Pages

Thursday, October 15, 2009

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು!

ಮನೆ ಮನವ ಬೆಳಗಲು ಮತ್ತೆ ಬಂದಿದೆ ದೀಪಾವಳಿ. ಜ್ಞಾನದ ಅಂಧಕಾರ ಅಳಿಸಿ, ಅರಿವನು ಅರಳಿಸುವ ಹಣತೆಗಳು ಎಲ್ಲೆಲ್ಲೂ ಬೆಳಗಲಿ:)

ವಾರಾಂತ್ಯದಲ್ಲಿ ಬಂದಿರುವುದರಿಂದ ಗೆಳೆಯರ ಜೊತೆಗೂಡಿ ಹಬ್ಬ ಆಚರಿಸಬಹುದು. ಕಳೆದ ವರ್ಷ ನನ್ನ ಕೆಲವು ಸ್ನೇಹಿತೆಯರು ಮಾಡಿದ್ದ ಬಣ್ಣಬಣ್ಣದ ದೀಪಗಳ ಫೋಟೋ ಮತ್ತೆ ಕೆಲವು ದೀಪಾವಳಿ ಹಾಡುಗಳನ್ನು ಇಲ್ಲಿ ಹಂಚಿಕೊಂಡಿದ್ದೆ. ಈ ವರ್ಷ ನಾನೂ ಕೂಡ ಮಕ್ಕಳಾಟದ ಮಣ್ಣಿನಿಂದ(Play Dough) ಕೆಲವು ದೀಪಗಳನ್ನು ಮಾಡಿರುವೆ ನೋಡಿ!
ಹಾಗೆಯೆ, ನಿಂತು ಹೋಗಿರುವ ಹೇಮಂತರ ಬ್ಲಾಗನ್ನು ಸದ್ಯಕ್ಕೆ ನಾನೆ ಮುಂದುವರೆಸುವೆ. ಹಬ್ಬಕ್ಕೆಂದು ಅಲ್ಲೊಂದು ಲೇಖನ ಬರೆದಿರುವೆ ಓದಿ/ ನೋಡಿ ಬನ್ನಿ. Deepavali wishes on stamps

ಕೆ.ಎಸ್.ನರಸಿ೦ಹಸ್ವಾಮ ಈ ಕವನ ನಿಮ್ಮೊ೦ದಿಗೆ ಹ೦ಚಿ ಕೊಳ್ಳುವ ಆಸೆಯಾಯ್ತು.

ದೀಪಾವಳಿ


ಹೂವು ಬಳ್ಳಿಗೆ ದೀಪ
ಹಸಿರು ಬಯಲಿಗೆ ದೀಪ
ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ !


ಮುತ್ತು ಕಡಲಿಗೆ ದೀಪ
ಹಕ್ಕಿ ಗಾಳಿಗೆ ದೀಪ
ಗ್ರಹತಾರೆಗಳ ದೀಪ ಬಾನಿನಲ್ಲಿ.

ಬಲ್ಮೆ ತೋಳಿಗೆ ದೀಪ
ದುಡಿಮೆ ಬೆವರಿನ ದೀಪ
ಸಹನೆ ಅನುಭವ ದೀಪ ಬದುಕಿನಲ್ಲಿ !

ಮುನಿಸು ಒಲವಿಗೆ ದೀಪ
ಉಣಿಸು ಒಡಲಿಗೆ ದೀಪ
ಕರುಣೆ ನ೦ದಾ ದೀಪ ಲೋಕದಲ್ಲಿ

ತೋರಣನ ತಳಿರಲ್ಲಿ
ಹೊಸಿಲ ಹಣತೆಗಳಲ್ಲಿ
ಬಾಣಬಿರು ಸುಗಳಲ್ಲಿ ನಲಿವು ಮೂಡಿ !


ಕತ್ತಲೆಯ ಪುಟಗಳಲಿ
ಬೆಳಕಿನಕ್ಷತ್ರಗಳಲಿ
ದೀಪಗಳ ಸ೦ದೇಶ ಥಳಿಥಳಿಸಲಿ.

ಬೆಳಕಿನಸ್ತಿತ್ವವನೆ
ಅಣಕಿಸುವ ಕತ್ತಲೆಗೆ
ತಕ್ಕ ಉತ್ತರವಲ್ಲಿ ಕೇಳಿಬರಲಿ !


ದೀಪಾವಳಿಯ ಜ್ಯೋತಿ
ಅಭಯ ಹಸ್ತವನೆತ್ತಿ
ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ.

18 comments:

Ittigecement said...

ರೂಪಾಶ್ರೀಯವರೆ...

ದೂರದಲ್ಲಿದ್ದೂ...
ನಮ್ಮ ಹಬ್ಬಗಳನ್ನು..
ಸಂಭ್ರಮಿಸಿ.. ಆಚರಿಸುವ..
ನಿಮ್ಮ ಸಡಗರ ಕಂಡು ಖುಷಿಯಾಗುತ್ತದೆ...

ಬೆಳಕಿನ ಹಬ್ಬ...
ಕತ್ತಲೆ ಓಡಿಸಿ...
ಬದುಕಲ್ಲಿ ಬೆಳಕನ್ನು ತರಲಿ....

ನಿಮಗೂ...
ನಿಮ್ಮನೆಯವರಿಗೂ.... ಪುಟ್ಟಿಗೂ...

ನಿಮ್ಮ ಬ್ಲಾಗ್ ಓದುಗರಿಗೂ...
ಸರ್ವರಿಗೂ...
ದೀಪಾವಳಿಯ...
ಶುಭಾಶಯಗಳು...

Lakshmi said...

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

shivu.k said...

ರೂಪಶ್ರೀಯವರೆ,

ಸದ್ಯ ಬಿಡುವಿಲ್ಲದ ಕೆಲಸದ ನಡುವೆಯೂ ನಮ್ಮ ಹಬ್ಬಕ್ಕಾಗಿ ನಾಲ್ಕು ಸಾಲು ಬರೆಯುವುದು, ದೂರದಲ್ಲಿದ್ದುಕೊಂಡೆ ನಮ್ಮನ್ನೆಲ್ಲಾ ವಿಚಾರಿಸಿಕೊಳ್ಳುವುದು, ಆರೈಸುವುದು ಮಾಡುವ ನಿಮಗೆ ಧನ್ಯವಾದಗಳು.

ನಿಮ್ಮ ಕುಟುಂಬದವರಿಗೆಲ್ಲಾ ದೀಪಾವಳಿ ಹಬ್ಬದ ಶುಭಾಶಯಗಳು.

ಕ್ಷಣ... ಚಿಂತನೆ... said...

ರೂಪಶ್ರೀಯವರೆ,

ದೂರದೂರಿನಲ್ಲಿ ಹಬ್ಬದ ಸಡಗರ, ಕವನ ಎಲ್ಲವನ್ನೂ ಸರಳವಾಗಿ ಬರೆದಿರುವಿರಿ. ನಿಮ್ಮ ಬಿಡುವಿಲ್ಲದ ಸಮಯಗಳ ನಡುವೆಯೂ ನಿಮ್ಮ ಬರವಣಿಗೆ, ಹಬ್ಬದ ಸಂಭ್ರಮಾಚರಣೆ ಇವು ಖುಷಿಕೊಡುತ್ತವೆ.

ನಿಮಗೂ, ನಿಮ್ಮ ಕುಟುಂಬ ಸದಸ್ಯರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ವಿನಾಯಕ ಹೆಬ್ಬಾರ said...

ರೂಪಶ್ರೀಯವ್ರೆ,
ಚೆಂದದ ಬರಹಕ್ಕೆ ಅಭಿನಂದನೆ.....
ನಿಮ್ಮ ಹಾರೈಕೆಗೆ ಧನ್ಯವಾದಗಳು...
ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು...

Manju M Doddamani said...

ನಮಸ್ತೆ ಮೇಡಂ :)

ನಿಮ್ಮ ಬರವಣಿಗೆ ತುಂಬಾ ಹಿಡಿಸ್ತು,
ನಿಮಗೂ, ನಿಮ್ಮ ಕುಟುಂಬ ಸದಸ್ಯರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಸವಿಗನಸು said...

ಶುಭಾಷಯ ಕವನ ಚೆನ್ನಾಗಿದೆ...
ನಿಮಗೆ ಮತ್ತು ನಿಮ್ಮ ಕುಟುಂಬದವರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಷಯಗಳು...

Guruprasad said...

ರೂಪಶ್ರಿ,
ನಿಮಗೂ ಹಾಗು ನಿಮ್ಮ ಪರಿವಾರದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು .
ನೀವು ಇಲ್ಲಿ ಇಲ್ಲದಿದ್ದರೂ ನಿಮ್ಮ ಸಂಭ್ರಮ ನೋಡಿ ನಮಗೂ ಕುಶಿ ಆಗಿದೆ.. ಬೆಳಕಿನ ಹಬ್ಬ ನಿಮಗೆಲ್ಲರಿಗೂ ಸಂತೋಷ ವನ್ನು ತರಲಿ ಎಂದು ಹಾರೈಸುವೆ

Guru

ಸಾಗರದಾಚೆಯ ಇಂಚರ said...

ರೂಪಶ್ರಿ,
ಹಬ್ಬದ ಶುಭಾಶಯಗಳು

ರೂpaश्री said...

ಪ್ರಕಾಶ್ ಅವರೆ,
ನಿಮಗೂ ಹಬ್ಬದ ಶುಭಾಶಯಗಳು!! ಎಲ್ಲೆದ್ದಿದ್ದರೂ ನಮ್ಮತನ ಬಿಡೋಕೆ ಆಗೊಲ್ಲ ಅಲ್ಲ್ವಾ ಸಾರ್, ಇಲ್ಲಿ ದೀಪಗಳು ಸಿಗೊಲ್ಲ, ಅದ್ಕೆ ನಾನೇ ಮಾಡಿಕೊಂಡೆ ಅಥವಾ ಕ್ಯಾಂಡಲ್ ಹಚ್ಚಿ ಹಬ್ಬ ಮಾಡೋದು:))
ನನ್ನ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ನೀವೂ ಖುಷಿಪಟ್ಟಿದಕ್ಕೆ ವಂದನೆಗಳು:)

ರೂpaश्री said...

ಲಕ್ಷ್ಮಿ ಅವರೆ,
ಇದು ನಿಮ್ಮದೇ ಹಬ್ಬ ಅಲ್ವಾ:)

ನಿಮಗೂ ಹಬ್ಬದ ಶುಭಾಶಯಗಳು!! ಅಂದ ಹಾಗೆ ನಿಮ್ಮ ಬ್ಲಾಗಿನ ಹಲಸಿನಹಲ್ವಾ ಮಾಡಿದ್ದೆ, ಚೆನ್ನಾಗಿತ್ತು ಥ್ಯಾಂಕ್ಸ್:)

ರೂpaश्री said...

ಶಿವು ಅವರೆ,

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹಬ್ಬದ ಶುಭಾಶಯಗಳು!!
ದೂರದೂರಿನಲ್ಲಿರುವುದರಿಂದಲೇ ಆಸಕ್ತಿ ಹೆಚ್ಚೇನೋ ಗೊತ್ತಿಲ್ಲ... ಆದ್ರೆ ಒಂದಂತು ನಿಜ.. ಇಲ್ಲಿ ದೀಪಗಳು ಸಿಗೊಲ್ಲ, ಅದ್ಕೆ ನಾನೇ ಮಾಡಿಕೊಂಡೆ :) ಹಾಗಾಗಿ ನನ್ನ ಕ್ರಿಯೇಟಿವಿಟಿಗೆ ಸ್ವಲ್ಪ ಕೆಲಸ ಸಿಕ್ಕಿದೆ:-)

ರೂpaश्री said...

ಚಂದ್ರಶೇಖರ್ ಅವರೆ,
ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು!!
ಪುಟ್ಟಿ ಜೊತೆಯಲ್ಲಿರುವುದರಿಂದ ನನ್ನ ಬ್ಲಾಗ್ ಕೆಲ್ಸ ಏನಿದ್ರೂ ಅವಳು ಮಲಗಿದ ಮೇಲೆನೆ.. ಆದ್ರೆ ಇತ್ತೀಚೆಗೆ ಆದೂ ಸಾಧ್ಯವಾಗಿರಲಿಲ್ಲ.

ನನಗೆ ಇಲ್ಲಿನ ಕವನ ಬರೆಯೋಕೆ ಬರೊಲ್ಲ, ಜೊತೆಗೆ ನಾನು ಸಾಹಿತ್ಯವನ್ನ ಹೆಚ್ಚು ಓದಿಲ್ಲ, ಹಾಗಾಗಿ ಈಗ ಇವುಗಳ ಬಗ್ಗೆ ಹುಡುಕ್ತಾಯಿರ್ತೀನಿ, ಸಿಕ್ಕಿ ಇಷ್ಟವಾದವನ್ನ ಇಲ್ಲಿ ಹಂಚ್ಕೊತೀನಿ:)

ನನ್ನ ಜೊತೆ ಹಬ್ಬದ ಸಂಭ್ರಮದಲ್ಲಿ ನೀವೂ ಖುಷಿಪಟ್ಟಿದಕ್ಕೆ ವಂದನೆಗಳು:)

ದೀಪಸ್ಮಿತಾ said...

ರೂಪಾಶ್ರೀ, ದೀಪಾವಳಿ ಮುಗಿದು ಒಂದು ವಾರದ ನಂತರ ಶುಭಾಷಯ ತಿಳಿಸುತ್ತಿದ್ದೇನೆ, ಬೇಸರಿಸಬೇಡಿ. ನೀವು ಕೊಟ್ಟ link ನೋಡಿ ಆಶ್ಚರ್ಯವಾಯಿತು. ನನಗೂ ಅಂಚೆ ಚೇಟಿ ಸಂಗ್ರಹಿಸುವ ಹವ್ಯಾಸವಿದೆ. ದೀಪಾವಳಿಯ ಬಗ್ಗೆಯೆ ಇಷ್ಟೊಂದು ಅಂಚೆ ಚೀಟಿಗಳಿವೆ ಎಂದು ಗೊತ್ತಿರಲಿಲ್ಲ. ಧನ್ಯವಾದಗಳು

ಸೀತಾರಾಮ. ಕೆ. / SITARAM.K said...

happy deepavali -late wish ge kshame irali

ಜಲನಯನ said...

ರೂಪश्री ನಿಮ್ಮ ದೀಪಾವಳಿ ಕವನ ಈ ಹಬ್ಬಕ್ಕೆ ಸೀಮಿತವಾಗಿರದೆ ಪ್ರತಿ ಹಬ್ಬಕ್ಕೆ ಮೆರಗನ್ನು ನೀಡುವಂಥಹುದು ಏಕೆಂದರೆ ದೀಪ ಯಾವ ಹಬ್ಬದಲ್ಲಿ ಬೆಳಗೊಲ್ಲ...?? ಶುಭವಾಗಲಿ ನಿಮಗೆ ಕುಟುಂಬಕ್ಕೆ

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

Sudha said...

Hi dear, Thanku for ur sweet comment on my blog. I wish to read ur blog too but I can't understand this language, How can I read ur blog posts?