Pages

Monday, August 31, 2009

ಓಡಿ ಬಾ ಓಡೋಡಿ ಬಾ - ಚಕ್ರತೀರ್ಥ

ಈ ಇಬ್ಬರು ಬಾಲನಟರು ಯಾರು ಗೊತ್ತಾ?

ಚಕ್ರತೀರ್ಥ (1967) -

ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಟಿ.ಜಿ.ಲಿಂಗಪ್ಪ
ಗಾಯನ: ಬಿ.ಕೆ.ಸುಮಿತ್ರ ಮತ್ತು ಬೆಂಗಳೂರು ಲತಾ.

ಝೂಟ್.......
ಹಾಹಾಹಾಹಹ ಹಾಹಾ...ಲಲಲಲಲಲಾಲಾ

ಓಡಿ ಬಾ ಓಡೋಡಿ ಬಾ ಚಿನ್ನ ನನ್ನ ಬೆನ್ನ ಹಿಂದೆ ಓಡಿ ಬಾ
ಓಡುವೇ ನಾ ಓಡುವೇ ಜಿಂಕೆ ಹಾಗೆ ಓಡೀ ನಿನ್ನಾ ಕೂಡುವೇ
ಓಡಿ ಬಾ..ಝೂಟ್...

ಮಣ್ಣಿನಿಂದ ಕಪ್ಪೆಗೂಡು ಕಟ್ಟಬಲ್ಲೆಯಾ
ಅಲ್ಲಿ ನೀನು ಕಪ್ಪೆಯೊಂದ ಸಾಕಬಲ್ಲೆಯಾ
ಕಣ್ಣು ಮುಚ್ಚಿ ನನ್ನಾ ಹಿಡಿಯಬಲ್ಲೆಯಾ
ನಾ ಹಾರೆದಂತೆ ದೂರ ನೀನು ಹಾರಬಲ್ಲೆಯಾ...ಝೂಟ್...

ನನ್ನಾ ರೀತಿ ರೆಂಬೆ ಹತ್ತಿ ನೀನು ನೋಡುವಾ
ನನ್ನಾ ಸಾಟಿ ಕುಂಟೊಬಿಲ್ಲೇ ಆಡು ನೋಡುವಾ
ಸುತ್ತಿ ಸುತ್ತಿ ಲಾಗಾ ಹಾಕು ಅಮ್ಮಯ್ಯಾ
ಈ ಕೋತಿಯಾಟ ದೊಂಬರಾಟ ಬೇಡ ದಮ್ಮಯ್ಯಾ...ಝೂಟ್...

ಕಾಗದದ ದೋಣೀಯೊಂದ ನಾವು ಮಾಡುವಾ
ನೀರಿನಲ್ಲೀ ದೋಣಿಯನ್ನು ತೇಲಿ ಬಿಡುವಾ
ಅಂಚಿನಲ್ಲಿ ನಿಂತೂ ನಾವು ನೋಡುವಾ
ಹಾಯಾಗೀ ಒಂದಾಗೀ ಇನ್ನೆಂದೂ ಬಾಳುವಾ...ಝೂಟ್...

ಓಡಿಬಾ ....ನಾ ಓಡುವೇ...ಓಡಿಬಾ...ಝೂಟ್....

10 comments:

ಸಾಗರದಾಚೆಯ ಇಂಚರ said...

Thanks for postng this, too good

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀಯವರೆ,
ಅದ್ಭುತವಾದ ಹಾಡು ತೋರಿಸಿದ್ದಕ್ಕೆ ಕೇಳಿಸಿದ್ದಕ್ಕೆ ಧನ್ಯವಾದಗಳು. ಆ ಬಾಲಕಲಾವಿದರು ಯಾರು ಎಂಬುದು ಗೊತ್ತಾಗಲಿಲ್ಲ.ನೀವೇ ತಿಳಿಸಿ.
ಇದೇ ಚಿತ್ರದ ಟೈಟಲ್ ಸಾಂಗ್ ನನಗೆ ತುಂಬಾ ಇಷ್ಟ. ತರಾಸು ಬರೆದಿರುವ "ಇದೇ ಚಕ್ರತೀರ್ಥ..." ಹಾಡು ಸಾಧ್ಯವಾದರೆ ಹಾಕಿ.

shivu.k said...

ರೂಪಶ್ರಿ,

ಕಳೆದ ನಾಲ್ಕು ದಿನದಿಂದ ನನ್ನ ಇಂಟರ್ ನೆಟ್ ಇಲ್ಲವಾಗಿ ಯಾರ ಬ್ಲಾಗಿಗೂ ಹೋಗಲಾಗಿರಲಿಲ್ಲ. ಇವತ್ತು ಸರಿಯಾಯ್ತು. ಮತ್ತೆ ಚಕ್ರತೀರ್ಥದ ಹಾಡು ನನಗಂತೂ ತುಂಬಾ ಇಷ್ಟ. ನಾನು ಚಿಕ್ಕಂದಿನಲ್ಲಿ ಗಣೇಶ, ರಾಜ್ಯೋತ್ಸವಗಳಲ್ಲಿ ರಾತ್ರಿ ಹತ್ತು ಗಂಟೆಗೆ ರಸ್ತೆಯಲ್ಲಿ ಸಿನಿಮ ತೋರಿಸುತ್ತಿದ್ದರಲ್ಲ. ಆಗ ಚಕ್ರತೀರ್ಥವನ್ನು ನೋಡಿದ್ದೆ. ಊಟಮಾಡಿ ಮೊದಲೇ ಮುಂದೆ ಹೋಗಿ ಜಾಗ ಹಿಡಿದು ಕೂತುಬಿಡುತ್ತಿದ್ದೆ. ಆಗಿನ ನೆನಪುಗಳನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸ್...

ರೂpaश्री said...

You are welcome sir! I am glad you liked it too:)

ರೂpaश्री said...

ಮಲ್ಲಿಕಾರ್ಜುನ ಅವರೆ,
ಈ ಹಾಡು ನನಗೆ ಬಹಳ ಇಷ್ಟ, ಅದ್ರಲ್ಲೂ ಆ ಮಕ್ಕಳ ಅಭಿನಯ ತುಂಬಾನೇ ಖುಶಿ ಅನ್ಸುತ್ತೆ!! ಅವರು ಯಾರು ಅಂತ ನನಗೂ ಗೊತ್ತಿಲ್ಲ, ನೀವ್ಯಾರಾದ್ರೂ ತಿಳಿಸಬಹುದು ಅಂತಲೇ ಪೋಸ್ಟ್ ಮಾಡಿದ್ದು.
ನೀವು ಕೇಳಿದ ಹಾಡು ಇದಾ ನೋಡಿ. http://www.youtube.com/watch?v=C8UtmiUjQX0

ರೂpaश्री said...

ಶಿವು ಅವರೆ,
ನಿಮ್ಮ ಮನೆಯಲ್ಲಿ ಇಂಟರ್ನೆಟ್ ಸರಿಯಾಗಿ, ನೀವಾಗ್ಲೇ ಹೊಸ ಪೋಸ್ಟ್ ಹಾಕಿದ್ದೀರಿ, ಅಪ್ಡೇಟ್ ನೋಡಿದೆ!
ನಾನೂ ಇತ್ತೀಚೆಗೆ ಸ್ವಲ್ಪ ಬ್ಯುಸಿಯಾಗಿದ್ದರಿಂದ ಹಲವು ಬ್ಲಾಗ್ ನೋಡಿಲ್ಲ..
ಚಿಕ್ಕಂದಿನ ನೆನಪುಗಳನ್ನು ಹಂಚಿಕೊಂಡಿದಕ್ಕೆ ಥ್ಯಾಂಕ್ಸ್. ನಾನೂ ಕೂಡ ಗಣೇಶ ಹಬ್ಬ/ ಶಿವರಾತ್ರಿ ಜಾಗರಣೆಗಳಲ್ಲಿ ಹೀಗೆ ಬೀದಿಯಲ್ಲಿ ಕೂತು ಸಿನೆಮಾ ನೋಡಿದ್ದೆನೆ, ಆದ್ರೆ ನಮ್ಮ್ ಬೀದಿ ಹುಡುಗ್ರು ಹೆಚ್ಚು ಹಿಂದಿ ಸಿನೆಮಾ ಹಾಕೋರು!!

ದೀಪಸ್ಮಿತಾ said...

ರೂಪಾಶ್ರೀ, ಬಾಲ್ಯದ ದಿನಗಳನ್ನು ನೆನಪಿಸುವ ಗೀತೆ. ಆಗಿನ ಹಾಡುಗಳೂ ಅಷ್ಟೇ ಮಧುರ ಮತ್ತು ಸರಳ. ಈಗಿನ ಮಕ್ಕಳು ಮೊಬೈಲ್, ಕಂಪ್ಯೂಟರ್, ವೀಡಿಯೋ ಗೇಮ್ ಗಳೇ ಆಟಗಳೆಂದುಕೊಂಡಿದ್ದಾರೆ. ಆಗಿನ ಸರಳ ಸುಂದರ ಖುಶಿ ಈಗಿನವರು ಅನುಭವಿಸುತ್ತಿಲ್ಲ. ಮಕ್ಕಳ ಮುಗ್ಧತೆಯನ್ನು ಸುಂದರವಾಗಿ ಬಿಂಬಿಸುತ್ತದೆ ಈ ಹಾಡು. ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು

Ittigecement said...

ರೂಪಾಶ್ರೀಯವರೆ...

ಈ ಹಾಡು ನನಗೆ ಬಹಳ ಇಷ್ಟ...
ಬಾಲ ನಟ ಯಾರೆಂದು ನನಗೆ ಗೊತ್ತಾಗಲಿಲ್ಲ..

ಈ ಮೊದಲು ಬಂದಾಗ ನನಗೆ ಪ್ರತಿಕ್ರಿಯೆ ಕೊಡಲು ಆಗಿರಲಿಲ್ಲ...(ಏನೋ ತಾಂತ್ರಿಕ ಸಮಸ್ಯೆ)

ಇದೇ ಚಕ್ರತೀರ್ಥ ಹಾಡಿನ ಲಿಂಕಿಗಾಗೂ ಧನ್ಯವಾದಗಳು...

ಜಲನಯನ said...

ರೂಪश्री ನಿಮ್ಮ ಬ್ಲಾಗ್ ಪೋಸ್ಟ್ ಗಳು ವಿಭಿನ್ನ ಮತ್ತು ಅತಿ interesting ಆಗಿರ್ತವೆರೀ..ಹಾಂ..!! ನನಗೆ ಹಳೆಯ ಕ.ಬಿ. ಚಿತ್ರದ ಹಾಡುಗಳು ಬಹಳ ಇಷ್ಟ...ನನ್ನ ಬಹು ಪ್ರಿಯ ಹಾಡು..ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...ಇದನ್ನ ನಿಮ್ಮ ಗೂಡಲಿ ಶೇಖರಿಸಿಟ್ಟಿದ್ದರೆ..ಹಾಕಿ..ಪ್ಲೀಸ್...ಪ್ಲೀಸ್...

Raghu said...

I liked it... lyrics is very nice...

matte nanage aa Sundarachandirana nenapayitu..

ನಿಮ್ಮವ,
ರಾಘು.