Pages

Wednesday, April 15, 2009

ಕಣ್ಣಾ ಮುಚ್ಚೆ ಕಾಡೆ ಗೂಡೆ...

ಕಣ್ಣಾ ಮುಚ್ಚೆ ಕಾಡೆ ಗೂಡೆ
ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ
ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ

ಈ ಹಾಡು ನಮ್ಮಲ್ಲಿ ಅನೇಕರು ಚಿಕ್ಕಂದಿನಲ್ಲಿ ಹಾಡಿದ್ದೀವಿ, ಹಾಡ್ತಾ ಆಟವಾಡಿದ್ದೀವಿ. ಆದ್ರೆ ಇದರ ಹಿಂದೆ ಇರೋ ಅರ್ಥ ನನಗೆ ತಿಳಿದದ್ದು ಇತ್ತೀಚೆಗಷ್ಟೆ.
  • ಇದರ ಸಾರಾಂಶ ಹೀಗಿದೆ:
    ಉದ್ದಿನ ಮೂಟೆಯನ್ನು ಇಲ್ಲಿ ವಯಸ್ಸಾದ ಜನರಿಗೆ ಹೋಲಿಸುತ್ತಾರೆ. ವಯಸ್ಸಾದ ಜನರನ್ನು ಅವರ ಮಕ್ಕಳು ಸರಿಯಾಗಿ ನೋಡಿಕೊಳ್ಳದೆ ಅವರು ಕಾಲಾಂತರವಾದ ನಂತರ ಪರಿತಪಿಸುವುದನ್ನು ಹೇಳುತ್ತಿದ್ದಾರೆ. ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ ಅಂದರೆ, ನಮ್ಮ ಅಪ್ಪ ಅಮ್ಮಂದಿರನ್ನು ಅವರ ಮುಪ್ಪಿನ ಸಮಯದಲ್ಲಿ ಸರಿಯಾಗಿ ನೋಡಿಕೊಂಡಿಲ್ಲ ಎಂದು. ಹಾಗೆಯೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಎಂದರೆ, ನಾನಂತು ಸರಿಯಾಗಿ ನೋಡಿಕೊಳ್ಳಲಿಲ್ಲ ನೀವಾದರು ಅವರನ್ನು ಹಿಡಿದುಕೊಳ್ಳಿ ಅಂದರೆ ಸರಿಯಾಗಿ ಜೋಪಾನ ಮಾಡಿ ಎಂದು.
  • ಅಲ್ಲದೆ ಇದು ರಾಮಾಯಣದ ಕಥೆಯನ್ನೇ ಹೇಳುತ್ತದೆ ಎನ್ನತ್ತಾರೆ:
    ಕಣ್ಣಾ ಮುಚ್ಚೆ : ದಶರಥನು ಕಣ್ಣು ಮುಚ್ಚಲಾಗಿ
    ಕಾಡೆ ಗೂಡೆ : ರಾಮಿನಿಗೆ ಕಾಡೆ ಗೊಡಾಯಿತು (ವಾಸ ಸ್ಥಳವಾಯ್ತು)
    ಉದ್ದಿನ ಮೂಟೆ ಉರಳೇ ಹೋಯ್ತು : ಮೂಟೆಯಂತಹ(ದೈತ್ಯಾಕಾರದ) ರಾವಣ ಉರಳೇ ಹೋದ.
  • ಇದನ್ನ ನಮ್ಮ ಯುವಕರು ಮಾರ್ಪಡಿಸಿ ಹಾಡೋದು ಹೀಗೆ :
    ಕಣ್ಣಾ ಮುಚ್ಚೆ ಲವರ್ಸ್ ಡೇ
    ಕಾಡೇಗೂಡೇ ಡೇಟಿ೦ಗ್ ಡೇ
    ಉದ್ದಿನ ಮೂಟೇ ಪ್ರೆಗ್ನೆ೦ಟ್ಸ್ ಡೇ
    ಉರುಳೇ ಹೋಯ್ತು ಡೆಲಿವರಿ ಡೇ !!

20 comments:

Unknown said...

ನಾವೂ ಈ ಹಾಡನ್ನು ಹಾಡುತ್ತಿದ್ದೆವು. ಆದರೆ ಅದಕ್ಕೆ ಇಷ್ಟೊಂದು ಅರ್ಥವಿದೆಯೆಂದು ತಿಳಿದಿರಲಿಲ್ಲ. ಆದರೆ ನೀವು ತಿಳಿಸಿರುವ ಅರ್ಥ ತಕ್ಷಣಕ್ಕೆ ಗೋಚರಿಸುವುದಿಲ್ಲ. ಇದನ್ನು ಸಾಹಿತ್ಯದ ಪರಿಭಾಷೆಯಲ್ಲಿ ದೂರಾನ್ವಯ ಎನ್ನುತ್ತಾರೆ. ಇದೊಂದು ಅತ್ಯಂತ ಜನಪ್ರಿಯ ಶಿಶುಸಾಹಿತ್ಯ. ಿದು ಕೇವಲ ಬಚ್ಚಿಟ್ಟುಕೊಳ್ಳುವುದಕ್ಕೆ ಸೂಚಿಸುವುದು ಮತ್ತು ಅವರನ್ನು ಹಿಡಿಯುವುದಕ್ಕೆ ಸೂಚಿಸುವ ಶಿಶುಪ್ರಾಸ. ಕಾಲಾಂತರದಲ್ಲಿ ಇದಕ್ಕೆ ಈ ರೀತಿಯ ಅರ್ಥ ಅನ್ವಯಗಳು ಹುಟ್ಟಿಕೊಂಡಿರಬಹುದು. ರಾಮಾಯಣವನ್ನು ಇದಕ್ಕೆ ಅನ್ವಯಿಸಿರುವುದು ಆಶ್ಚರ್ಯವೇನಲ್ಲ. ಏಕೆಂದರೆ ಇಡೀ ಇಂಡಿಯಾದಲ್ಲಿ ಸಾವಿರಾರು ಗ್ರಾಮಗಳು ರಾಮಾಯಣದ ಕಾಲದ ಕುರುಹುಗಳನ್ನು ಒಳಗೊಂಡಿವೆ ಎಂಬ ಐತಿಹ್ಯಗಳನ್ನು ಹೇಳುವುದನ್ನು ಕೇಳಿದ್ದೇನೆ. ಹೊಸ ವಿಷಯ ತಿಳಿಸಿದ್ದಕ್ಕೆ ಥ್ಯಾಂಕ್ಸ್.

L'Étranger said...

ಒಂದು ಮುಗ್ಧ ಪದ್ಯವೊಂದು ಎಷ್ಟೆಲ್ಲಾ ರೀತಿಯ ವ್ಯಾಖ್ಯಾನಗಳಿಗೆ ತನ್ನನ್ನು ತೆತ್ತುಕೊಳ್ಳಬಹುದು ಎನ್ನುವುದಕ್ಕೆ ಇದೊಂದು ಸುಂದರ ಉದಾಹರಣೆ! ಈ ಕೆಲವು ಅರ್ಥಗಳನ್ನು ನಾನೂ ಇತ್ತೀಚೆಗೆ ಯಾವುದೋ ಬ್ಲಾಗಿನಲ್ಲಿ ನೋಡಿದೆ.

ಹೊಸ ಮಾರ್ಪಾಡು ಗೊತ್ತಿರಲಿಲ್ಲ! ಚೆನ್ನಾಗಿದೆ!!:D

ರೂpaश्री said...

@ಡಾ. ಸತ್ಯನಾರಾಯಣ ಅವರೆ,
ಈ ಶಿಶುಗೀತೆಯ ಹಿಂದಿನ ಅರ್ಥ ನನಗೂ ತಿಳಿದದ್ದು ಇತ್ತೀಚೆಗೆ, ನಮ್ಮ ಮಾವನವರ ಊರಿನ ಹಿರಿಯಜ್ಜನೊಬ್ಬ ಹೇಳಿದ ಅರ್ಥವಿದು. ಹೊಸ ವಿಷಯವೆನಿಸಿ ಹಂಚಿಕೊಂಡೆ.

@SB,
ಹೊಸ ಮಾರ್ಪಾಡು ದುಂಡಿರಾಜ್ ಅವರ ಹನಿಗವನವಂತೆ!!

Unknown said...

ಇನ್ನೊಂದು ವಿಷಯ ನೆನ್ನೆ ಸ್ಪಷ್ಟವಾಯಿತು. ಈ ಶಿಶುಪ್ರಾಸದ ಮೊದಲ ಸಾಲಿನ ಪಾಠ 'ಕಣ್ಣ ಮುಚ್ಚೆ ಕಾಡೆ ಗೂಡೆ' ಅಲ್ಲ. ಅದು 'ಕಣ್ಣ ಮುಚ್ಚೆ ಕಾಡಿಗೆ ಓಡೆ' ಎಂದು ಇದೆ. ಜನಪದರ ಬಾಯಲ್ಲಿ ಸಂಧಿ ಕಾರ್ಯ ನಡೆದು ಕಾಡೆಗೂಡೆ ಆಗಿದೆ ಎಂದು ಹಳಗನ್ನಡ ಹಾಗೂ ಶಾಸನ ಸಾಹಿತ್ಯ ವಿದ್ವಾಂಸರಾದ ಡಾ.ಕೆ.ಆರ್.ಗಣೇಶ್ ಹೇಳಿದರು.

Spurthi Girish said...

Thumba ne chennagi ola arthagalanna huduki bardiddeera.. thumba khushi aythu. amanigu odhi heldhe.. thumba khushi patru.. we a gud laugh abt the small poem in the end too!!!:)..keep writing..

Spurthi Girish said...

Thumba ne chennagi ola arthagalanna huduki bardiddeera.. thumba khushi aythu. amanigu odhi heldhe.. thumba khushi patru.. we a gud laugh abt the small poem in the end too!!!:)..keep writing..

Unknown said...

ROOPAJI,

SUPER NANAGU ARTHA GOTTIRALILLA, EEGA TILIYITU. THANKS

ಪೂರ್ಣ ವಿ-ರಾಮ said...

idu khandita arthagarbhitavada haadu...

ಪೂರ್ಣ ವಿ-ರಾಮ said...

idu kandita arthagarbhita haadu...

vinayakram said...

so nice...

ರೂpaश्री said...

@ಡಾ. ಸತ್ಯನಾರಾಯಣ ಅವರೆ,
ಹೊಸ ವಿಷಯ ತಿಳಿಸಿದಕ್ಕೆ ವಂದನೆಗಳು ಸಾರ್!

@spurthi,
Glad that u liked it, thanks to ur mom for visiting my blog!!

@ಪೂರ್ಣ ವಿ-ರಾಮ
ಬ್ಲಾಗಿಗೆ ಭೇಟಿ ನೀಡಿ ಕಮೆಂಟಿಸಿದಕ್ಕೆ ವಂದನೆಗಳು.

@vinayakram,
im glad u liked it:)

Anonymous said...

oLLeya maahiti... nanagoo ee haadina hind eiShTu artha ide anta gotE iralilla

ಸುಬ್ರಹ್ಮಣ್ಯ ಭಟ್ said...

istu olleya vishaya heluvaga aa koneya salugalu bekitte?

indu navu intha kulagedisida halavu sahityagalannu kanabahudu.

ommege manoranjane anisidaroo adara maulya matra keelu mattadde allave?

shivu.k said...

ರೂಪಶ್ರೀ ಮೇಡಮ್,


ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿರುವುದು ನನಗೆ ಗೊತ್ತಾಗಿ ತುಂಬಾ ಸಂತೋಷವಾಯಿತು....ನಾನು ಕಳೆದ ಹದಿನೈದು ದಿನಗಳಿಂದ ಬಿಡುವಿಲ್ಲದ ಕೆಲಸದಿಂದಾಗಿ ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ...ಕ್ಷಮೆಯಿರಲಿ...

ಕಣ್ಣಾ ಮುಚ್ಚೆ ಕಾಡೇ...
ಇದರ ಅರ್ಥವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ...ನನಗೊತ್ತಿರಲಿಲ್ಲ...

ಹೀಗೆ ಬರೆಯುತ್ತಿರಿ....all the best...

ಧನ್ಯವಾದಗಳು....

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ನೀವು ನನ್ನ ಬ್ಲಾಗಿಗೆ ಬಂದದ್ದು ಖುಷಿಕೊಟ್ಟಿತು. ಹಾಗೇ ನಿಮ್ಮ ಬ್ಲಾಗಿಗೆ ಬಂದು ನೋಡಿದಾಗ ಹೊಸ ವಿಷಯ ತಿಳಿಯಿತು. ಇದೇ ಬ್ಲಾಗ್ ಲೋಕದ ಲಾಭ ಅಲ್ವೇ?

PARAANJAPE K.N. said...

ಜಾನಪದ ಹಾಡಿಗೆ ಹೊಸ ಅರ್ಥ ವಿಸ್ತಾರವನ್ನಿತ್ತು, ಕೊನೆಗೊ೦ದು ಡು೦ಡಿರಾಜ ಸ್ಟೈಲಿನ ಹನಿಗವನದೊ೦ದಿಗೆ ಬಹಳ ಚೆನ್ನಾಗಿ ನಿರೂಪಿಸಿದ್ದೀರಿ, ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ.
www.nirpars.blogspot.com

ರೂpaश्री said...

@malnad andvijaykannantha,
you both are welcome!! namge tiLida hosa vichaara hosa anubhavagaLanna hanchikoLLalu blog irodu alwa:)
@ಶಿವು ಅವರೆ,
ಬಿಡುವು ಮಾಡಿಕೊಂಡು ಬ್ಲಾಗಿಗೆ ಭೇಟಿ ಕೊಟ್ಟು, ಪ್ರತಿಕ್ರಿಯಿಸಿದಕ್ಕೆ ವಂದನೆಗಳು!! ನಿಮ್ಮ ಫೋಟೋ ಬ್ಲಾಗ್ ತುಂಬಾ ಚೆನ್ನಾಗಿ ಮೂಡಿಬರ್ತಾಯಿದೆ:)
@ಮಲ್ಲಿಕಾರ್ಜುನ ಅವರೆ,
ನಿಮ್ಮ ಮಾತು ನಿಜ!! ಬ್ಲಾಗ್ ಗಳಿಂದಾಗಿ ಬಹಳಷ್ಟು ಹೊಸ ವಿಷಯ ತಿಳಿದಿದ್ದೀನೆ:)

@ ಪರಾಂಜಪೆ ಅವರೆ,
ನಿಮ್ಮ ಹೆಸರು ವಿನೂತನವಾಗಿದೆ!! ಮೆಚ್ಚಿ ಬರೆದದಕ್ಕೆ ಥ್ಯಾಂಕ್ಸ್, ಖಂಡಿತಾ ನಿಮ್ಮ ಬ್ಲಾಗಿಗೆ ಬಂದು ಓದಿ ಅಲ್ಲೇ ಪ್ರತಿಕ್ರಯಿಸುವೆ.

Guruprasad said...

hey,,,ಇದರಲ್ಲಿ ಇಸ್ಟೊಂದು ಅರ್ಥ ಇದ್ದೀಯ,,, ಗೊತ್ತೇ ಇರಲಿಲ್ಲ... ತಿಳಿಸಿ ಕೊಟ್ಟಿದಕ್ಕೆ ಥ್ಯಾಂಕ್ಸ್.....
ಲಾಸ್ಟ್ ನಲ್ಲಿ ಇದರ ಮೇಲೆ ಬರೆದಿರೋ ಜೋಕೆ ಮಜಾ ಇದೆ..... :- ) ಹೀಗೆ ಬರೆಯುತ್ತಿರಿ.....

ಗುರು

ತಿರು ಶ್ರೀಧರ said...

ನೀವು ನೀಡಿರುವ ಅರ್ಥ ವ್ಯಾಖ್ಯಾನ ಕಂಡು ಸಂತೋಷವಾಯಿತು.

ಡಂಕಿನ್ ಜಳಕಿ said...

ಪೋಸ್ಟ್ ಮಾಡಿದ ಮೂರು ವರ್ಷದ ನಂತರ ಇದಕ್ಕೆ comment ಬರೀತಿದೀನಿ.

ಎಲ್ಲೋ ಓದಿದ ನೆನಪು, ಈ ಹಾಡಿನ ಅರ್ಥ ಹೀಗೂ ಇದೆ ಎಂದು:

ಕಣ್ಣು ಮುಚ್ಚಿದ ಮೇಲೆ (ಸತ್ತ ನಂತರ), ಕಾಡೇನು? ಗೂಡೇನು? ಉದ್ದಿನ ಮೂಟೆಯಂತೆ ಜೋಪಾನ ಮಾಡಿದ ಈ ದೇಹ ಉರುಳೇ ಹೋಗುತ್ತದೆ. ಸಾವು ಅನಿವಾರ್ಯ. (ಉದ್ದಿನ ಮೂಟೆ ತುಂಬಾ ಭಾರವಂತೆ, ಮತ್ತು ಉಳಿದ ಕಾಳಿಗಿಂತಲೂ ಬಹಳ ದುಬಾರಿಯಂತೆ!) ಈ ತಿಳುವಳಿಕೆ ನನಗೆ ಬರುವಷ್ಟರಲ್ಲಿ ನನ್ನ ಜೀವವೇ ಹೊರಟು ಹೋಯಿತು, ನೀವಾದರೂ ನಿಮ್ಮದನ್ನು ಕಾಪಾಡಿಕೊಳ್ಳಿ. ("ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ, ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ").