತಿಳಿಸಲು.
  • ಮಗುವಿನ ಬಾಳು ಜೇನಿನಂತೆ ಸಿಹಿಯಾಗಿರಲೆಂದು ಹಾರೈಸಲು.
  • ಮಗುವು ತನ್ನ ನಡೆ-ನುಡಿಗಳನ್ನು ಜೇನಿನಂತೆ ಸಿಹಿಯಾಗಿ ಬೆಳಸಿಕೊಳ್ಳಲಿಯೆಂದು.
  • ಸಿಹಿಯಾದ್ದರಿಂದ ಮಗುವು ಯಾವುದೇ ರಗಳೆಯಿಲ್ಲದೆ ಜೇನು ಚೀಪುತ್ತದೆ ಎಂದು.

ನನ್ನ ಮಗಳ ನಾಮಕರಣವೂ ಹೀಗೇ ಮಾಡಿದೆವು. ಜೇನಿನಲ್ಲಿ "Clostridium Botulimun" ಎಂಬ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚಿರುವುದರಿಂದ ಅವಳಿಗೆ ಜೇನಿನ ಬದಲಿಗೆ ಹಾಲು ಚೀಪಿಸಿದೆವು:)

6 comments:

NilGiri said...

ಓಹ್! ಶಾಸ್ತ್ರದ ಹಿಂದೆ ಇಷ್ಟೆಲ್ಲಾ ಸಂಗತಿಗಳು ಇರುವುದು ಗೊತ್ತೇ ಇರಲಿಲ್ಲ! Thanks ರೂಪ.

Unknown said...

ಬಹಳ ಚೆನ್ನಾಗಿ ಅರ್ಥೈಸಿದ್ದೀರಿ - ಇಹಲೋಕಾಚರಣೆಗಳಿಗೆ ಪಾರಮಾರ್ಥಿಕ ಅರ್ಥವನ್ನು ಕೊಟ್ಟು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ :)

Anonymous said...

ರೂಪಶ್ರೀ ಅವರೇ,

ಒಂದೊಳ್ಳೆ ಲೇಖನ. ಅಂತೆ ಒಂದೊಳ್ಳೆ ಬ್ಲಾಗು ಕೂಡ. ನೀಲಗಿರಿಯಲ್ಲಿ ನಿಮ್ಮ ಬ್ಲಾಗಿನ ಲಿಂಕ್ ಸಿಕ್ಕಿತು. ನಿಮ್ಮಿಂದ ಇನ್ನೊಂದಿಷ್ಟು ಹೊಸ ಬ್ಲಾಗುಗಳ ಪರಿಚಯವಾಯಿತು. ದೂರದೂರಿನಲ್ಲೂ ಗಣೇಶ ಹಬ್ಬದ ಆಚರಣೆಗಳನ್ನು ಓದಿ-ನೋಡಿ ಖುಷಿಯಾಯಿತು. ಹೀಗೆ ಬರೆಯುತ್ತಿರಿ.
ವಂದನೆಗಳೊಂದಿಗೆ
-ಜಿತೇಂದ್ರ

Anonymous said...

Hi Roopa,

Welcome to the blog world. I didn’t know you write. I read almost all the kannada blogs regularly.Your other blog ‘Putti’ is mentioned in Kendasampige. Loved the pictures.Happy blogging.

-Lavanya, Tallahassee

ರೂpaश्री said...

@nilgiri,
ನನಗೂ ಇವೆಲ್ಲಾ ಗೊತ್ತಿರಲಿಲ್ಲ, ಕಾರಣಗಳು ಹೀಗಿರಬಹುದೇನೊ ಅಂತಾ ಬರೆದಿದ್ದೀನಿ ಸರಿಯೋಒ ತಪ್ಪೋ ಗೊತ್ತಿಲ್ಲ.

@ತವಿಶ್ರೀ ಅವರೆ,
ವಂದನೆಗಳು ಸಾರ್!! ನಿಮ್ಮಿಂದ ತಿಳಿಯೋದು ಬಹಳಷ್ಟಿದೆ.

ರೂpaश्री said...

@ಜಿತೇಂದ್ರ ಅವರೆ,
ಬ್ಲಾಗಿಗೆ ಭೇಟಿ ಕೊಟ್ಟು , ಪ್ರೋತ್ಸಾಹದ ನುಡಿಗಳನ್ನು ಬರೆದಿದ್ದಕ್ಕೆ ವಂದನೆಗಳು. ಬರುತ್ತಾಯಿರಿ:)


@Lavanya,
Thanks for ur warm welcome and for letting me know about Kendasampige. Keep visiting.