Pages

Friday, May 22, 2009

ವಿಸ್ಮಯ ವೃಕ್ಷಗಳು!!!

ಬಾವ್ಬಾಬ್ (Baobab) :

ಕಲ್ಪವೃಕ್ಷ ಎಂದು ಕರೆಸಿ ಕೊಳ್ಳುವ 100 ಅಡಿ ಎತ್ತರ, 35 ಅಡಿ ಸುತ್ತಳತೆ ಬೆಳೆಯುವ ಈ ಮರ ಆಫ್ರಿಕಾ , ಆಸ್ಟ್ರೇಲಿಯಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಕಾಣಸಿಗುತ್ತೆ. ಉಬ್ಬಿದ ಅದರ ಬೊಡ್ಡೆಯಲ್ಲಿ ಸುಮಾರು 120,000ಲಿ ನಷ್ಟು ನೀರು ಶೇಖರಿಸಿಟ್ಟುಕೊಂಡು ಬರಬಂದಾಗ ಉಪಯೋಗಿಸಿಕೊಳ್ಳುತ್ತದೆ. ಇದು ಮಡಗ್ಯಾಸ್ಕ

ರ್ ದೇಶದ ರಾಷ್ಟ್ರೀಯ ಮರ. ವರ್ಷದ 9 ತಿಂಗಳು ಇದರಲ್ಲಿ ಎಲೆಗಳೆ ಇರೊಲ್ಲ, ಇದನ್ನು ಆಗ ನೋಡಿದ್ರೆ ಯಾರೊ ಇದನ್ನ ಬುಡ ಸಮೇತ ಕಿತ್ತು ತಲೆಕೆಳಗಾಗಿ ಮತ್ತೆ ನೆಟ್ಟಂತೆ ಕಾಣಿಸುತ್ತೆ. ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರ್ ನಲ್ಲಿ ಬೃಹತ್ ಮರಗಳಿವೆ.

ಈ ಮರಗಳು ಭಾರತದಲ್ಲಿ ಕಣ್ಮರೆಯಾಗುತ್ತಿರುವುದು ನೋವಿನ ವಿಷಯ. ಇದರ ಕುರಿತು ಒಂದು ವಿಡಿಯೋ.





ಅತಿ ದೊಡ್ಡ ಬೊಡ್ಡೆಯುಳ್ಳ ಮರ - El Árbol del Tule

El Árbol del Tule (”ಟ್ಯೂಲ್ ಟ್ರೀ”) ಅತಿ ಅಗಲವಾದ ಸೈಪ್ರೆಸ್ಸ್ ಮರ. ಇದು ಮೆಕ್ಸಿಕೋ ದೇಶದ ಓಕ್ಸಾಕ (Oaxaca) ನಲ್ಲಿದೆ. 190 ಅಡಿ ಎತ್ತರದಲ್ಲಿ ಇದರ ಸುತ್ತರಳತೆ 37ಅಡಿ!! ಜಗತ್ತಿನ ಅತಿ ಅಗಲವಾದ ಮರ ಇದು ಅಂತ ಒಪ್ಪದ ಕೆಲವರು ಇದು ಮೂರು ಪ್ರತ್ಯೆಕ ಮರಗಳು ಒಂದರ ಪಕ್ಕದಲ್ಲೇ ಬೆಳೆದಿವೆ ಅಂತೆಲ್ಲ ವಾದಿಸಿದ್ರು. ಆದ್ರೆ DNA ಅನಾಲಿಸಿಸ್ ನಿಂದ ಒಂದೇ ಮರ ಇಷ್ಟು ದೊಡ್ಡದಾಗಿ ಬೆಳೆದಿದು ಅನ್ನೋದು ಖಚಿತವಾಯ್ತು.


ಜನರೆಲ್ ಶೇರ್ ಮನ್:


ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ದೈತ್ಯ ಸೆಕ್ವಾಯಿಯಾ ಮರಗಳು ಪ್ರಪಂಚದ ದೊಡ್ಡ ಮರಗಳು (ಪರಿಮಾಣ/ volume ಲೆಖ್ಖದಲ್ಲಿ). ಅದರಲ್ಲಿ ಅತಿ ದೊಡ್ಡದು ಎಂಬ ಖ್ಯಾತಿಗೆ ಒಳಗಾಗಿರೋದು ಸೆಕ್ವಾಯಿಯಾ ನ್ಯಾಶನಲ್ ಪಾರ್ಕ್ ನಲ್ಲಿರೋ ಜೆನರಲ್ ಶೇರ್ ಮನ್ - 275ಅಡಿ ಎತ್ತರ, 52,500 cubic feet (1,486 m³) ಪರಿಮಾಣವಿರೋ ಇದರ ತೂಕ 6000 ಟನ್!!! ಇದು ಸುಮಾರು 2,200 ವರ್ಷಗಳ ಹಿರಿಯ ಮರ.


ಬ್ರಿಸ್ಟಲ್ ಕೋನ್ ಪೈನ್ - ಮೆತುಸೇಲಹ್

ಬೈಬಲ್ ನಲ್ಲಿ ಬರುವ ’ಮೆತುಸೇಲಹ್’ ಎಂಬಾತ 969ವರ್ಷಗಳು ಬದುಕಿದ್ದನಂತೆ!! ಅವನ ಹೆಸರನ್ನೇ ಈಗ ಜಗತ್ತಿನ ಅತಿ ಹಿರಿಯ 4,838 ಹರೆಯದ ಈ ಮರಕ್ಕೆ ಇಡಲಾಗಿದೆ. ಇದು ಕ್ಯಾಲಿಫೋರ್ನಿಯಾದಲ್ಲಿದೆ. 1957ರಲ್ಲಿ ಎಡ್-ಮಂಡ್ ಶೂಲ್-ಮನ್ ಅವರು ಇದರಲ್ಲಿ ಒಂದು ಸಣ್ಣ ರದ್ರ ಕೊರೆದು, ಮರದ ಒಳ ತಿರುಳನ್ನು ತೆಗೆದು ಅದರ ವಯಸನ್ನು ಅಳೆದಿದ್ದರು.

1964ರಲ್ಲಿ ಆಗ ಸ್ನಾತಕೋತ್ತರ ವಿದ್ಯಾರ್ಥಿಯಾದಿದ್ದ ಡೋನಾಲ್ಡ್ ಕರ್ರಿ (Donald R. Currey) ಎಂಬುವವರು "ಪ್ರೋಮೆಥಸ್" ಎಂಬ ಮರದಿಂದ ಸ್ಯಾಂಪಲ್ಸ್ ಅನ್ನು ಕೊರೆದು ತೆಗೆಯುತ್ತಿದ್ದರು. ಆಗ ಅಕಸ್ಮಾತ್ ಅವರ ರಂದ್ರ ಕೊರೆಯುವ ಸಲಕರಣೆ ಮುರಿದು ಒಂದು ಭಾಗ ಮರದ ಒಳಗೇ ಉಳಿಯಿತು. ಇದನ್ನು US ಅರಣ್ಯ ಇಲಾಖೆಗೆ ತಿಳಿಸಿ, ಮರವನ್ನ ಕತ್ತರಿಸಿ ಅದನ್ನು ಪರೀಕ್ಷಿಸಿಸಲು ಅನುಮತಿ ಕೋರಿದರು. ಕಡಿದನಂತರದ ಪರೀಕ್ಷೆಯಿಂದ ಅದರ ವಯಸ್ಸು 5,000 ವರ್ಷಗಳಿಗೂ ಹೆಚ್ಚು ಅಂತ ತಿಳಿಯಿತು. ಜಗತ್ತಿನ ಅತಿ ಹಿರಿಯ ಜೀವಿ ಎನಿಸಿ ಕೊಳ್ಳಬಹುದಿದ್ದ ಆ ಮರ ಅವರ ಅಚಾತುರ್ಯದಿಂದಾಗಿ ಆಗಲೆ ನೆಲಕ್ಕುರುಳಿತ್ತು:(

ಈಗ ಇರುವ ಮೆತುಸೇಲಹ್ ಮರವನ್ನು ಜೋಪಾನ ಮಾಡಬೇಕಾದ್ದು ಎಲ್ಲರ ಕರ್ತವ್ಯ.


ಆಲದ ಮರ:

Largest Banyan Tree

ಹಿಂದಿನ ಕಾಲದಲ್ಲಿ ಇದರ ನೆರಳಿನಲ್ಲಿ ಬನಿಯಾ(ಹಿಂದುವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು ಪ್ರವಾಸಿಗಳು ಬನಿಯಾನ್ ಟ್ರೀ ಎಂದು ಕರೆದರು.ಇದು ಬೃಹತ ಪ್ರಾಮಾಣದ್ದಾಗಿದ್ದು ಅಗಲವಾಗಿ ಹರಡಿರುವ ಕೊಂಬೆಗಳಿಂದ ಕೂಡಿದೆ. ಇದು ಭಾರತದ ರಾಷ್ಟ್ರವೃಕ್ಷ. ಸಂಸ್ಕೃತದಲ್ಲಿ 'ವಟವೃಕ್ಷ 'ಎಂದು ಕರೆಯುತ್ತಾರೆ.

ಇದು ವಿಶಾಲ ಕೊಂಬೆಗಳಿಂದ ಕೂಡಿದ ಮರ. ಈ ಕೊಂಬೆಗಳಿಂದ ಬೀಳಲುಗಳು ಹೊರಟು ನೆಲವನ್ನು ತಾಗಿ ಕಾಂಡಗಳಾಗಿ ಪರಿವರ್ತಿಸುತ್ತವೆ. ಈ ರೀತಿಯಿಂದ ಹಲವು ಎಕರೆ ಪ್ರದೇಶಗಳನ್ನೂ ವ್ಯಾಪಿಸುವುದುಂಟು.

ಕಲ್ಕತ್ತದ ಶಿಬಿಪುರದಲ್ಲಿರುವ 250ವರ್ಷಗಳ ಆಲದ ಮರ ಒಂದೂವರೆ ಎಕರೆಯಷ್ಟು ವಿಸ್ತಾರವಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಬೇರುಗಳು ಇದಕ್ಕಿವೆ. ಇದರ ವಿಡಿಯೋ ತುಣುಕು ಇಲ್ಲಿದೆ .



ಮರಗಳ ಸರ್ಕಸ್:
ಅಕ್ಸೆಲ್ ಎರ್ಲ್ಯಾಂಡ್-ಸನ್(Axel Erlandson) ಅವರು ಮರಗಳಲ್ಲಿ ನಿರ್ಮಿಸುವ ಈ ಅದ್ಭುತಕ್ಕೆ ಅವರಿಟ್ಟ ಹೆಸರು "ಟ್ರೀ ಸರ್ಕಸ್" !! ಹೆಚ್ಚಿನ ವಿವರಗಳು ಇಲ್ಲಿ.

crafted_tree2.jpg

crafted_tree3.jpg

crafted_tree4.jpg

crafted_tree5.jpg

crafted_tree6.jpg

ಈ ಲೇಖನದ ಕ್ರೆಡಿಟ್ ನನ್ನ ಹೇಮಂತ್ ಅವರಿಗೆ ಸೇರಬೇಕು. ಅವರಿಂದ ತಿಳಿದದ್ದು/ ಕಲಿತಾಯಿರೋದು ತುಂಬಾಯಿದೆ. ಅವರು ವೃತ್ತಿಯಲ್ಲಿ ಹಾರ್ಟಿಕಲ್ಚರ್ ಮಾಲಿಕ್ಯುಲಾರ್ ಬಯಾಲಜಿಸ್ಟ್. ಗಿಡಗಳು ಅಂದ್ರೆ ಅವರಿಗೆ ಎಲ್ಲೆಲ್ಲಿದ ಆಸಕ್ತಿ, ಪ್ರೀತಿ:) ಮೊದಲ ಸರ್ತಿ ಅಮೇರಿಕಾಗೆ ಕಾನ್-ಫರೆನ್ಸ್ ಗೆ ಬಂದಿದ್ದಾಗ ಹತ್ತಿರದ ಯಾವುದೇ ಜಾಗಗಳನ್ನು ನೋಡದೇ ಕೇವಲ ಜೊಶುವಾ ಟ್ರೀ ನ್ಯಾಷನಲ್ ಪಾರ್ಕಿಗೆ ಭೇಟ್ಟಿ ಕೊಟ್ಟು ಮನೆಯಲ್ಲಿ ಸೋದರರ ನಗೆಗೆ ತುತ್ತಾಗಿದ್ದರು:( ನನಗೆ ಹೊಸ ವಿಷಯಗಳನ್ನು ಹೇಳೋದಲ್ಲದೆ ಆಗಾಗ್ಗೆ ಅದರ ಬಗ್ಗೆ ಕ್ವಿಜ್ ಕೂಡ ಮಾಡ್ತಾರೆ! ಅವರು ಹೇಳಿಕೊಟ್ಟ ಪಾಠದ ಪ್ರತಿಫಲವೇ ಈ ಲೇಖನ.

ಚಿತ್ರ ಕೃಪೆ: ಅಂತರ್ಜಾಲ

31 comments:

ಮನಸು said...

ಬಹಳ ಚೆನ್ನಾಗಿದೆ ನಿಮ್ಮ ಮಾಹಿತಿ, ಮರಗಳು ಎಲ್ಲೆಲ್ಲು ನಶಿಸುತ್ತಲಿವೆ... ಎಲ್ಲರ ಮನೆಯಮುಂದೊಂದು ಮರ ನೆಟ್ಟರೆ ಅದಕ್ಕೆ ನೀರುಣಿಸಿದರೆ ನಶಿಸುವಿಕೆಯನ್ನು ಅಲ್ಪಸ್ವಲ್ಪವಾದರೂ ಉಳಿಸಬಹುದೇನೋ...? ನಿಮಗೊ ಹಾಗೊ ಹೇಮಂತ್ ರವರಿಗೊ ನಮ್ಮ ಧನ್ಯವಾದಗಳು

Guruprasad said...

ರೂಪಶ್ರಿ,
ತುಂಬ ಒಳ್ಳೆ ಮಾಹಿತಿ....... ಎಸ್ಟೋ ಮರಗಳ ಬಗ್ಗೆ ಅರ್ಥಪೂರ್ಣ ವಿಷಯ ತಿಳಿದುಕೊಂಡ ಹಾಗೆ ಆಯಿತು.... ಬಾವ್ಬಾಬ್ ಮರವನ್ನೂ ನೋಡಬೇಕೆನಿಸಿದೆ......2nd ಫೋಟೋ ಮಾತ್ರ ತುಂಬ ವಿಸ್ಮಯವಾಗಿ ಇದೆ.....
tree ಸರ್ಕಸ್ ನ ಕೆಲವೊಂದು mails ನನಗು ಬಂದಿತು....
ಒಳ್ಳೆ ಚಿತ್ರ ಲೇಖನ... ಮುಂದುವರಿಸಿ..... :-)
ಗುರು

PARAANJAPE K.N. said...

ಮೊದಲಿಗೆ ನಿಮ್ಮ ಬ್ಲಾಗಿಗೆ ಬ೦ದೆ, ಅಪರೂಪದ ಆಕೃತಿಯ, ವಿನ್ಯಾಸದ ಮರಗಳ ಚಿತ್ರ, ಅವುಗಳ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟಿದ್ದಿರಿ. ಚೆನ್ನಾಗಿದೆ. ಸ೦ತೋಶವಾಯಿತು.

L'Étranger said...

ತುಂಬಾ ಒಳ್ಳೆ ಲೇಖನ, ರೂಪಾ! ಹೇಮಂತರ ಪ್ರಭಾವ ತುಂಬಾ ಚೆನ್ನಾಗಿ ಆಗಿರೋದು ಕಾಣ್ತಾ ಇದೆ! ಅದು ಹೀಗೇ ಮುಂದುವರೆಯಲಿ. ಅವರ scientific journals ಅಂತೂ ನನಗೆ ಅರ್ಥ ಆಗಲ್ಲ -- ಅವರಿಗೆ ಪಾಂಡಿತ್ಯ ಇರುವ ವಿಷಯಗಳ ಬಗ್ಗೆ ನೀನು ಇಷ್ಟು ಸೊಗಸಾಗಿ ಬರೀತಿದ್ರೆ ಅವರ journals ಓದುವ ಕಷ್ಟ ಕೂಡಾ ನನಗಿಲ್ಲ :-)

ರೂpaश्री said...

ಮನಸು ಅವರೆ,
ನಿಮ್ಮ ಅನಿಸಿಕೆಗೆ ನನ್ನ ಧನ್ಯವಾದಗಳು. ಹೌದು ನಾವು ಉರುಳಿಸುವ ಪ್ರತಿಯೊಂದು ಮರದ ಬದಲಿಗೆ ಒಂದು ಸಸಿ ನೆಟ್ಟು ಪೋಷಿಸಿದರೆ ಸ್ವಲ್ಪ ಮಟ್ಟಿಗೆ ಮರಗಳನ್ನು ಕಾಪಾಡ ಬಹುದು ಅನ್ನಿಸುತ್ತೆ!
ಬರ್ತಾಯಿರಿ...

ರೂpaश्री said...

ಗುರು,
ಸರಿ ಮತ್ತೆ ನಿಮ್ಮ ಮುಂದಿನ ಟ್ರಿಪ್ ಸವಣೂರಿಗೆ ಹಾಕಿ.. ನಿಮ್ಮಿಂದ ಅಲ್ಲಿ ಮರದ ಫೋಟೋಸ್ ದರ್ಶನ ನಮಗೂ ಆಗಲಿ!! ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಸದಾ ಇರಲಿ.

ರೂpaश्री said...

ಪರಾಂಜಪೆ ಅವರೆ,
ಬ್ಲಾಗಿಗೆ ಸ್ವಾಗತ!! ಲೇಖನ ಮೆಚ್ಚಿ, ಸಂತೋಷವಾಯ್ತು ಅಂತ ತಿಳಿಸಿದಕ್ಕೆ ನನ್ನ ಧನ್ಯವಾದಗಳು.

ರೂpaश्री said...

ಥ್ಯಾಂಕ್ಸ್ ಶ್ರೀಕಾಂತ್ ಅಣ್ಣ! ಅವರೇ ಬ್ಲಾಗಿಸಲಿ ಅಂತ ಇಷ್ಟು ದಿನ ಕಾಯ್ದೆ, ಆದ್ರೆ ಅವರಿಗೆ ಬಿಡುವು ಸಿಕ್ಕೋ ಹಾಗೇ ಇಲ್ಲಾ.. ಕೊನೆಗೆ ಸೋತು ನಾನೇ ಪೋಸ್ಟ್ ಮಾಡಿ ಬಿಟ್ಟೆ:-)

shivu.k said...

ರೂಪ,

ವಾಹ್! ನೋಡುತ್ತಾ ಮನಸ್ಸಿಗೆ ತುಂಬಾ ಖುಷಿಯಾಯಿತು...ಮರಗಳ ಫೋಟೋಗಳು ಮತ್ತು ಅವುಗಳ ಬಗ್ಗೆ ನೀವು ಕೊಟ್ಟಿರುವ ಮಾಹಿತಿ, ಇರುವ ಸ್ಥಳ ಎಲ್ಲಾ ಚೆನ್ನಾಗಿದೆ. ತುಂಬಾ ವಿಚಾರವನ್ನು ತಿಳಿದುಕೊಂಡ ಹಾಗೆ ಆಯಿತು. ವಿಡಿಯೋಗಳು ಚೆನ್ನಾಗಿವೆ. ವಿಚಿತ್ರ ಆಕಾರದ ಮರಗಳನ್ನು ನೋಡಿದಾಗ ನಗು ಬಂತು. ಮತ್ತು ದೇವರ ಸೃಷ್ಟಿಗೆ ಸಲಾಂ ಅನ್ನಬೇಕೆನ್ನಿಸಿತು..

ಇದನ್ನೆಲ್ಲಾ ನಿಮಗೆ ಒದಗಿಸಿದ ಹೇಮಂತ್‌‍ರವರಿಗೂ ಮತ್ತು ಇದನ್ನು ನೋಡುವ ಅವಕಾಶ ಮಾಡಿಕೊಟ್ಟ ನಿಮಗೂ ನನ್ನ ಧನ್ಯವಾದಗಳು..

Ittigecement said...

ರೂಪಶ್ರೀಯವರೆ...

ಅಪರೂಪದ ಮರಗಳ..
ಚಿತ್ರದೊಂದಿಗೆ..
ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದೀರಿ...

ನನ್ನ ಮಗನಿಗೆ ಇವುಗಳ ಬಗೆಗೆ ತಿಳಿಕೊಟ್ಟೆ..
ಧನ್ಯವಾದಗಳು..
ಹಾಗೂ
ಅಭಿನಂದನೆಗಳು...
(ಹೇಮಂತರಿಗೂ ತಿಳಿಸಿ)

Unknown said...

ರೂಪಶ್ರಿಯವರೇ ಒಳ್ಳೆಯ ಚಿತ್ರಲೇಖನವನ್ನು ದಯಪಾಲಿಸಿದ್ದೀರಿ. ನೋಡಲು ಓದಲು ಖುಷಿಯಾಯಿತು. ನಿಜವಾಗಿಯೂ ವಿಸ್ಮಯ ವೃಕ್ಷಗಳು. ಸೃಷ್ಟಿಯ ಒಡಲಲ್ಲಿ ಇನ್ನೂ ಏನೇನಿದೆಯೋ!

jithendra hindumane said...

good photography....

ಶಿವಪ್ರಕಾಶ್ said...

surprising trees.
thank you for the informative article.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಮರಗಳ ಬಗ್ಗೆ ಮಾಹಿತಿ ಬಹಳ ಚೆನ್ನಾಗಿದೆ.

ಜಲನಯನ said...

ರೂಪಶ್ರೀ ಯವರೇ,
ವೃಕ್ಷ-ಸದೃಶ್ಯ ಅಂದರೆ ತಪ್ಪಲ್ಲ, ಒಳ್ಳೆಯ ಚಿತ್ರಗಳು...ಶಿವು ಇವನ್ನು ಮೆಚ್ಚುವುದರಲ್ಲಿ ಅವರ ಅಭಿರುಚಿಯ ಸಾಕ್ಷಿಯಿದೆ..
ಹಲವಾರು ಸಸ್ಯ-ನಕಾಶೆಯ ಮಾದರಿಗಳನ್ನು ಮುಂದಿಟ್ಟು ಬ್ಲಾಗ್ ನ ವೈವಿಧ್ಯತೆಗೆ ಕಾರಣೀ ಭೂತ ಕಾಣಿಕೆ ನೀಡಿದ್ದೀರಿ, ಮುಂದುವರೆಯಲಿ...

ಜಲನಯನ said...

ರೂಪಶ್ರೀ ಯವರೇ,
ವೃಕ್ಷ-ಸದೃಶ್ಯ ಅಂದರೆ ತಪ್ಪಲ್ಲ, ಒಳ್ಳೆಯ ಚಿತ್ರಗಳು...ಶಿವು ಇವನ್ನು ಮೆಚ್ಚುವುದರಲ್ಲಿ ಅವರ ಅಭಿರುಚಿಯ ಸಾಕ್ಷಿಯಿದೆ..
ಹಲವಾರು ಸಸ್ಯ-ನಕಾಶೆಯ ಮಾದರಿಗಳನ್ನು ಮುಂದಿಟ್ಟು ಬ್ಲಾಗ್ ನ ವೈವಿಧ್ಯತೆಗೆ ಕಾರಣೀ ಭೂತ ಕಾಣಿಕೆ ನೀಡಿದ್ದೀರಿ, ಮುಂದುವರೆಯಲಿ...

ರೂpaश्री said...

ಶಿವು,

ಎಂದಿನಂತೆ ನಿಮ್ಮ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು. ಇದರಲ್ಲಿ ಕೆಲವನ್ನಾದರೂ ಕಣ್ಣಾರೆ ನೋಡಿ ಸಂತೋಷ ಪಡುವ ಆಸೆಯಿದೆ, ನೋಡೋಣ!
ಹೇಮಂತ್ ನಿಮಗೆ ಪ್ರತ್ಯಭಿನಂದನೆಗಳನ್ನು ತಿಳಿಸಿದ್ದಾರೆ:)

ರೂpaश्री said...

ಪ್ರಕಾಶ್ ಅವರೆ,
ಪೋಸ್ಟ್ ಅನ್ನು ಮೆಚ್ಚಿ ಬರೆದಕ್ಕೆ ವಂದನೆಗಳು!! ಮಗರಾಯನಿಗೆ ತೋರಿಸಿದ್ರಾ ಒಳ್ಳೇದು.
ಹೇಮಂತ್ ಉಬ್ಬಿ ಹೋದ್ರು ಇಷ್ಟೆಲ್ಲಾ ಅಭಿನಂದನೆಗಳನ್ನು ಕೇಳಿ:-)

ರೂpaश्री said...

ಸತ್ಯ ಸರ್,
ಕಮೆಂಟಿಸಿದಕ್ಕೆ ಧನ್ಯವಾದಗಳು. ನಿಜ, ಪ್ರಕೃತಿಯ ಒಡಲಿನಲ್ಲಿ ಬಹಳಷ್ಟು ವಿಸ್ಮಯಗಳಿವೆ.. bbc planet earth ನೋಡ್ತಾಯಿದ್ರೆ ಅವುಗಳಲ್ಲಿ ಕೆಲವುದರ ಪರಿಚಯವಾಗುತ್ತೆ:)

ರೂpaश्री said...

ಜಿತೇಂದ್ರ ಅವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ಇವು ನಾನು ತೆಗೆದ ಫೋಟೋಗಳಲ್ಲ!

ರೂpaश्री said...

ಥ್ಯಾಂಕ್ ಯೂ ಅಗ್ನಿ ಅವರೆ!

ರೂpaश्री said...

ಜಲನಯನ ಅವರೆ,
’ವೃಕ್ಷ-ಸದೃಶ್ಯ’ಒಳ್ಳೆಯ ಟೈಟಲ್ ಸೂಚಿಸಿದ್ದೀರಿ!!
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

Sreevidya said...

Roopa,
thumba chennagi ee mahitiyanna sangrahisi barediddeera. ee vismaya maragalannu nodi, adara bagge odi khushi ayitu :)

ದೀಪಸ್ಮಿತಾ said...

ರೂಪಾಶ್ರೀ, ಅಬ್ಬಾ ಇಷ್ಟೊಂದು ವಿಚಿತ್ರ ಮರಗಳ ಮಾಹಿತಿ ಎಲ್ಲಿಂದ ಸಿಕ್ಕಿತು? ನಿಮ್ಮ ಸಂಗ್ರಹಕ್ಕೆ ಧನ್ಯವಾದಗಳು

Pramod said...

ಒಳ್ಳೆ ಕೆಲಸ ಮಾಡ್ತಾ ಇದ್ದೀರಾ.. :) ಒಳ್ಳೆಯ ಮಾಹಿತಿ

ರೂpaश्री said...

ಥ್ಯಾಂಕ್ಸ್ ವಿದ್ಯಾ! ನಾನು ಮೊದಲೇ ಹೇಳಿದಂತೆ ಈ ಮಾಹಿತಿಯ credit ಹೇಮಂತ್ ಗೇ ಸಲ್ಲಬೇಕು...

ರೂpaश्री said...

ದೀಪಸ್ಮಿತಾ ಆವ್ರೆ,
ನನ್ನ ಬ್ಲಾಗಿಗೆ ಸ್ವಾಗತ! ವಿಷಯ ಹೇಮಂತ್ ರಿಂದ ಕಲಿತೆ, ಫೋಟೋ ಗೂಗಲ್ ದೇವರ ಕೃಪೆ!

ರೂpaश्री said...

ಥ್ಯಾಂಕ್ ಯೂ ಪ್ರಮೋದ್ ಅವರೆ!

ಸೀತಾರಾಮ. ಕೆ. / SITARAM.K said...

Nice information. thanks for both of you.

ರೂpaश्री said...

Thank you sitaram sir!

Anonymous said...

ಮೇಡಂ,
ಬಹಳ ಉಪಯುಕ್ತವಾದ ಮಾಹಿತಿ, ವೃಕ್ಷೋ ರಕ್ಷಿತಿ ರಕ್ಷಿತಃ.
ನಿಮ್ಮ ವೃಕ್ಷ ಪ್ರೀತಿ ಹೀಗೇ ಮುಂದುವರಿಯಲಿ.
ನನಗೆ ಇಂತಹ ಮರ ಬೆಳೆಸಬೇಕೆಂಬ ಮಹಾದಾಸೆ, ಸವಣೂರು ಮಾಹಿತಿ ತುಂಬಾ ಚೆನ್ನಾಗಿದೆ, ಹಾಗೆಯೇ ಇಂತಹ ಮರದ ಬೀಜಗಳ ಬಗ್ಗೆ ನಮಗೆ ಗೊತ್ತಿಲ್ಲ, ದಯವಿಟ್ಟು ಅದರ ಬಗ್ಗೆ ಮಾಹಿತಿ ಬರೆಯಿರಿ ಎಂದು ವಿನಂತಿ.
ನಿಮ್ಮ ಬ್ಲಾಗೊದುಗ
ನಂದಿ.