Pages

Friday, August 21, 2009

ಗಣಪನಿಂದ ಆಗದಿರಲಿ ಪರಿಸರಕ್ಕೆ ಲೋಪ!!

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು!!

ಗಣೇಶ ಹಬ್ಬ ಬಂತೆಂದ್ರೆ ಈಮೈಲ್, ಆರ್ಕುಟ್, ಬ್ಲಾಗ್, ಫೇಸ್ಬುಕ್, ಟ್ವಿಟ್ಟರ್, ಎಲ್ಲೆಲ್ಲೂ ಹಬ್ಬದ ಶುಭಾಶಯಗಳ ಸುರಿಮಳೆ.:)

ಹಬ್ಬ ಮುಗಿದಮೇಲೆ ಮುಂಬೈಯಲ್ಲಿ ಅರ್ಧಂಬರ್ಧ ಮುಳುಗಿದ/ ಮುರಿದ ಮೂರ್ತಿಗಳ ಫೋಟೋ ಮತ್ತು ವಿಗ್ರಹಗಳಲ್ಲಿ ಉಪಯೋಗಿಸುವ ಬಣ್ಣಗಳಲ್ಲಿರುವ ಲೆಡ್ ಮತ್ತಿತರೆ ರಾಸಾಯನಿಕಗಳಿಂದ ಆಗುವ ಹಾನಿಗಳ ಕುರಿತು ಹಲವು forward ಮೈಲ್ ಗಳು !!

ಇದು ಪ್ರತಿವರ್ಷ ನಡಿಯುತ್ತಲೇ ಇದೆ. ಆದರೆ ಪರಿಸರಪ್ರೇಮಿ ಗಣಪನ ವಿಗ್ರಹಗಳು ಈಗ ಹೆಚ್ಚು ಜನಪ್ರಿಯವಾಗಿದೆ. ಯಾವುದೇ ಬಣ್ಣವಿಲ್ಲದೇ ಅಥವಾ ತರಕಾರಿ/ಹೂವುಗಳಿಂದ ತಯಾರಿಸಲಾದ ಬಣ್ಣಗಳಿಂದ ಅಲಂಕರಿಸಲ್ಪಟ್ಟ ಮೂರ್ತಿಗಳು ಈಗ ಎಲ್ಲೆಲ್ಲೂ ಸಿಗುತ್ತವೆ. ತಲಹಸಿ ಅಂತಹ ಸಣ್ಣ ಊರಿನಲ್ಲೂ ಈಗ ಇವು ಲಭ್ಯವಿದೆ. ಇವುಗಳ ಬಗ್ಗೆ ಇನ್ನಷ್ಟು ತಿಳಿಯೋಣ...

ಪರಿಸರ ಗಣಪತಿ :
ಈ ತಾಣದಲ್ಲಿ ಗಣೇಶ ವಿಗ್ರಹವನ್ನು ಸ್ವಂತ ನಾವೆ ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ವಿವರವಾಗಿ ವಿಡಿಯೋ ಮೂಲಕ ತಿಳಿಸಲಾಗಿದೆ. ಅಲ್ಲದೇ ಅವು ಮಾರಾಟಕ್ಕೆ ಎಲ್ಲಿ ಲಭ್ಯವಿದೆ ಮತ್ತಿತರ ಮಾಹಿತಿಯಿದೆ.

Hindu Blog :
ಈ ಬ್ಲಾಗಿನಲ್ಲಿ ಮಣ್ಣಿನಿಂದ ಅಥವಾ ಕಾಗದದಿಂದ ಗಣೇಶನನ್ನು ಮಾಡುವುದು ಹೇಗೆ ಅಂತ ಸುಲಭವಾಗಿ ತಿಳಿಸಲಾಗಿದೆ.
ಕಾಗದ ಗಣೇಶನನ್ನು ಮಾಡುವುದು ಹೀಗೆ.

ಮುಂಬೈನಲ್ಲಿರುವ ರಮೇಶ್ ಅವರು ತೆಂಗಿನಕಾಯಿ ಚಿಪ್ಪಿನಲ್ಲಿ ಗಣಪನನ್ನು ಮಾಡುತ್ತಾರೆ. ಅವರ ಗಣಪನ ವಿಷೇಶ ಏನಂದ್ರೆ ಹೊಟ್ಟೆಯ ಜಾಗದಲ್ಲಿ ಒಂದು ಇಡಿಯಾದ ತೆಂಗಿನಕಾಯಿಯನ್ನೇ ಉಪಯೊಗಿಸಿದ್ದಾರೆ. ಈ ಭಾಗಕ್ಕೆ ಪ್ರತಿವರ್ಷ ಹೊಸ ತೆಂಗಿನಕಾಯಿ ಇಟ್ಟರೆ ಆಯಿತು. ಪೂಜೆಯ ನಂತರ ಸಾಂಕೇತಿಕವಾಗಿ ಗಣಪನನ್ನು ನೀರಿನಲ್ಲಿ ಮುಳುಗಿಸಿದ ಮೇಲೆ ಈ ಕಾಯಿಯನ್ನು ಒಡೆದು ’ಪ್ರಸಾದ’ದ ರೂಪದದಲ್ಲಿ ಬಳಸಬಹುದು ಅಥವಾ ನೀರಿನಲ್ಲಿ ಮೊಳಕೆ ಬರುವವರೆಗೆ ಹಾಗೆಯೇ ಬಿಟ್ಟು ನಂತರ ಅದನ್ನು ಬೆರೆಡೆ ನೆಡಬಹುದು!! ಆವರ ಕೆಲವು ಗಣಪತಿಗಳನ್ನು ಇಲ್ಲಿ ಕಾಣಬಹುದು.

ಹಲವು ಸಂಸ್ಥೆಗಳು ಈಗ ಇವುಗಳ ಬಗ್ಗೆ ವಿಡಿಯೋ ತಯಾರಿಸಿ ಜನರಗೆ ಮುಟ್ಟುವಂತೆ ಮಾಡಿದ್ದಾರೆ

ಇಲ್ಲಿ ಮಣ್ಣಿನ ಗಣಪ ಸಿಗುವುದಿಲ್ಲ ಅನ್ನೋ ಕಾರಣಕ್ಕೆ ನಾನು ಮತ್ತು ನನ್ನ ಅನೆಕ ಗೆಳತಿಯರು ಮಣ್ಣಿನಿಂದ, ಅರಿಶಿನದಿಂದ, ಗೋಧಿಹಿಟ್ಟಿನಿಂದ ಗಣೇಶನನ್ನು ಮಾಡಿ ಪೂಜಿಸಿದ್ದೆವು. ಅವುಗಳ ಫೋಟೋಗಳು ಇಲ್ಲಿ ಮತ್ತು ಇಲ್ಲಿವೆ.

ಸಿಡ್ನಿಯಲ್ಲಿರುವ ತೆಲುಗು ಅಸೊಸಿಯೇಷನ್ ಅವರು ಮಕ್ಕಳಿಗಾಗಿ ’ಗಣಪ ಮಾಡಿ ನೋಡು’ ಶಿಬಿರ ಏರ್ಪಡಿಸಿದ್ದರು. ಅದರ ವಿಡಿಯೋ ಇಲ್ಲಿ ಮತ್ತು ಇಲ್ಲಿ.

ಅಲ್ಲದೇ ಅಮೇರಿಕದ ನ್ಯೂಯಾರ್ಕಿನಲ್ಲಿರುವ ಜೆನ್ನಿಫರ್ ಅವರು ತಮ್ಮ ಪತಿ ಕುಮಾರ್ ಅವರನ್ನು ಮದುವೆಯಾದಮೇಲೆ ತಮ್ಮ ಮನೆಯಲ್ಲಿ ಪ್ರತಿವರ್ಷವೂ ತಾವೇ ಸ್ವತಃ ಗೋಧಿಹಿಟ್ಟಿನಿಂದ ಗಣಪನನ್ನು ಮಾಡಿ ಪೂಜಿಸುತ್ತಿದ್ದಾರೆ ನೋಡಿ.
ನೀವು ಕೂಡ ಈ ವರ್ಷ ಪರಿಸರ ಗಣಪನನ್ನು ಪೂಜಿಸಿರಿ ಮತ್ತು ಈ ವಿಚಾರವನ್ನು ನಿಮ್ಮ ಗೆಳೆಯರಲ್ಲೂ ಹಂಚಿಕೊಳ್ಳಿ.
ಈಗ ಮತ್ತೆ ಬಂದಿರುವ ಗಣಪ!
ಅವನಿಂದ ಆಗದಿರಲಿ ಪರಿಸರಕ್ಕೆ ಲೋಪ!!

ಅಂದ ಹಾಗೆ ಹೇಳೋದು ಮರೆತಿದ್ದೆ, ಕಳೆದ ವರ್ಷ ಗಣೇಶ ಹಬ್ಬದ ಒಂದು ದಿನಕ್ಕೆ ಮುಂಚೆ ನನ್ನೀ ಬ್ಲಾಗ್ ಶುರು ಮಾಡಿದ್ದೆ!

29 comments:

Lakshmi said...

nice post roopashree. Videos are too good.

Unknown said...

ದನ್ಯವಾದ ರೂಪ ನಿಮ್ಮ ಪ್ರತಿಕ್ರಿಯೆ ಸಿಕ್ಕಿತು......ನಿಮ್ಮ mail id ಕಳಿಸಿ ಮೇಡಂ ನಿಮಗೆ ನನ್ನ ಬರಹ ಹಾಕಿದಾಗ ಮೇಲ್ ಕಳಿಸ್ತೇನೆ.ದನ್ಯವಾದ hneshakumar@gmail.com

Unknown said...

kaNteresuva lEkhanakke vaMdanegaLu

ಮನಸು said...

roopa olleya mahiti haagu videogaLu tumba istavayitu...

gowri ganesha habbada shubhashayagaLu..

shivu.k said...

ರೂಪಶ್ರೀ,

ನಿಜಕ್ಕೂ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತೆ. ಒಂದು ವಿಚಾರವಾಗಿ ಎಷ್ಟೊಂದು ಕಾಳಜಿ ನಿಮಗೆ. ಎಕೋ ಗಣೇಶನ ವಿಡಿಯೋ ನೋಡಿ ತುಂಬಾ ಖುಷಿಯಾಯಿತು. ಹಾಗೆ ನಿಮ್ಮ ಹಳೆಯ ಪೋಷ್ಟಿಂಗ್[ಆಷ್ಟ್ರೇಲಿಯದಲ್ಲಿ]ನೋಡಿದೆ. ಗೋದಿ ಗಣೇಶ ಎಲ್ಲವನ್ನು ತುಂಬಾ ಖುಷಿಯಾಯಿತು.

ನಿಮಗೆ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.

ಜಲನಯನ said...

ರೂಪश्री ಮೇಡಂ
ಗಣೇಶನನ್ನು ಪರಿಸರಪ್ರೇಮಿ ಮಾಡಹೊರಟ ನಿಮ್ಮ ಪ್ರಯತ್ನ ಶ್ಲಾಘನೀಯ. ಇದನ್ನು ಎದೆತುಂಬಿ ಹಾಡುದೆನು ಈ-ಟಿವಿ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ. ಹೇಳಿದರು ಕೂಡ. ಸಂಪ್ರದಾಯ ಮತ್ತು ಪರಿಸರ ಎರಡನ್ನೂ ಸಮಾನವಾಗಿ ನೋಡುವ ಮನಃಸ್ಥಿತಿ ಎಲ್ಲರಲ್ಲಿ ಮೂಡಿದರೆ ಎಂಥ ಚಂದ.
ಹಾಗೆಯೇ ಬಹಳ ಚನ್ನಾಗಿ ಮೂಡಿದೆ ಕವನ, ಶೇಪ್ ನೊಳಕ್ಕೆ ತೂರಿಸಿದ್ದೀರಿ, ನೀವೂ ಫೋಟೋ ಶಾಪ್ ಉಪಯೋಗಿಸಿದಿರಾ ಹೇಗೆ?
ಬೇರೆ ಪ್ರೊಗ್ರಾಂ ಗಳನ್ನು ಬಲಸಲು ಪ್ರಯತ್ನಿಸುತ್ತೇನೆ ನಾನೂ ಸಹ. ಈ ಸರಣಿಯ ಪ್ರಾರಂಭದ ಶ್ರೇಯ ನಿಮಗೇ...ನಮನ
ಗೌರಿ-ಗಣೇಶನ ಹಬ್ಬದ ಶುಭಕಾಮನೆಗಳು

ಕ್ಷಣ... ಚಿಂತನೆ... said...

ರೂಪಶ್ರೀ ಮೇಡಂ, ಗಣಪತಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಬೇಕಾದ ಮಾಹಿತಿಯ ಲೇಖನವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು.

ಬಣ್ಣವಿಲ್ಲದ ಗಣಪನ ತರಲೆಂದು ಹೋದರೂ ಮೂರ್ತಿಯಲ್ಲಿನ ಕೆಲವು ಲೋಪಗಳಿಂದಾಗಿ (ಕೆಲವಕ್ಕೆ ಕಿವಿ, ಕಣ್ಣು ಹೀಗೆ ಊನವಾಗಿದ್ದರಿಂದ) ಅತಿ ಕಡಿಮೆ ಬಣ್ಣ (??) ಮತ್ತು ಪುಟ್ಟದಾದ ಗಣೇಶಮೂರ್ತಿಯನ್ನು ತಂದಿದ್ದೆ. ಮುಂದಿನ ಬಾರಿ ಪರಿಸರಸ್ನೇಹಿ ಗಣಪನ ತರುವಾಸೆ.

ಚಂದ್ರಶೇಖರ ಬಿ.ಎಚ್.

ಸೀತಾರಾಮ. ಕೆ. / SITARAM.K said...

ಒಳ್ಳೆ ಲೇಖನ. ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಿರಿ. ಧನ್ಯವಾದಗಳು. ಮುಖ್ಯವಾಗಿ ತಮ್ಮ ಬ್ಲೊಗ್-ಗೆ ಮೊದಲ ಹುಟ್ಟುಹಬ್ಬದ ತಡ ಶುಭಾಶಯಗಳು. ಬ್ಲೊಗ್ ಕನ್ನಡ ಅ೦ತರಜಾಲ ಸಾರಸ್ವತ ಲೋಕದಲ್ಲಿ ಧೀಮ೦ತವಾಗಿ ಬೆಳಗಲೆ೦ದು ಹಾರೈಸುವೆ.
ಬೀದಿ ಗಣಪತಿಗಳ ಆವಾ೦ತರದ ಬಗ್ಗೆಯೂ ಸೇರಿಸಿದ್ದಿರೆ ಇನ್ನು ಉಪಯುಕ್ತವಾಗಿರುತ್ತಿತ್ತು.

ರೂpaश्री said...

Thank you lakshmi! Waiting to see your ganesha idol:)

ರೂpaश्री said...

ಈಶಕುಮಾರ್ ಅವರೆ,
ನಿಮಗೆ ಈ ಮೈಲ್ ಮಾಡಿರುವೆ:)

ರೂpaश्री said...

ತವಿಶ್ರೀ ಸರ್,
ಬಹಳ ದಿನಗಳ ನಂತರ ಬ್ಲಾಗಿಗೆ ಬಂದಿರುವಿರಿ. ನಿಮಗೆ ತಿಳಿಯದ್ದು ಏನಿದೆ ಇದರಲ್ಲಿ? :))

ರೂpaश्री said...

ಮನಸು ಅವರೆ,
ಲೇಖನ ಮತ್ತದರ ಜೊತೆಗಿರುವ ವಿಡಿಯೋ ಮೆಚ್ಚಿದಕ್ಕೆ ಥ್ಯಾಂಕ್ಸ್!
ನಿಮಗೂ ಹಬ್ಬದ ಶುಭಾಶಯಗಳು(ತಡವಾಗಿ ಹೇಳುತ್ತಿರುವೆ).

ರೂpaश्री said...

ಶಿವು ಅವರೆ,
ನಿಮ್ಮ ಅಭಿಮಾನಕ್ಕೆ ತುಂಬಾ ಧನ್ಯವಾದಗಳು! ನನ್ನ ಹಳೆಯ ಪೋಸ್ಟ್ ಗಳನ್ನೂ ನೋಡಿ ಖುಶಿಪಟ್ಟಿದಕ್ಕೆ ಥ್ಯಾಂಕ್ಸ್. ಆದ್ರೆ ನೀವು ಅಂದುಕೊಂಡಂತೆ ನಾನು ಆಸ್ಟ್ರೇಲಿಯಾದಲ್ಲಿ ಇರಲ್ಲಿಲ್ಲ, ಬೆಂಗಳೂರಿನ ನಂತರ ತಲಹಸೀ ಅಷ್ಟೆ ಸಧ್ಯಕ್ಕೆ:)

ರೂpaश्री said...

ಆಜಾದ್ ಅವರೆ,
ಪರಿಸರ ಪ್ರೇಮಿ ಗಣಪನ ಕುರಿತು ಬಹಳಷ್ಟು ಜನ ಪ್ರಚಾರ ಶುರು ಮಾದಿದ್ದಾರೆ. ಎಸ್.ಪಿ.ಬಿ ಅವರೂ ಹೇಳಿದ್ರು ಅನ್ನೋ ವಿಚಾರ ತಿಳಿಸಿದಕ್ಕೆ ಥ್ಯಾಂಕ್ಸ್!
ಸಂಪ್ರಾದಯ ಅಂದ್ರೆ ನಾವೆ ಮಾಡಿಕೊಂಡದ್ದು ಅಲ್ಲವೇ ಹಿಂದೆಲ್ಲಾ ಈ ಬಣ್ಣಗಳು, POP ಇರ್ಲಿಲ್ಲಾ ಅಲ್ವಾ ಸರ್, ಇವೆಲ್ಲಾ ಇತ್ತೀಚೆಗೆ ಹುಟ್ಟಿಕೊಂಡಿರೋದು..

ರೂpaश्री said...

ಚಂದ್ರಶೇಖರ ಅವರೆ,
ನಿಮ್ಮ/ನಮ್ಮ ಧನ್ಯವಾದಗಳು ಸಲ್ಲಬೇಕಾದ್ದು ಯೂಟ್ಯೂಬಿನಲ್ಲಿ ಇಷ್ಟೊಳ್ಳೆ ವಿಡಿಯೋಗಳನ್ನು ಹಾಕಿದ ಮಹಾನುಭಾವರಿಗೆ!!
ಮುಂದಿನ ಬಾರಿಯಾದರೂ ನಿಮಗೆ ಯಾವುದೇ ಭನ್ನವಿಲ್ಲದ ಪರಿಸರಸ್ನೇಹಿ ಗಣಪ ಸಿಗಲಿ:)

ರೂpaश्री said...

ಸೀತಾರಾಮ್ ಅವರೆ,
ಲೇಖನವನ್ನು ಮೆಚ್ಚಿ ಬರೆದಿದಕ್ಕೆ ಮತ್ತು ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಪ್ರೋತ್ಸಾಹಗಲನ್ನು ಉಳಿಸಿಕೊಳ್ಳುವಂತೆ ಬರೆಯುವಂತಾದರೆ ಸಾಕು:)
ಬೀದಿ ಗಣಪನ ಅವಾಂತರಗಳಲ್ಲಿ ಚಿಕ್ಕವರಿದ್ದಾಗ ನಾನೇ ಪಾಲ್ಗೊಂಡಿದ್ದೇನೆ.. ಖಂಡಿತಾ ಮುಂದೊಮ್ಮೆ ಬರೆಯುವ ಪ್ರಯತ್ನ ಮಾಡುವೆ!

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀಅವರೆ,
ಒಂದು ವರ್ಷ ಪೂರೈಸಿದ ನಿಮ್ಮ ಬ್ಲಾಗ್‌ಗಾಗಿ ಅಭಿನಂದನೆಗಳು. ನೀವು ಕೊಟ್ಟ ಮಾಹಿತಿ ನಿಮ್ಮ ಕಾಳಜಿಗಾಗಿ ಧನ್ಯವಾದಗಳು. ಮನೆಯಲ್ಲಿ ನನ್ನ ಮಗ ಓಂ ತಾನೂ ಗಣೇಶನನ್ನು ಇಡುತ್ತೇನೆಂದು ಹೇಳಿ "ಬಾಲ ಗಣೇಶ್" ಕಾರ್ಟೂನ್ ಫಿಲಂನ ಡಿವಿಡಿ ಗೇ ಹಾರ, ಹೂ, ಮಾವಿನೆಲೆ, ಬಾಳೆಕಂಬ ಇಟ್ಟು, ಮಣ್ಣಲ್ಲಿ ತಾನೇ ಮಾಡಿದ್ದ ನಾನಾ ಗೊಂಬೆಗಳನ್ನಿಟ್ಟು ಅಲಂಕರಿಸಿದ್ದ. ಮನೆಗೆ ಬಂದವರಿಗೆಲ್ಲ ಮೊದಲು ಕಾಣುತ್ತಿದ್ದುದೇ ಅದು. ಎಲ್ಲರೂ ಮೆಚ್ಚಿ ಕೆಲವು ಸಲಹೆಗಳನ್ನೂ ಅವನಿಗೆ ಕೊಡುತ್ತಿದ್ದುದು ಅಂದಿನ ವಿಶೇಷವಾಗಿತ್ತು!

ದೀಪಸ್ಮಿತಾ said...

ರೂಪಾಶ್ರೀ ಮೇಡಮ್, ಪರಿಸರ ಕಾಳಜಿಗೆ ಧನ್ಯವಾದ. ಪರಿಸರ, ಸುತ್ತಮುತ್ತಲಿನ ಪ್ರಕೃತಿಯನ್ನು ಇದ್ದ ಹಾಗೆ ಉಳಿಸಿದರೆ ಅದನ್ನು ಸೃಷ್ಟಿಸಿದ ದೇವರಿಗೆ ನಾವು ಕೊಡುವ ನಿಜವಾದ ಭಕ್ತಿ ಮತ್ತು ಪೂಜೆ. ವೀಡಿಯೋ ಚೆನ್ನಾಗಿತ್ತು

ಸವಿಗನಸು said...

ರೂಪಶ್ರೀ,
ಗಣೇಶನ ಹಬ್ಬದ ಲೇಖನ ಹಾಗೂ ವಿಡಿಯೋ ಬಹಳ ಚೆನ್ನಾಗಿತ್ತು...
ನೋಡಿ ತುಂಬಾ ಖುಷಿಯಾಯಿತು.....
ನಿಮ್ಮ ಬ್ಲಾಗ್ ಹುಟ್ಟುಹಬ್ಬಕೆ ಶುಭಾಶಯಗಳು...
ನನ್ನ ಬ್ಲಾಗಿಗೊಮ್ಮೆ ಬನ್ನಿ...

Ittigecement said...

ರೂಪಶ್ರೀಯವರೆ...

ನಿಮ್ಮ ಬ್ಲಾಗಿಗೆ ಒಂದು ವರ್ಷ ಆಗಿದ್ದಕ್ಕೆ ಅಭಿನಂದನೆಗಳು...

ನಿಮ್ಮ ಎಲ್ಲ ಲೇಖನಗಳೂ ವೈವಿಧ್ಯಮಯವಾಗಿದೆ...

ಪರಿಸರ ಪ್ರೇಮಿ ಗಣಪನ ಲೇಖನ ಇಷ್ಟವಾಯಿತು....

ನೀವು ಕೊಡುವ ಮಾಹಿತಿಗಳು ಚೆನ್ನಾಗಿರುತ್ತದೆ...
ಉಪಯುಕ್ತವೂ ಆಗಿರುತ್ತದೆ...

ಅಭಿನಂದನೆಗಳು....

Prabhuraj Moogi said...

ಚಿಪ್ಪಿನಲ್ಲಿ ಮಾಡಿದ ಗಣಪ ಬಹಳ ಇಷ್ಟವಾಯಿತು, ಒಳ್ಳೇ ಕ್ರಿಯೇಟಿವಿಟಿ, ಗಣೇಶ ಹಬ್ಬಕ್ಕೆ ಒಳ್ಳೇಮಾಹಿತಿ ಕೊಟ್ಟಿದ್ದೀರಿ.

ರೂpaश्री said...

ಮಲ್ಲಿಕಾರ್ಜುನ್ ಅವರೆ,
ನಿಮ್ಮ ಅಭಿನಂದನೆ ಮತ್ತು ಪ್ರೋತ್ಸಾಹಕ್ಕೆ ವಂದನೆಗಳು!! ನಿಮ್ಮ ಮಗ ಹಬ್ಬ ಮಾಡಿದ ರೀತಿ ತುಂಬಾ ಚೆನ್ನಾಗಿದೆ, ಓದಿ ಖುಶಿಯಾಯ್ತು:) ಅಂದಹಾಗೆ ’ಓಂ’ ಹೆಸರು ಚೆನ್ನಾಗಿದೆ. ನಿತ್ಯ ಅವನನ್ನು ಕೂಗುವ ನೆಪದಲ್ಲಿ ನೀವುಗಳು ’ಓಂಕಾರ’ ಹೇಳ್ಕೊಬಹುದು:))

ರೂpaश्री said...

ದೀಪಸ್ಮಿತಾ ಅವರೆ,

"ಪ್ರಕೃತಿಯನ್ನು ಇದ್ದ ಹಾಗೆ ಉಳಿಸಿದರೆ ಅದನ್ನು ಸೃಷ್ಟಿಸಿದ ದೇವರಿಗೆ ನಾವು ಕೊಡುವ ನಿಜವಾದ ಭಕ್ತಿ ಮತ್ತು ಪೂಜೆ"
ಆಹ್ ಎಂಥಾ ಒಳ್ಳೆಯ ಮಾತುಗಳು:)) ನಿಮ್ಮ ಈ ಮಾತುಗಳು ಎಲ್ಲರಿಗೂ ಅರ್ಥವಾದರೆ ಸಾಕು!

ರೂpaश्री said...

ಸವಿಗನಸು ಅವರೆ,
ನನ್ನ ಬ್ಲಾಗಿಗೆ ಸ್ವಾಗತ! ಲೇಖನ, ವಿಡಿಯೋವನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್:)
ನಿಮ್ಮ ಹನಿಗವನಗಳು ಚೆನ್ನಾಗಿವೆ ಸರ್!

ರೂpaश्री said...

ಪ್ರಕಾಶ್ ಅವರೆ,

ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು! ಬ್ಲಾಗ್ ಶುರು ಮಾಡಿದಾಗ ಏನನ್ನು ಬರೆಯುವುದು ಎಂದೇ ತಿಳಿದಿರಲಿಲ್ಲ. ಕಥೆ, ಕವನ, ವಿಮರ್ಶೆ ಇದ್ಯಾವುದೂ ನನಗೆ ಬರೊಲ್ಲ, ಆದ್ರೂ ಶುರು ಮಾಡಿದ್ದೆ. ಮೊದಲಿಗೆ ಹಬ್ಬಗಳ ಫೋಟೋಗಳನಷ್ಟೆ ಹಾಕಿದ್ದೆ, ನಂತರ ನನಗೆ ಹೊಸದೆನಿಸಿದ ವಿಚಾರಗಳನ್ನು ಹಂಚಿಕೊಂಡೆ ಅವು ನಿಮಗೆ ವೈವಿಧ್ಯಮಯವೆನಿಸಿದರೆ ಸಂತೋಷ!!

ರೂpaश्री said...

ಪ್ರಭು ಅವರೆ,
ಹೌದು ಚಿಪ್ಪಿನ ಗಣಪ ನನಗೂ ಬಲು ಇಷ್ಟವಾಯ್ತು. ಮುಂಬೈಯಲ್ಲಿರುವ ಸ್ನೇಹಿತರಿಗೆ ಅದು ಸಿಕ್ಕರೆ ತೆಗೆದಿಡಲು ತಿಳಿಸಿರುವೆ, ನನ್ನ ಕಲೆಕ್ಷನ್ ಗೆ!
ಅಂದಹಾಗೆ ನಿಮ್ಮ ಗಣೇಶ ಹಬ್ಬದ ಫೋಟೋಗಳೂ ಬಹಳ ವೈವಿಧ್ಯಮಯವಾಗಿವೆ:)

Sreevidya said...

Very nice post Roopa.Its nice to see people are opting for greener options. The link for paper ganesha is not working, pls correct maadi.

ರೂpaश्री said...

Thanks vidya for letting me know about the broken link:) Have fixed it now..

Swaram said...

The coconut shell Ganesha is so nice. Superb idea! Thanks for sharing the link :)