Tuesday, August 4, 2009

ವಿದೇಶದಲ್ಲಿ ವರಮಹಾಲಕ್ಷ್ಮಿ!!!

ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಫೋಟೋಗಳಿವು.ಮದ್ಯಾಹ್ನದ ನೈವೇದ್ಯಸಂಜೆಯ ನೈವೇದ್ಯ
ನನ್ನ ಮಗಳು ನಮ್ಮೊಂದಿಗೆ ಹಬ್ಬ ಮಾಡಿದ್ದು ಹೀಗೆ.

ಪ್ರತಿಸರ್ತಿ ನಮ್ಮ ಮನೆಯ ಹಬ್ಬದ ಫೋಟೋಗಳನ್ನು ನೋಡಿದಾಗ ನನ್ನ ಹಲವು ಗೆಳೆಯರು ’ದೂರದೂರಿನಲ್ಲಿದ್ದು ಇವೆಲ್ಲಾ ಮಾಡ್ತೀಯಾ?’ಅಂತ ಆಶ್ಚರ್ಯದಿಂದ ಕೇಳೋದುಂಟು. ಅವರುಗಳಿಗೆ ನಾನೊಬ್ಬಳೇ ಅಲ್ಲ, ನನ್ನ ಹಾಗೆ ವಿದೇಶದಲ್ಲಿದ್ದು ಬಹಳ ಶ್ರದ್ಧೆ ಆಸಕ್ತಿಯಿಂದ ಹಬ್ಬ ಮಾಡುವ ಹಲವು ಸ್ನೇಹಿತೆಯರ ಪರಿಚಯ ಮಾಡಿಸೋ ಹಂಬಲ. ಹಬ್ಬ ಮುಗಿದು ನಾಲ್ಕೈದು ದಿನಗಳಾದರೂ ನನ್ನ ಹಬ್ಬದ ಫೋಟೋಗಳನ್ನು ಹಾಕದೇ ಇರಲು ಕಾರಣ ಇದೇ, ಎಲ್ಲರ ಫೋಟೋಗಳಿಗಾಗಿ ಕಾಯ್ತಾಯಿದ್ದೆ.

ಅಮೇರಿಕಾದಲ್ಲಿರುವ ನನ್ನ ಹಲವಾರು ಸ್ನೇಹಿತೆಯರು ಹಬ್ಬ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಿದ್ದರು, ಅವರ ಫೋಟೋಗಳನ್ನ ನನ್ನೊಂದಿಗೆ ಹಂಚಿಕೊಂಡರು. ಬನ್ನಿ ಅವರೆಲ್ಲರ ಮನೆ ದೇವಿಯ ದರ್ಶನ ಮಾಡಿ ಬರೋಣ.

ಫ್ಲೋರಿಡಾದ ಫೋರ್ಟ್ ಲಾಡರ್ಡೇಲ್ ನಲ್ಲಿರುವ ಆತ್ಮೀಯ ಗೆಳತಿ, ಒಳ್ಳೆ ಹಾಡುಗಾರ್ತಿ ’ಸ್ಪೂರ್ತಿ’ ಇತರರಿಗೆ ಸ್ಪೂರ್ತಿ ಮೂಡುವಂತೆ ಹಬ್ಬ ಮಾಡಿದ್ದಾರೆ. ಅವರು ಎಷ್ಟು ಸುಂದರವಾಗಿ ದೇವರಿಗೆ ಸೀರೆಯುಡಿಸಿದ್ದಾರೆ ಗಮನಿಸಿ. ಇಲ್ಲೀಗ MS ಓದಲು ಹೊರಟಿರುವ ಅವರಿಗೆ ಶುಭವನ್ನು ಹಾರೈಸುತ್ತೇನೆ.2008ರ ಹಬ್ಬ!!

ಕ್ಯಾಲಿಫೋರ್ನಿಯಾದಲ್ಲಿರುವ ರೀಮಾ, ದೇವಿಯನ್ನು ಪೂಜೆ ಮಾಡಿದ್ದು ಹೀಗೆ ಹಲವು ಬಗೆಯ ದೀಪಗಳನ್ನು ಹಚ್ಚಿ, ಸೀರ್ಯುಡಿಸಿ, ನವಿಲುಗರಿಯಿಂದ ಅಲಂಕರಿಸಿ...
ಮಿನಿಯಾಪೋಲಿಸ್ ನಲ್ಲಿರುವ ಪೂಜಾ ಅವರು ಚಿನ್ನ ಮತ್ತು ಬೆಳ್ಳಿಯ ಹೂವುಗಳಿಂದ ಲಕ್ಷ್ಮಿಯನ್ನು ಪೂಜೆ ಮಾಡಿದ್ರು. ಕೆಲವೊಮ್ಮೆ ಇಲ್ಲಿ ಪೂಜೆಗೆ ಹೂವು ಸಿಗುವುದು ಬಲು ಕಷ್ಟ, ಅಂತ ಸಮಯದಲ್ಲಿ ಈ ಹೂವುಗಳು ಬಲು ಉಪಯುಕ್ತ! ಪೂಜಾ ಅವರು ಹಬ್ಬಕ್ಕೆ ತಮ್ಮ ಮನೆಗೆ ಅರವತ್ತಕ್ಕೂ ಹೆಚ್ಚಿನ ಸ್ನೇಹಿತರನ್ನು ಕರೆದಿದ್ದರಂತೆ!!!
ಇದೇ ರೀತಿ ನನ್ನ ಇನ್ನೊಬ್ಬ ಗೆಳತಿಯ ಬಳಿ ಬೆಳ್ಳಿಯ ವೀಳ್ಯದೆಲೆ, ಬಾಳೆಕಂಬ, ತೆಂಗಿನಕಾಯಿ, ತುಳಸಿಕಟ್ಟೆ ಇತ್ಯಾದಿಗಳಿವೆ. ಅಂತೂ ಎಲ್ಲೇ ಇದ್ದರೂ ಹಬ್ಬ ಮಾಡಬೇಕು ಅನ್ನೋ ಮನಸಿದ್ದರೆ ಹೀಗೆ ಏನಾದರು ಒಂದು ದಾರಿ ಹುಡುಕಿಕೊಂಡು ಮಾಡಬಹುದು ಅಲ್ವೆ:)

ಕೇಕ್ ರಾಣಿ ಎಂದೇ ಸ್ನೇಹಿತರಿಂದ ಕರೆಸಿಕೊಳ್ಳುವ ಅಟ್ಲಾಂಟದಲ್ಲಿರುವ ನಮ್ರತಾ ಬಿಡುವಿಲ್ಲದ ಕೇಕ್ ಆರ್ಡರ್ ಕೆಲಸದ ಮಧ್ಯೆಯೂ ಎಷ್ಟು ಚೆನ್ನಾಗಿ ಹಬ್ಬ ಮಾಡಿದ್ದಾರೆ ನೋಡಿ.
ಮೇರಿಲ್ಯಾಂಡಿನಲ್ಲಿರುವ ವಿನುತಾಪ್ರಸಾದ್ ಅವರು ಕೆಲಸಕ್ಕೆ ಹೋಗುತ್ತಿದ್ದರೂ ಹಬ್ಬ ಮಾಡೋದನ್ನ ನಿಲ್ಲಿಸಿಲ್ಲ. ಬೆಳಗ್ಗೆ ಬೇಗ ಎದ್ದು ಹಬ್ಬ ಮಾಡಿ ನಂತರ ಕೆಲಸಕ್ಕೆ ಹೋಗ್ತಾರೆ. ಅವರ ಮನೆ ಲಕ್ಷ್ಮಿದೇವಿ..ಹಬ್ಬಗಳಲ್ಲಿ ವಿಧವಿಧವಾದ ಅಲಂಕಾರ ಮಾಡೋದು ಅಂದ್ರೆ ಚಿತ್ರಶ್ರೀ ಅವರಿಗೆ ಬಲು ಇಷ್ಟ. ಇವರ ಹಲವು ಹಬ್ಬಗಳ ಫೋಟೋಗಳು ಪ್ರಜಾವಾಣಿ ಮತ್ತಿತರ ಪತ್ರಿಕೆಗಳಲ್ಲಿ ಪೋಸ್ಟಾಗಿವೆ!! ಅವರ ಕೆಲವು ಹಬ್ಬಗಳ ಫೋಟೋಗಳು...


ಆರ್ಕುಟ್ ನಲ್ಲಿರುವ Mrs South Indies ಎಂಬ ಬಳಗದ ಸದಸ್ಯೆಯರು ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿದ್ದು ಹೀಗೆ.

ಕಾರ್ಡಿಫ್ (UK)ನಲ್ಲಿರೋ ನನ್ನತ್ತಿಗೆ ಸಂಭ್ರಮದಿಂದ ಲಕ್ಷ್ಮಿ ಹಬ್ಬವನ್ನು ಆಚರಿಸಿದರು. ಹಬ್ಬದ ಫೋಟೋಗಳು ಇಲ್ಲಿವೆ.
ನ್ಯೂಜರ್ಸಿಯಲ್ಲಿರುವ ಶ್ರೀ ಅವರು ತಮ್ಮ ಬ್ಲಾಗಿನಲ್ಲಿ ವರಮಹಾಲಕ್ಷ್ಮಿಹಬ್ಬದ ಆಚರಣೆಯ ಬಗ್ಗೆ ಪೂರ್ತಿ ವಿವರ ಕೊಟ್ಟಿದ್ದಾರೆ.

"ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಹಿರಿಯರು, ದೇವರು ಅಂದ್ರೆ ಭಯ-ಭಕ್ತಿಯಿಲ್ಲ" ಎಂದು ಎಲ್ಲರನ್ನು ಜನರಲೈಸ್ ಮಾಡಿ ಹೇಳೊ ಮಂದಿ, "ಅಮೇರಿಕಾಗೆ ಹೋದ ಮೇಲೆ ಬರೀ ಪ್ಯಾಂಟ್, ಸ್ಕರ್ಟ್ ಹಾಕ್ತಾಳೆ..ಇನ್ನು ಸಂಸಾರ ಹೇಗೆ ಮಾಡ್ತಾಳೋ" ಎಂದೆಲ್ಲಾ ರಾಗವೆಳೆಯೋ ಜನರೆಲ್ಲಾ ಒಮ್ಮೆ ಈ ಫೋಟೋಗಳನ್ನು ನೋಡಿ ನಿಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಿ.
ಹಾಗೆಯೆ, ಇಂಡಿಯಾದಲ್ಲಿದ್ದೇ "ಅಯ್ಯೋ, ಇವೆಲ್ಲಾ ಮಾಡಲು ನಮಗೆ ಟೈಮಿಲ್ಲ.. ರಂಗೋಲಿ ಬಿಡಲು ಬರೋದಿಲ್ಲ.. ಅಡಿಗೆ ಮಾಡಲು ಬರಲ್ಲ.. ಇದೆಲ್ಲಾ ಹಳೆ ಫ್ಯಾಷನ್.." ಇತ್ಯಾದಿ ಹೇಳುವ ಹೆಂಗಳೆಯರೂ ಇದರಿಂದ ಉತ್ತೇಜನ ಹೊಂದಲಿ :))

33 comments:

ಸಂದೀಪ್ ಕಾಮತ್ said...

Colorful article!

Spurthi Girish said...

Ellara mane lakshmi habba nodi thumba khushi aythu!! Nanna mane lakshmi pujeyanna nimma blognalli nodi khushi aythu!!! Thumba thanks!!..:)

ರೂpaश्री said...

Thanks sandeep!!

ರೂpaश्री said...

spurthi,
nimage khushi aaytu aMdre nanagoo khushi:)
phOTOgaLanna haakalu anumati koTTidakke vaMdanegaLu!!!

Guru's world said...

ರೂಪಶ್ರಿ,
ತುಂಬ ಖುಷಿ ಆಯಿತು, ಇದನ್ನೆಲ್ಲಾ ನೋಡಿ.....ಇಲ್ಲೇ ಇಷ್ಟು ಶ್ರದ್ದೆ ಇಂದ , ಭಕ್ತಿ ಇಂದ ಮಾಡುವವರು ಕಮ್ಮಿ ಆಗಿದ್ದರೆ......ಅದರಲ್ಲಿ ಹೊರದೇಶದಲ್ಲಿ ಇರುವ ಎಲ್ಲರೂ ಇಷ್ಟು ಚೆನ್ನಾಗಿ ಆಚರಣೆ ಮಾಡುತ್ತಾ ಇದ್ದಿರಲ್ವ .

ಗುಡ್.... ಕೀಪ್ ಇಟ್ ಅಪ್

ಗುರು

ವನಿತಾ / Vanitha said...

ರೂಪಶ್ರೀ,
ಒಳ್ಳೆಯ ಫೋಟೋಗಳೊಂದಿಗೆ ಒಳ್ಳೆಯ ವಿವರಣೆ...ನಮ್ಮ ಫ್ರೆಂಡ್ಸ್ ಗಳ ಹಬ್ಬದ ಫೋಟೋ ಮೊದಲೇ ನೋಡಿದ್ದರು ಕೂಡ ನಿಮ್ಮ ಬ್ಲಾಗ್ ನಲ್ಲಿ ನೋಡಿ ತುಂಬಾ ತುಂಬಾ ಖುಷಿ ಯಾಯಿತು..nice article..

Subodh said...

Tumba chennagide, ellaru bala grand agi habba madiddira.

archana said...

ವಿದೇಶದಲ್ಲಿ ವರಮಹಾಲಕ್ಷ್ಮಿ ತುಂಬಾನೆ ವೈಭವದಿಂದ ಮೂಡಿ ಬಂದಿದೆ ,ಎಲ್ಲರ ಮನೆ ಲಕ್ಷ್ಮಿ ನೋಡಿ ತುಂಬಾನೆ ಸಂತೋಷ ಆಯಿತು.Last paragraph ws really punching ,it proved tht
if we have respect for our culture and tradition,we can do wonders generation age,place noting matters.Hope its a eye opening for everyone..hope to see..videshadalli vinayakana vihara in ur next update.

Ruchi Ruchi Adige said...

Ellara mane habba nodi kushi aaythu.. :)
Ellara mane habbada bagge kptta description thumba chennagide... :)

Umesh Balikai said...

ವರ ಮಹಾಲಕ್ಷ್ಮಿ ಹಬ್ಬದ ಫೋಟೋಗಳು ತುಂಬಾ ಚೆನ್ನಾಗಿವೆ. ಬಹುಶಃ ನೀವೆಲ್ಲ ಇಲ್ಲಿಯೇ ನಮ್ಮ ದೇಶದಲ್ಲಿಯೇ ಇದ್ದಿದ್ದರೆ ಇಷ್ಟೊಂದು ಚೆನ್ನಾಗಿ ಹಬ್ಬ ಮಾಡುತ್ತಿದ್ದೀರೋ ಇಲ್ವೋ ಗೊತ್ತಿಲ್ಲ.. ಏಕೆಂದರೆ, ನಮ್ಮ ಸಂಸ್ಕೃತಿಯಿಂದ, ಸಂಪ್ರದಾಯಗಳಿಂದ ದೂರವಿದ್ದಾಗಲೇ, ಅವು ನಮ್ಮಿಂದ ದೂರವಾಗುತ್ತಿವೆ ಎಂಬ ಭಯವಾದಾಗಲೇ ನಮಗೆ ಅದರ ಬಗೆಗಿನ ಶ್ರದ್ಧೆ, ಭಾವನೆಗಳು ಹೆಚ್ಚು ಜಾಗೃತವಾಗುವುದು, ಅಲ್ಲವೇ. ನಿಜಕ್ಕೂ ತುಂಬಾ ಖುಷಿಯಾಗುತ್ತೆ ನೀವೆಲ್ಲ ಅಷ್ಟು ದೂರದ ಪರ ದೇಶದಲ್ಲಿ ಕೆಲಸ ಮಾಡಿಕೊಂಡು ಇದ್ದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವೆನಿಸುವ ಹಬ್ಬಗಳನ್ನು ಅಷ್ಟೊಂದು ಶ್ರದ್ಧಾಪೂರ್ವಕವಾಗಿ ಆಚರಿಸೋದು ನೋಡಿ. ವರ ಮಹಾಲಕ್ಷ್ಮಿ ದೇವಿ ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ದಯಪಾಲಿಸಲೆಂದು ಆಶಿಸುತ್ತೇನೆ.

-ಉಮೇಶ್

sitaram said...

Nice article & photos.
Holige bayalli neerurisuttide. Tindi tattegalu manasanna kalkutta ive. habba henmakkalu madli. Naavu yella meydu bidonaa.

ರೂpaश्री said...

ಗುರು,
ನಿಮ್ಮ ಮೆಚ್ಚುಗೆ ಮತ್ತು ಪ್ರೋತ್ಸಾಹಕ್ಕೆ ಥ್ಯಾಂಕ್ಸ್!!

ರೂpaश्री said...

ಧನ್ಯವಾದಗಳು ವನಿತಾ! ಫ್ರೆಂಡ್ಸ್ ನಮ್ಮವರು ಆದ್ದರಿಂದ ಇಷ್ಟ ಆಗೋದು ಖಂಡಿತಾ ಅಲ್ವಾ? :)

ರೂpaश्री said...

ಸುಬೋದ್,
ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಪ್ರತಿಕ್ರಿಯಿಸಿದಕ್ಕೆ ವಂದನೆಗಳು!!
ನೀವು k.com ನಲ್ಲಿದ್ದವರಾ?

ರೂpaश्री said...

ಅರ್ಚನಾ,
ನನಗೂ ಎಲ್ಲರ ಮನೆ ಪೂಜೆ ಫೋಟೋ ನೋಡಿ ನಿಮ್ಮಷ್ಟೇ ಸಂತೋಷವಾಗಿದೆ. ನಿಮ್ಮ ಮಾತು ನಿಜ, ಆಸಕ್ತಿಯಿದ್ದಲ್ಲಿ ಇದ್ಯಾವುದೂ ಅಡೆತಡೆ ಅನಿಸೊಲ್ಲಾ..."ಮನಸಿದ್ದ್ರೆ ಮಾರ್ಗ" ಅಲ್ವಾ? ":)
ಕಳೆದ ಬಾರಿ ಎಲ್ಲರ ಮನೆ ಗಣಪತಿ ಹಬ್ಬದ ಫೋಟೋಗಳಿವೆ ನೋಡಿ ಬ್ಲಾಗಿನಲ್ಲಿ.

ರೂpaश्री said...

ಕೃಷ್ಣವೇಣಿ,
ಫೋಟೋ ಮತ್ತು ಲೇಖನ ಮೆಚ್ಚಿದಕ್ಕೆ ವಂದನೆಗಳು:)
ಹೆಸರಿಗೆ ತಕ್ಕಂತೆ ರುಚಿರುಚಿ ಅಡಿಗೆ ಮಾಡಿ ಎಲ್ಲರಿಗೂ ತಿಳಿಸುತ್ತಿರುವ ನಿಮ್ಮ ಬ್ಲಾಗ್ ಚೆನ್ನಾಗಿದೆ!!

ರೂpaश्री said...

ಉಮೇಶ್ ಅವರೆ,
ನಿಮ್ಮ ಮಾತು ನಿಜವಿರಲೂ ಬಹುದು, ಒಂದು ವಸ್ತುವಿನಿಂದ ದೂರವಾದಾಗಲೇ ಅದರ ಪ್ರಾಮುಖ್ಯತೆ ನಮಗೆ ತಿಳಿಯೋದು. ರಕ್ಷಾಬಂಧನದ ದಿನ ತಂಗಿಯನ್ನು ಮಿಸ್ಸ್ ಮಾಡಿಕೊಂಡ ನಿಮಗೆ ಅದರ ಅನುಭವ ಆಗಿದೆ ಅಲ್ವ? :)
ನನ್ನ ಆ ಮಾತುಗಳು ’ಎಲ್ಲರನ್ನು ಜನರಲೈಸ್ ಮಾಡಿ ಹೇಳಿಕೆ’ ನೀಡೋ ಜನಗಳಿಗೆ ಬರೆದದ್ದು. ನಿಮ್ಮ ಹಾರೈಕೆಗಳಿಗೆ ವಂದನೆಗಳು, ಬರ್ತಾಯಿರಿ.

ರೂpaश्री said...

ಸೀತಾರಾಮ್ ಅವರೆ,
ಲೇಖನ ಮತ್ತು ಫೋಟೋಗಳನ್ನು ಮೆಚ್ಚಿದಕ್ಕೆ ವಂದನೆಗಳು. ಹಬ್ಬಗಳ ಉದ್ದೇಶಗಳಲ್ಲಿ ’ಎಲ್ಲರೂ ಒಟ್ಟಾಗಿ ರುಚಿರುಚಿ ಅಡುಗೆ ಮಾಡಿ ತಿನ್ನೋದು’ ಅದೂ ಒಂದು ಅಲ್ವಾ:)

sritri said...

ರೂಪಾ, ಎಲ್ಲರ ಮನೆ ಲಕ್ಷ್ಮಿಯರನ್ನು ಒಂದೆಡೆಗೆ ಸೇರಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಗೊಂಬೆ ಹಬ್ಬದಲ್ಲೂ ಹೀಗೇ ಎಲ್ಲರ ಮನೆಯ ಫೋಟೋ ಸಂಗ್ರಹಿಸಿ ಪ್ರಕಟಿಸಿದರೆ ಚೆನ್ನಾಗಿರುತ್ತದೆ. ಅಥವಾ ಈ ಹಿಂದೆ ಮಾಡಿದ್ದರೆ ಲಿಂಕ್ ಕೊಡಿ.

shivu said...

ಅರೆರೆ...ರೂಪಾಶ್ರೀ,

ನಾನು ಕೇರಳಾಗೆ ಹೋಗಿ ಬರುವಷ್ಟರಲ್ಲಿ ಎಷ್ಟೊಂದು ನಿಮ್ಮ ಗೆಳೆಯರ ಮನೆಯ ವರಮಹಾಲಕ್ಷ್ಮಿ ಹಬ್ಬದ ಫೋಟೋಗಳನ್ನು ಕಲೆಕ್ಟ್ ಮಾಡಿಬಿಟ್ಟಿದ್ದೀರಿ. ವಿದೇಶದಲ್ಲಿದ್ದುಕೊಂಡು ಇಷ್ಟೋಂದು ಚೆನ್ನಾಗಿ ಆಚರಿಸುವ ಅವರಿಗೆಲ್ಲಾ ನನ್ನ ಅಭಿನಂದನೆಗಳು. ಇದನೆಲ್ಲಾ ಸಾವಕಾಶವಾಗಿ ಪ್ರೀತಿಯಿಂದ ಕಲೆಕ್ಟ್ ಮಾಡಿದ ನಿಮಗೂ ಧನ್ಯವಾದಗಳು.

L'Etranger said...

Absolutely awesome!! Tallahassee tumbA dUra AgOytu, illa andidre prati habbakkU nimma manelli hAjar Agtidde! Hope you will move to Chicago soon! ;)

ಏಕಾಂತ said...

ನಮಸ್ತೆ...
ಬೆಂಗಳೂರಿಗೆ ಬಂದಾಗಿನಿಂದ ಹಬ್ಬಗಳ ಸಡಗರ ಸದ್ದು ಕಳೆದುಕೊಂಡಿದೆ. ಕೆಲವೊಂದು ಮರೆತೂ ಹೋಗಿದೆ. ಆದರೆ ಸಾಗರದಾಚೆಗಿನ ಊರಲ್ಲಿ ಇಷ್ಟು ಸುಂದರವಾಗಿ ಆಚರಿಸುವ ರೀತಿ ನಿಜಕ್ಕೂ ಖುಷಿತರುತ್ತೆ. ಮತ್ತೆ ಬರೆಯಿರಿ...

Mahesh said...

ರೂಪಾ,
ವರಮಹಾಲಕ್ಷ್ಮಿ ಹಬ್ಬ ಬಹಳ ವೈಭವದಿಂದ ಆಚರಿಸಿದ್ದೀರಾ....ಹಬ್ಬದ ಫೋಟೋಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ....
ನಿಮ್ಮ ಸ್ನೇಹಿತೆಯರ ವರಮಹಾಲಕ್ಷ್ಮಿ ಹಬ್ಬದ ಫೋಟೋಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಕೊನೆಯ ಸಾಲಿನಲ್ಲಿ ಸೂಪರ್ ಪಂಚ್ ಇತ್ತು......ಹೀಗೆ ಎಲ್ಲ ಆಚರಣೆಗಳನ್ನು ತಿಳಿ ಹೇಳುತ್ತೀರಿ...

ರೂpaश्री said...

ತ್ರಿವೇಣಿ ಅವರೆ,
ಗೊಂಬೆ ಹಬ್ಬದ ಫೋಟೋಗಳನ್ನ ನೆನಪಿಸಿದಕ್ಕೆ ಥ್ಯಾಂಕ್ಸ್. ನಾನು ಈ ಹಬ್ಬ ಮಾಡುವುದಿಲ್ಲ, ಆದ್ರೆ ಸ್ನೇಹಿತೆಯರ ಫೋಟೋಗಳಿವೆ ಅವರು ಅನುಮತಿ ಕೊಟ್ಟರೆ ಈ ವರ್ಷದ ಫೋಟೋಗಳೊಂದಿಗೆ ಪ್ರಕಟಿಸುವೆ. ಕಳೆದ ವರ್ಷ ಇದೇ ರೀತಿ ಗಣೇಶ ಹಬ್ಬ ಮತ್ತು ದೀಪಾವಳಿ ಫೋಟೋಗಳನ್ನು ಪೋಸ್ಟ್ ಮಾಡಿದ್ದೆ ನೋಡಿರಿ.

ರೂpaश्री said...

ಶಿವು ಅವರೆ,
ಎಲ್ಲರ ಮನೆಯ ಹಬ್ಬದ ಫೋಟೋಗಳನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್. ನಿಮ್ಮ ಅಭಿನಂದನೆಗಳನ್ನು ಎಲ್ಲರಿಗೆ ತಿಳಿಸುವೆ:)

ನೀವುಗಳು ಕೇರಳಕ್ಕೆ ಹೋಗಿ ಬಂದ್ರಿ ಅಂದ್ರೆ ಸದ್ಯದಲ್ಲೇ ನಮಗೆಲ್ಲಾ ಹಾವಿನ ದೋಣಿಗಳ ನ್ನು ನಿಮ್ಮ ಮತ್ತು ಮಲ್ಲಿಕಾರ್ಜುನರ ಬ್ಲಾಗಿನಲ್ಲಿ ನೋಡೋ ಅವಕಾಶವಿದೆ ಅಂತ ಆಯ್ತು!!

ರೂpaश्री said...

Thanks a lot SB:) Why dont you make use of the 'WFH' facility that u SWEngrs have and come over here!!

ರೂpaश्री said...

ಏಕಾಂತ ಅವರೆ,
ನನ್ನ ಬ್ಲಾಗಿಗೆ ಸ್ವಾಗತ!
ನಾನು ನನ್ನ ಬೆಂಗಳೂರಿನ ಹಬ್ಬದ ದಿನಗಳನ್ನು ನೆನೆಯುತ್ತಾ, ಅದನ್ನ ಮಿಸ್ಸ್ ಮಾಡಿಕೊಳ್ಳುತ್ತಾ ಬರೆದರೆ ನೀವು "ಬೆಂಗಳೂರಿಗೆ ಬಂದಾಗಿನಿಂದ ಹಬ್ಬಗಳ ಸಡಗರ ಸದ್ದು ಕಳೆದುಕೊಂಡಿದೆ" ಅಂತೀರಿ.. ನಿಮ್ಮೂರಿನ ಹಬ್ಬದ ಸಡಗರವನ್ನೂ ಹಂಚಿಕೊಳ್ಳಿ!
ಬರ್ತಾಯಿರಿ..

ರೂpaश्री said...

ಮಹೇಶ್ ಅವರೆ,
ನನ್ನ ಮತ್ತು ನನ್ನ ಸ್ನೇಹಿತೆಯರ ಹಬ್ಬದ ಫೋಟೋಗಳನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್!!

Sreevidya said...

Roopa
ellara maneya habbada photos thumba chennagide. eshTondu utsaahadinda habba aacharisiddare, noDi khushi aayitu. 3 cheers to all the ladies :)Thanks for sharing the photos.

ರೂpaश्री said...

Vidya,
phOTOgaLanna mecchidakke thanks!! neevoo kooDa aShTe utsaahadiMda habba maaDteera alwa!

LG said...

aa taayi varamahalakshmi nimma poojege mechi nimma maneyalli nelasali antha nanna haaraike

ರೂpaश्री said...

LG,
ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು! ನಿಮಗೂ ಲಕ್ಷ್ಮಿದೇವಿ ಕೃಪಾಕಟಾಕ್ಷ ಸದಾಯಿರಲಿ:)

Chithra said...

Thanks Roopashri for uploading my pics...hope all u r photo collections will inspire others too do pooja(Beautifull Festival)