Tuesday, April 28, 2009

ಮರಳಿನಲ್ಲಿ ಅರಳಿದ ಕಲೆ!!!

ನಾವು ಚಿಕ್ಕಂದಿನಲ್ಲಿ ನದಿದಡ ಅಥವಾ ಸಮುದ್ರತೀರಕ್ಕೆ ಹೋದಾಗ ಮರಳಿನಲ್ಲಿ ಮನೆ ಮಾಡಿ ಆನಂದಿಸ್ತಾಯಿದ್ವಿ. ಈಗೆಲ್ಲಾ ಮಕ್ಕಳಿಗೆ ಮಣ್ಣಿನಲ್ಲಿ ಆಡ್ಲಿಕ್ಕೆ ಮತ್ತು ತರಹ ತರಹ ಡಿಸೈನ್ಸ್ ಮಾಡ್ಲಿಕ್ಕೆ ಮೌಲ್ಡ್ ಗಳು ಸಿಗುತ್ತೆ, ಅದಕ್ಕೆ ಮಣ್ಣು ತುಂಬಿ ನಿಧಾನಕ್ಕೆ ತೆಗೆದರಾಯ್ತು, ನಮಗೆ ಬೇಕಾದ ಪ್ರಾಣಿಗಳ ಡಿಸೈನ್ ರೆಡಿ. ಫ್ಲೋರಿಡಾಗೆ ಬಂದ ಮೇಲೆ ತಿಂಗಳಿಗೊಮ್ಮೆ ಬೀಚಿಗೆ ಹೋಗೋದು ರೂಢಿ ಆಯ್ತು, ಇಲ್ಲಿ ಬೀಚಿನಲ್ಲಿ ಕೆಲವರು ಮಣ್ಣಿನಲ್ಲಿ ಮೊಸಳೆ, ಏಡಿ ಇತರೆ ಆಕಾರಗಳನ್ನು ಸುಲಭದಲ್ಲಿ ಮಾಡಿದನ್ನು ನೋಡಿ ವಾಹ್ ಆಂತ ಫೋಟೋ ಕ್ಲಿಕ್ಕಿಸಿದ್ದೆ.

ಈಚೆಗೆ ಗೆಳೆಯರೊಬ್ಬರು ಕಳುಹಿಸಿದ ಈಮೈಲ್ ಇದು.. ಮರಳಿನಲ್ಲಿ ಮೂಡಿದ ವಿಸ್ಮಯಗಳಿವು. ಮರಳಿಗೆ ನೀರು ಬೆರೆಸಿ ಯಾವುದೇ ಸ್ಪೆಶಲ್ ಟೂಲ್ಸ್ ಇಲ್ಲದೆ, ಕೇವಲ ಕೈಯಿಂದಲೇ ಎಷ್ಟು ಚೆನ್ನಾಗಿ ಕ್ಯಾಸಲ್ , ಪ್ರಾಣಿ ಪಕ್ಷಿಗಳನ್ನೂ ಮೂಡಿಸಿದ್ದಾರೆ ನೋಡಿ....

ಓಹ್ ಇದು ಬಹಳ ದೊಡ್ಡ ಕಲೆ ಅಂತ ತಿಳಿಯಿತು. ಇದಕ್ಕೆ "ಸ್ಯಾಂಡ್ ಸ್ಕಲ್ಪಟಿಂಗ್" ಅಂತಾರೆ. ಪ್ರಪಂಚದ ನಾನಾ ದೇಶಗಳಲ್ಲಿ ಪ್ರತಿ ವರ್ಷ ಈ ರೀತಿಯ ಉತ್ಸವ ಮತ್ತು ಸ್ಪರ್ಧೆಗಳು ಕೂಡ ನೆಡೆಯುತ್ತದೆ. 1989ನಲ್ಲಿ "ಹ್ಯಾರಿಸ್ಯಾಂಡ್(Harrisand)" ಎಂದು ಕರೆಯಲ್ಪಡುವ Harrison Hot Springs (Canada, BC)ನಲ್ಲಿ ಶುರುವಾದ World Championship in Sand Sculptureನಲ್ಲಿ ಪ್ರತಿವರ್ಷ ಹಲವಾರು ಮಂದಿ ಪಾಲ್ಗೊಳ್ಳುತ್ತಾರೆ. 2008ನ ವಿಜಯಶಾಲಿ ಕಲಾಕೃತಿಗಳ ಫೋಟೋಗಳಿವು.
ಮಾಸ್ಟರ್ ಸೋಲೊನಲ್ಲಿ ಮೊದಲ ಬಹುಮಾನ ಮತ್ತು ಜನರ ಆಯ್ಕೆ
"What Lies Beneath" by Carl Jara

ಮಾಸ್ಟರ್ ಸೋಲೊನಲ್ಲಿ ಎರಡನೆ ಬಹುಮಾನ ಪಡೆದ
"Rise Of The Golden Dragon" by Tan Joo Heng
ಮಾಸ್ಟರ್ ಸೋಲೊನಲ್ಲಿ ಮೂರನೆ ಬಹುಮಾನ ಪಡೆದ
"The Beginning And The End" by Baldrick Buckle
ಮಾಸ್ಟರ್ ಡಬಲ್ಸ್ ನಲ್ಲಿ ಮೊದಲ ಬಹುಮಾನ ಪಡೆದ "Colliding Dreams"
by Hanneke Supply & Martijn Rijerse
ಮಾಸ್ಟರ್ ಡಬಲ್ಸ್ ನಲ್ಲಿ ಎರಡನೆ ಬಹುಮಾನ ಪಡೆದ "Swing With Me Baby"
by Melineige Beauregard & Tan Joo Heng
ಮಾಸ್ಟರ್ ಡಬಲ್ಸ್ ನಲ್ಲಿ ಮೂರನೆ ಬಹುಮಾನ ಪಡೆದ"Transanding"
by Stephen Robert & Jobi Bouchard
ಮಾಸ್ಟರ್ ಡಬಲ್ಸ್ ನಲ್ಲಿ ಜನರ ಆಯ್ಕೆ"Deep Sleep"
by Michel de Kok & Charlotte Koster
ಟೀಮ್ ವರ್ಗದಲ್ಲಿ ಮೊದಲ ಬಹುಮಾನ ಪಡೆದ Luny-landing
ಟೀಮ್ ವರ್ಗದಲ್ಲಿ ಎರಡನೆ ಬಹುಮಾನ ಪಡೆದ Land Grab
ಟೀಮ್ ವರ್ಗದಲ್ಲಿ ಮೂರನೆ ಬಹುಮಾನ ಪಡೆದ Donot Press Button

ಇಶ್ವದ ಅತೀ ಎತ್ತರದ ಮರಳಿನ ಕ್ಯಾಸಲ್ ಮೂಡಿದ್ದು South Carolinaದ Myrtle Beachನಲ್ಲಿ 2007 Sun Fun Festival ಸಂದರ್ಭದಲ್ಲಿ. 300 ಟ್ರಕ್ ಬರ್ತಿ ಮರಳು ಉಪಯೋಗಿಸಿ ಸತತ ಹತ್ತು ದಿನಗಳ ಕಾಲ ಸರಸೋಟದ ಏಳು ಜನರು ಶ್ರಮಿಸಿ 49.55 ಅಡಿ(15.1ಮಿ) ಎತ್ತರದ ಬೃಹತ್ ಕ್ಯಾಸಲ್ ನಿರ್ಮಿಸಿದ್ದರು. ಅದರ ಫೋಟೋಸ್ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.
ಕೇವಲ ಸ್ಪರ್ಧೆಗಾಗಿ ಈ ರೀತಿಯ ಕಲೆ ಮೂಡುತ್ತೆ ಅನ್ಕೋಬೇಡಿ, ಸೆಪ್ಟೆಂಬರ್ 1, 2007ರಲ್ಲಿ Ed Jarrett 31.7ಅಡಿ(9.66ಮಿ) ಎತ್ತರದ "Castle to the Sun"ಅನ್ನು Point Sebago Resort, Maineಯಲ್ಲಿ ರೋಗಗ್ರಸ್ತ ಮಕ್ಕಳ ನಿಧಿ ಸಹಾಯಯಾರ್ಥ ನಿರ್ಮಿಸಿದ್ದರು.
ಭಾರತದ ಸುದರ್ಶನ್ ಪಟ್ನಾಯಕ್ ಮತ್ತು ಜೆಯವೇಲ್ ಮುರುಗನ್ ಇವರುಗಳು ಸುನಾಮಿಯಲ್ಲಿ ಮಡಿದವರ ನೆನಪಿಗಾಗಿ "ಪುರಿ"ಯಲ್ಲಿ ಒಂದು ನಿರ್ಮಿಸಿದ್ದಾರೆ. ಸುದರ್ಶನ್ ಪಟ್ನಾಯಕ್ ಅವರು 1995ರಲ್ಲಿ ಗೋಲ್ದನ್ ಆರ್ಟ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಿ ಈ ಕಲೆಗೆ ಯುವಕರಲ್ಲಿ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಿದ್ದಾರೆ.
ಆಂಧ್ರಾಪ್ರದೇಶದ ಶ್ರೀಕಾಕುಲಂ ನವರಾದ ತರಾಣಿ ಮಿಶ್ರೊ ಅವರ ಕೈಯಲ್ಲಿ ಮೂಡಿದ ಮರಳು ಕಲೆ ಇಲ್ಲಿದೆ ನೋಡಿ.
ಮರಳಿನಲ್ಲಿ ಮೂಡಿದ ದುರ್ಗಾದೇವಿ

ಬೀಜಿಂಗ್ ಓಲಂಪಿಕ್ಸ್ 2008ಹೊಸ ವರ್ಷದ ಸ್ವಾಗತ !!

2009 ಹೊಸ ವರ್ಷದ ಸ್ವಾಗತ !!

ಇಸ್ರೈಲಿನ ಹೈಫಾ ಎಂಬಲ್ಲಿ 2006ರಲ್ಲಿ ’Fairy Tales Theme'ನಲ್ಲಿ ಅರಳಿದ ಕಲಾಕೃತಿಗಳು...

ಓಲಂಪಿಕ್ಸ್ ನ ಇತಿಹಾಸವನ್ನು ಉಲ್ಲೇಖಿಸುವ ಮರಳಿನ ಕಲಾಕೃತಿಗಳು Zhujiajian Island, East China’s Zhejiang Provinceನಲ್ಲಿ 2008ನ ಓಲಂಪಿಕ್ಸ್ ಸಮಯದಲ್ಲಿ ಮೂಡಿವೆ.

ಮರಳನ್ನು ಒಟ್ಟುಗೂಡಿಸಿ ಅತ್ಯಾಕರ್ಷಕ ಕಲಾಕೃತಿಗಳನ್ನು ಮಾಡುತ್ತಿರುವ ಈ ಎಲ್ಲಾ ಕಲಾವಿದರಿದೆ ನನ್ನ ಹ್ಯಾಟ್ಸ್ ಆಫ್ !!

25 comments:

L'Etranger said...

Super!! Amazing talent this is!

ಬ್ಲಾಗಿಗೆ ಏರಿಸಿ ಇಷ್ಟೆಲ್ಲಾ ಚಿತ್ರಗಳನ್ನೂ ಒಟ್ಟಿಗೆ ನೋಡುವ ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದ! :)

ರೂpaश्री said...

@SB,
Super fast neevu:-)
Yes indeed!! ಇನ್ನೂ ಬಹಳಷ್ಟು ಇವೆ, ಕಂತು ಕಂತಾಗಿ ಪೋಸ್ಟ್ ಮಾಡುವೆ..

shivu said...

ರೂಪಶ್ರೀ ಮೇಡಮ್,

ನಿಮ್ಮ ಬ್ಲಾಗಿಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ....ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿದ್ದೀರಿ...ನಾನು ಕೆಲಸದ ಒತ್ತಡದಲ್ಲಿ ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳಲು ಆಗಿಲ್ಲ...ಲಿಂಕಿಸಿಕೊಳ್ಳುತ್ತೇನೆ...

ಮತ್ತೆ ಮರಳ ಶಿಲ್ಪಗಳ ದೊಡ್ಡ ಚಿತ್ರಗಲ ಚಿತ್ತಾರವನ್ನೇ ತೆರೆದಿಟ್ಟುಬಿಟ್ಟಿದ್ದೀರಿ...ನೋಡಲು ಒಂದಕ್ಕಿಂತ ಒಂದು ಸುಂದರ ಅದ್ಭುತ...ಅವುಗಳನ್ನು ವರ್ಣಿಸಲು ನನಗೆ ಪದಗಳಿಲ್ಲ....

ನೋಡಿ ಖುಷಿಯಾಯಿತು....

ಧನ್ಯವಾದಗಳು..

Dr. B.R. Satynarayana said...

ಒಟ್ಟಿಗೇ ಇಷ್ಟೊಂದು ಕಲಾಕೃತಿಗಳ ಚಿತ್ರಗಳನ್ನು ನೋಡುತ್ತಿರುವುದಕ್ಕೆ ಖುಷಿಯಾಗಿದೆ. ಥ್ಯಾಂಕ್ಸ್

ಮನಸು said...

tumba chennagide...ee kale vismayaveniside....nammondige hanchikonda nimage namma dhanyavadagaLu..

Guru's world said...

ವಾಹ್ ವೆರಿ ನೈಸ್....ಮರಳಿನಲ್ಲಿ ಎಷ್ಟು ಅದ್ಬುತ ವಾಗಿ ಮಾಡಿದ್ದಾರೆ..... ಒಳ್ಳೆ ಕಲಾಕೃತಿಗಳು....
ರೂಪಶ್ರಿ ನನ್ನ ಬ್ಲಾಗ್ ನಲ್ಲೂ ಕೆಲವೊಂದು ಅದ್ಬುತ ಕಲಾಕೃತಿಗಳಿವೆ ...ಬಿಡುವಾದಾಗ ಒಮ್ಮೆ ಬಂದು ನೋಡಿ....
ನಮ್ಮಗಳ ಜೊತೆ ಹಂಚಿಕೊಂಡಿದಕ್ಕೆ ಧನ್ಯವಾದಗಳು...
Guru

Deepasmitha said...

ತುಂಬಾ ತಾಳ್ಮೆ ಬೇಕು ಈ ಕಲೆಗೆ. ಒರಿಸ್ಸಾದ ಸುದರ್ಶನ್ ಪಟ್ನಾಯಕ್ ಹವ್ಯಾಸಿಯಾಗಿ ಪ್ರಾರಂಭಿಸಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಎಲ್ಲಾ ಚಿತ್ರಗಳಿಗೆ ಧನ್ಯವಾದಗಳು

Asha said...

OMG! That is some talent! Great post girl. Thanks for posting!:)

ರೂpaश्री said...

ಶಿವು ಅವರೆ,
ನನ್ನ ಬ್ಲಾಗ್ ಲಿಂಕ್ ಮಾಡಿಕೊಂಡಿದಕ್ಕೆ ವಂದನೆಗಳು!! ಹೌದು ಈ ಕಲೆಯನ್ನು ವರ್ಣಿಸಲು ಪದಗಳು ಸಾಲದು:) ನೋಡಿ ಸಂತಸಪಟ್ಟು ಕಮೆಂಟಿಸಿದಕ್ಕೆ ಧನ್ಯವಾದಗಳು.

ಡಾ. ಸತ್ಯನಾರಾಯಣ್ ಅವರೆ,
ಫೋಟೋಗಳನ್ನ ನೋಡಿ ಖುಷಿಯಾಗಿದೆ ಅಂದಿದಕ್ಕೆ ವಂದನೆಗಳು.

ರೂpaश्री said...

ಮನಸು,
ಬ್ಲಾಗಿಗೆ ಭೇಟಿ ಕೊಟ್ಟು ಪ್ರತಿಕ್ರಯಿಸಿದಕ್ಕೆ ಥ್ಯಾಂಕ್ಸ್:)

ಗುರು,
ನಿಮ್ಮ ಬ್ಲಾಗ್ ನಲ್ಲಿರುವ ಕೆಲವು ಪೋಸ್ಟ್ ಗಳನ್ನು ನೋಡಿರುವೆ.. ಎಲ್ಲವನ್ನು ನೋಡಿ ಬರೆಯುವೆ.. ಆಗಾಗ್ಗೆ ಬರ್ತಾಯಿರಿ:)

ದೀಪಸ್ಮಿತಾ,
ಹೌದು ಆ ಕಲೆಗಾರರ ತಾಳ್ಮೆಗೆ ಆ ಕಲೆಗೆ ಎರಡಕ್ಕೂ ನನ್ನ ಹ್ಯಾಟ್ಸ್ ಆಫ್!!ಧನ್ಯವಾದಗಳು.

asha,
welcome to my blog!! im glad you liked them, thanks...

Prashant said...

Roopashree..Extrmely good collection..

ರೂpaश्री said...

Thank you prashant !!

Praveen said...

nice pics .... which place is this?

ಸಿಮೆಂಟು ಮರಳಿನ ಮಧ್ಯೆ said...

ಎಷ್ಟೆಲ್ಲ ಸುಂದರ ಕಲಾಕ್ರತಿಗಳು...
ಅದೂ ಮರಳಲ್ಲಿ....

ನಿಮ್ಮ ಫೋಟೊ ಕೂಡ ಸೂಪರ್....!

ಅಭಿನಂದನೆಗಳು...

nagusa dani said...

ಹಲೋ.....ಮೇಡಂ....
ವಂಡರ್ ಫುಲ್ ವರ್ಕ್..... ನಿಜವಾಗಿಯೂ....!!!!!!!!!
ನೋಡಿ ಹರ್ಷಿತನಾದೆ....ರೂpaश्री ಯವರೇ.......
ನನಗೆ ಸಮಯದ ಕೊರತೆಯಿಂದ ಕೆಲವನ್ನು ಪೂರ್ತಿಯಾಗಿ ಓದಲಾಗಲಿಲ್ಲ..
ಕ್ಷಮಿಸಿ....ದಯವಿಟ್ಟು.....!!!!!!!!
im lucky2hv u in my network...........
ವಿಶ್ ಯು ಗುಡ್ ಲಕ್...................

ಜಲನಯನ said...

ರೂpaಶ್ರೀ ಯವರೇ
ಮರಳಿನ ಈ ಅತ್ಯಾಕರ್ಷಕ ರಚನೆಗಳಿಗ ಕರ್ತೃಗೆ hats off
ಇದನ್ನು ಪರಿಚಯಿಸಿದ ನಿಮಗೆ hats off
ನಮ್ಮ ಗೂಡಿಗೂ ಬನ್ನಿ..

ರೂpaश्री said...

@praveen,
Thanks! these pics have been taken at various places as mentioned in the post

ರೂpaश्री said...

ಪ್ರಕಾಶ್ ಅವರೆ,
ಫೋಟೋಗಳನ್ನು ಮೆಚ್ಚಿ ಬರೆದಕ್ಕೆ ವಂದನೆಗಳು!!

ರೂpaश्री said...

ದಾನಿ ಸರ್,

ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು!! ಒಬ್ಬ ಬಿಜಿ ವೈದ್ಯರಾಗಿ ನಿಮಗೆ ಸಮಯದ ಅಭಾವವಿರೋದು ಸರಿಯೆ.. ನಿಮ್ಮ ಪರಿಚಯವಾದದ್ದು ನನಗೂ ಸಂತಸ ತಂದಿದೆ:) ಥ್ಯಾಂಕ್ಸ್ ಫಾರ್ ಯೂವರ್ ವಿಶಸ್ ಸರ್!!!

Pramod said...

ಯುಟ್ಯೂಬ್ ನಲ್ಲಿ "ಸ್ಯಾ೦ಡ್ ಆರ್ಟ್" ತು೦ಬಾ ಕ್ರಿಯೇಟಿವ್ ಆಗಿರೋ ವಿಡಿಯೋಗಳು ಸಿಗುತ್ತವೆ. ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ..

ರೂpaश्री said...

ಹೌದು ಪ್ರಮೋದ್ ಅವರ, ನೀವು ಹೇಳುವ ಆ ವಿಡಿಯೋಗಳನ್ನ ನೋಡಿರುವೆ.. ಅದ್ಭುತ ಅಲ್ವ!

Rekha A said...

OMG! Roopashree They are really very beautiful! Thanks for showing us a good collection! :)

sitaram said...

Excellent art work.
Nice collection madam.
How to download these?
are they in your web album?

ರೂpaश्री said...

Thank you rekha:)

ರೂpaश्री said...

Thank sitaram sir. Well i got these photos in email and some from internet.. so their resolution is same as here in blog. I guess you can right click on each photo and copy them to ur pc!