Tuesday, August 11, 2009

ಕವನಕ್ಕೆ ಶೇಪ್!!

ಕೆಲವು ದಿನಗಳ ಹಿಂದೆ ಡಿಸೈನರ್ ಕವಿತೆಗಳ ಬಗ್ಗೆ ಬರೆದಿದ್ದೆ. ಅದನ್ನೋದಿದ ಸ್ನೇಹಿತರು ಅದೇ ರೀತಿ ಪ್ರಯತ್ನಿಸಲು ಉತ್ತೇಜಿಸಿದರು. ನನ್ಗೆ ಕವನ ಬರಿಯೋಕೇ ಬರೋಲ್ಲ ಅಂಥದ್ರಲ್ಲಿ ಶೇಪ್ಡ್ ಕವಿತೆ ಇನ್ನೆಲ್ಲಿ ಅಂತ ನನ್ನ್ ಪಾಡಿಗೆ ಸುಮ್ನಿರೋದು ಬಿಟ್ಟು, ಅವರಿವರ ಕವನಕ್ಕೆ ಶೇಪ್ ಕೊಡೋಣ ಅಂತ ಕೂತೆ.

ಮೊದಲು ಸುಬ್ರಮಣ್ಯ ಭಟ್ಟರ ಮೀನು ನನ್ನ ಕೈಸೇರಿ ಹೀಗಾಯ್ತು...(ಕವನದ ಮೇಲೆ ಕ್ಲಿಕ್ ಮಾಡಿದ್ರೆ ದೊಡ್ಡದಾಗಿ ತೆರೆದುಕೊಳ್ಳುತ್ತೆ, ಓದಲು ಸುಲಭ)ಇದು ಸ್ವಲ್ಪ ಸುಮಾರಾಗಿ ಮೂಡಿದ್ದರಿಂದ ’ಮರ’ ಬರೆಯೋಣವೆನಿಸಿ ನಾನೇ ಪದಗಳ ಪೋಣಿಸಲು ಕೂತು, ಸೋತು ಕೊನೆಗೆ ಪು.ತಿ.ನ ಅವರ ಕವನವನ್ನು ಅರುಣ್ ಪ್ರಕಟಿಸಿದ್ದನ್ನು ಓದಿ ಅದಕ್ಕೆ ಈ ಅವತಾರ ಮಾಡಿಟ್ಟೆ.ಮುಂದೆ ಯಾರ ಕವನಕ್ಕೆ ಗ್ರಹಚಾರ ಕಾದಿದೆಯೋ ಕಾದು ನೋಡಿ !

ಮೀನುಗಾರಿಕೆಯಲ್ಲಿ ಡಾಕ್ಟರೇಟ್ ಪಡೆದ ಡಾ. ಆಜಾದ್ ಅವರು ರಚಿಸಿದ ಮೀನು ಅವರ "ಭಾವ-ಮಂಥನ" ದಲ್ಲಿ.

22 comments:

Guru's world said...

Amezing,. ಸೂಪರ್ ರೂಪಶ್ರಿ.....ಸಕತ್ ಆಗಿ ಇದೆ.......Its really interesting..

ಕ್ಷಣ... ಚಿಂತನೆ... Think a while said...

ರೂಪಶ್ರೀ ಮೇಡಂ, ಕವನಕ್ಕೆ ಶೇಪು ಕೊಟ್ಟಿರುವ ನಿಮ್ಮ ಪ್ರಯತ್ನ ಚೆನ್ನಾಗಿಯೇ ಮೂಡಿಬಂದಿದೆ. ಇಂತಹದು ಮತ್ತಷ್ಟು ಮೂಡಿಬರಲಿ.

ಧನ್ಯವಾದಗಳು.

ಮನಸು said...

wonderfulllllllll!!! tumba tumba chennagide

ವಿ.ರಾ.ಹೆ. said...

WOW, FANTASTIC !

BEUTIFUL EXPERIMENT. KAVANAKKE SHAPE!

shivu said...

ರೂಪಶ್ರೀ....

ಒಂಥರ ಚೆನ್ನಾಗಿದೆ ಅನ್ನಿಸುತ್ತೆ....ನೋಡೋಣ ಇನ್ನು ಏನೇನು ಮಾಡುತ್ತೀರೋ ಅಂತ...

Sumana said...

Roopashri,

This is the first tiem i hav visited ur blog and saw this post abt 'shaped poems'!! and i am completely 'bowled over'!!! now i am a 'follower' too :)
nice work!!

ರೂpaश्री said...

ಗುರು,
ಚಂದ್ರಶೇಖರ್
ಮತ್ತು ಶಿವು ಅವರುಗಳೇ,

ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು! ಸಾಹಿತ್ಯ ವಿಷಯಕ್ಕೆ ಬಂದ್ರೆ ಅಡ್ಡ್ ಕಸ್ಬಿ ನಾನು.. ಸುಮ್ನಿರಲಾರದೆ ಏನೋ ಮಾಡಿದ್ರೂ ಹೊಗಳಿ ಚೆನ್ನಾಗಿದೆ ಅಂತ ಹುರಿದುಂಬಿಸ್ತೀರ:)

ರೂpaश्री said...

ಮನಸು,
ನನ್ನ ಬ್ಲಾಗಿಗೆ ಸ್ವಾಗತ!! ನನ್ನೀ ಪ್ರಯತ್ನ ಮೆಚ್ಚಿದಕ್ಕೆ ಧನ್ಯವಾದಗಳು, ನೀವೂ ಪ್ರಯತ್ನಿಸಿ:)

ರೂpaश्री said...

Welcome to my blog vikas! Thanks a lot for ur appreciative words:)

ರೂpaश्री said...

Sumana,
I am honoured. Thanks for all your encouragement!!

ಸಾಗರದಾಚೆಯ ಇಂಚರ said...

ರೂಪಶ್ರಿ,

ಆದರೆ ಇ ರೀತಿ ನೀವು ಮಾಡುವುದರಿಂದ ಕವನಗಳ ಪ್ರಾಸಗಳು ಅದಲು ಬದಲಾಗಿ ಓದುವುದೇ ಕಷ್ಟ ಎನಿಸುವುದಿಲ್ಲವೇ?
ಆದ್ರೆ ಕವನ ಶೀರ್ಷಿಕೆಗೂ ನೀವು ಅದಕ್ಕೆ ಕೊಟ್ಟ ರೂಪಕ್ಕೂ ಒಳ್ಳೆಯ ಹೊಂದಾಣಿಕೆ, ಸೂಪರ್

ಮಹೇಶ್ said...

ರೂಪಶ್ರೀ....
ಕವನಕ್ಕೆ ತಕ್ಕ ಆಕಾರ....
ಬಹಳ ಚೆನ್ನಾಗಿ ಮೂಡಿ ಬಂದಿದೆ .....
ಇನ್ನಷ್ಟು ಬರಲಿ.....

ಎಚ್.ಎನ್. ಈಶಕುಮಾರ್ said...

ಕವನದಲಿ ನೀವು ಮಾಡಿರೋ ಪ್ರಯೋಗ ನಿಜಕ್ಕೂ ಅದ್ಭುತವಾಗಿದೆ,ಹಾಗೆ ನಿಮ್ಮ ಕವನವು ಸೊಗಸಾಗಿದೆ...ಒಮ್ಮೆ ನನ್ನ ಬ್ಲಾಗ್ ನೋಡಿ sahayaatri.blogspot.com

ರೂpaश्री said...

ಸಾಗರದಾಚೆಯ ಇಂಚರ,
ಇದು ಮಕ್ಕಳಿಗೆ ಕವನಗಳಲ್ಲಿ ಆಸಕ್ತಿ ಮೂಡಲಿ ಅನ್ನೋ ಉದ್ದೇಶದಿಂದ ಶುರುವಾಗಿರೋದು. ನಾನು ಸುಮ್ನೆ ಪ್ರಯತ್ನಿಸಿದ್ದು!
ಹೌದು ಓದಲು ಕಷ್ಟವೆನಿಸುತ್ತದೆ,ಪ್ರಾಸವನ್ನು ಕಾಪಾಡುವ ಪ್ರಯತ್ನ ಮಾಡಬಹುದು.. ಮುಂದಿನ ಯತ್ನದಲ್ಲಿ ನಿಮ್ಮ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುವೆ:)

ರೂpaश्री said...

ಧನ್ಯವಾದಗಳು ಮಹೇಶ್!

ರೂpaश्री said...

ಈಶ್ ರವ್ರೆ,
ನನ್ನ ಪ್ರಯತ್ನ ಮೆಚ್ಚಿದಕ್ಕೆ ಥ್ಯಾಂಕ್ಸ್! ಅಂದ ಹಾಗೆ ಅದು ನಾನು ಬರೆದ ಕವನವಲ್ಲ.

ಜಲನಯನ said...

ರೂಪश्री ಮೇಡಂ
ಬಹಳ ಚನ್ನಾಗಿ ಮೂಡಿದೆ ಕವನ ಶೇಪ್ ನೊಳಕ್ಕೆ ತೂರಿಸಿದ್ದೀರಿ, ನೀವೂ ಫೋಟೋ ಶಾಪ್ ಉಪಯೋಗಿಸಿದಿರಾ ಹೇಗೆ?
ಬೇರೆ ಪ್ರೊಗ್ರಾಂ ಗಳನ್ನು ಬಲಸಲು ಪ್ರಯತ್ನಿಸುತ್ತೇನೆ ನಾನೂ ಸಹ. ಈ ಸರಣಿಯ ಪ್ರಾರಂಭದ ಶ್ರೇಯ ನಿಮಗೇ...ನಮನ
ಗೌರಿ-ಗಣೇಶನ ಹಬ್ಬದ ಶುಭಕಾಮನೆಗಳು

sitaram said...

ಮಕ್ಕಳಿಗೆ ಪದ್ಯದಲ್ಲಿ ಆಸಕ್ತಿ ಮುಡಿಸುವ ತಮ್ಮ ಈ ವಿನೂತನ ಪ್ರಯತ್ನಕ್ಕೆ ಅಭಿನ೦ದನೆಗಳು.

ರೂpaश्री said...

ಆಜಾದ್ ಅವರೆ,
ನನ್ನೀ ಬಾಲಿಶ ಪ್ರಯತ್ನವನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್. ನನಗೆ ಫೋಟೋಶಾಪ್ ನಲ್ಲಿ ಕನ್ನಡದಲ್ಲಿ ಟೈಪ್ ಮಾಡಲು ಆಗುತ್ತಿಲ್ಲ, ನಿಮ್ಮಿಂದ ಆ ವಿಚಾರ ಕಲಿತುಕೊಳ್ಳಬೇಕು. ನಾನೀ ಕವನಗಳನ್ನು ಪವರ್ ಪಾಯಿಂಟ್ ನಲ್ಲಿ ಟೈಪ್ ಮಾಡಿ, JPEG ಆಗಿ ಸೇವ್ ಮಾಡಿಟ್ಟುಕೊಂಡಿರುವೆ!

ರೂpaश्री said...

ಸೀತಾರಾಮ್ ಸರ್,
ನನ್ನ ಪ್ರಯತ್ನವನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್. ನನ್ನ ಮುಂಚಿನ ಲೇಖನದಲ್ಲಿ ತಿಳಿಸಿದಂತೆ ಈ ರೀತಿಯಾದ ಪ್ರಯತ್ನಗಳು ಮುಂಚೆನೂ ಆಗಿವೆ:)

Prabhuraj Moogi said...

ನಿಮ್ಮ ಹೆಸರೇ ರೂಪಶ್ರಿ, ಅದರಂತೆ ರೂಪ ಕೊಟ್ಟಿರುವಿರಿ. ಕವನಗಳೇ ಚೆನ್ನ ಇನ್ನು ಅವಕ್ಕೆ ಅದೇ ರೂಪ ಬೇರೆ ಬಂದರೆ, ಮರದ ಕವನ ಮರವಾಗಿದೆ... ಬಹಳ ಚೆನ್ನಗಿದೆ, ಆಜಾದ ಅವರ ಕವನ ಓದಿದ್ದೆ, ಇದು ನೋಡಿ ಇನ್ನೂ ಖುಷಿಯಾಯಿತು.

ರೂpaश्री said...

ಪ್ರಭ ಅವರೆ,
ನನ್ನೀ ಪ್ರಯತ್ನವನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್! ಇದರ ಹಿಂದಿನ ಲೇಖನ ’ಡಿಸೈನರ್ ಕವಿತೆಗಳು’ ಓದಿ ನಿಮಗಿಷ್ಟವಾಗಬಹುದು.. ಹಾಗೆ ನೀವು ಪ್ರಯತ್ನ ಮಾಡಿ!