Pages

Friday, July 17, 2009

ಡಿಸೈನರ್ ಕವಿತೆಗಳು !!!

ಡಿಸೈನರ್ ಬಟ್ಟೆ , ಡಿಸೈನರ್ ವಾಚ್, ಡಿಸೈನರ್ ಟೋಪಿ ಎಲ್ಲಾ ಗೊತ್ತು ಇದ್ಯಾವುದ್ರಿ ರೂಪ ಡಿಸೈನರ್ ಕವಿತೆ ಅಂತೀರಾ? ಬನ್ನಿ ನೋಡೋಣ ಡಿಸೈನ್ ಡಿಸೈನ್ ಕವಿತೆಗಳನ್ನ....




ಮೊನ್ನೆ ಲೈಬ್ರರಿಗೆ ಹೋಗಿದ್ದಾಗ ಅಲ್ಲಿ ಮಕ್ಕಳಿಗೆ ರೀಡಿಂಗ್ ಟೈಂ ನಡಿತಾಯಿತ್ತು. ನೋಟಿಸ್ ಬೋರ್ಡಿನಲ್ಲಿ ಅಂದಿನ ವಿಷಯ "ಶೇಪ್ಡ್ ಪೋಯಟ್ರಿ" ಅಂತಿತ್ತು. ಕುತೂಹಲ ಹೆಚ್ಚಾಗಿ ಅತ್ತ ಹೋದೆ. ಅಲ್ಲಿ ನಾನು ಕಂಡದ್ದು ಇವು:



shape-poem-01.gif


ಈ ರೀತಿಯ ಪದ್ಯವನ್ನು ಕಾಂಕ್ರೀಟ್ ಪೊಯೆಟ್ರಿ ಅಂತಲೂ ಕರಿತಾರೆ. ಕವಿತೆಯಲ್ಲಿ ರುವ ವಸ್ತುವಿನ ರೂಪದಲ್ಲೇ ಪದ್ಯವನ್ನು ಬರೆಯುವುದೇ ಇದರ ವಿಶೇಷ. ಮರ, ಕಾಮನಬಿಲ್ಲು, ದೋಣಿ, ಬಗ್ಗೆ ಬರೆದ ಪದ್ಯಗಳೆಲ್ಲಾ ಅದೇ ಆಕಾರದಲ್ಲಿ ಇರುತ್ತವೆ. ಉದಾಹರಣೆಗೆ ಕೆಳಗಿನ ಚಿತ್ರಕವಿತೆಗಳನ್ನು ನೋಡಿ..

This
Christmas
end a quarrel.
Seek out a forgotten
friend. Dismiss suspicion,
and replace it with trust.
Write a love letter. Share some
treasure. Give a soft answer. Keep
a promise. Find the time. Forgo a grudge.
Forgive an enemy. Listen. Apologize if you
were wrong. Try to understand. Examine your
demands on others. Think first of someone else. Be
Be kind; be gentle. Appreciate. Laugh a little. Laugh a
little more. Express your gratitude. Gladden the heart of a
child. Welcome a stranger. Take pleasure in the beauty and the
wonder of Earth.
Speak your love.
Speak it again.
Speak it yet
Once again.

boat.jpg


ಅಲ್ಲಿ ಬಂದಿದ್ದ ಮಕ್ಕಳಿಗೆ ಇಂತಹ ಶೇಪ್ ಪೋಯಮ್ಸ್ ಬರೆಯಲು ಅವರು ಉತ್ತೇಜಿಸುತ್ತಿದ್ದರು. ಒಂದು ಚಿತ್ರವನ್ನು ಕೊಟ್ಟು ಅದರ ಕುರಿತು ಪದ್ತ ಬಎರಯಬೇಕು, ಅದೂ ಆ ಚಿತ್ರ್ದ ಒಳಗೆ ಪದಗಳು ಮೂಡುವಂತೆ. ಚೆನ್ನಾಗಿತ್ತು ಆ ಆಟ. ಮಕ್ಕಳು ಆಟವಾಡುತ್ತಲೇ ಪದ್ಯಗಳನ್ನು ಬರೆಯುತ್ತಿದ್ದರು. ಮನೆಯಲ್ಲಿ ಪುಟ್ಟಿಗೆ ಊಟದ ಸಮಯವಾಗಿತ್ತಾದ್ದರಿಂದ ಅಲ್ಲಿಂದ ಮನಸಿಲ್ಲದೇ ಬೇಗ ಹೊರಟೆ.

ನನಗೆ ಲೈಬ್ರರಿಯಲ್ಲಿ ಒಂದು ಪುಸ್ತಕವೂ ಸಿಕ್ಕಿತು. A Poke in the I: Paul Janeczko ಅವರು ಬರೆದಿರುವ ಈ ಪುಸ್ತದಲ್ಲಿ ಬಹಳಷ್ಟು ಇಂತಹ ಪದ್ಯಗಳಿವೆ. ಎಸ್ಕಿಮೊ ಪೈ ಮತ್ತು ಪೊಪ್ಸಿಕಲ್ ಇವೆರಡು ಐಸ್ ಕ್ರೀಮ್ ನ ಆಕಾರದಲ್ಲಿ ಮೂದಿವೆ. ಬಾತುಕೋಳಿ ಮತ್ತದರ ನೆರಳು ನನಗೆ ತುಂಬಾ ಇಷ್ಟವಾಗಿದ್ದು.

ಹೈಸ್ಕೂಲಿನಲ್ಲಿದ್ದಾಗ ಸಂಸ್ಕೃತದ ಮೇಷ್ಟ್ರು ಸ್ಕೂಲ್ ಎಕ್ಸಿಬಿಶನ್ ಸಮಯದಲ್ಲಿ ನಮ್ಮಿಂದ ಮಾಡಿಸುತ್ತಿದ್ದ ಚಾರ್ಟ್ ಗಳಲ್ಲಿ ಇಂತಹ ಹಲವು ಡಿಸೈನಿನ ಕವಿತೆಗಳು ಇದ್ದವು. ಆದರೆ ಸದ್ಯಕ್ಕೆ ಅವ್ಯಾವು ನೆನಪಿಗೆ ಬರ್ತಾಯಿಲ್ಲ:(

ಗೂಗಲ್ ದೇವರ ಹತ್ರ ಸಿಕ್ಕದ್ದು ಏನಿದೆ ಹೇಳಿ, ಹೆಚ್ಚಿನ ವಿವರ ಹುಡುಕುತ್ತಾ ಕುಳಿತೆ.

ಅಲ್ಲದೇ ಅಲೆಮಾರಿ ಎಂಬುವವರು ಇಂತಹದೇ ಒಂದು ಪ್ರಯತ್ನವನ್ನು ಮಾಡಿ ಜೊತೆಗೆ ಇಂತಹ ಕವಿತೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನೂ ಕೊಟ್ಟಿದ್ದಾರೆ. ಓದಿ ಆನಂದಿಸಿರಿ.

30 comments:

shivu.k said...

ರೂಪಶ್ರೀ,

ನೀವು ಬಲೇ ಕುತೂಹಲಕಾರಿ ಮನಸ್ಸುಳ್ಳವರು ಅನ್ನಿಸುತ್ತೆ. ಏಕೆಂದರೆ, ನಾನು ಬರೆದ ಚಿಟ್ಟೆ ಲೇಖನಕ್ಕೆ ನೀವು ಅದೆಲ್ಲಿಂದಲೋ ಇನ್ನಷ್ಟು ಮಾಹಿತಿಯನ್ನು ಹುಡುಕಿತಂದು ಕೊಡುತ್ತಿರಿ. ಮಲ್ಲಿಕಾರ್ಜುನ್ ಬರೆದ ನಾಲ್ಕು ಆನೆ ದಂತ ಲೇಖನಕ್ಕೆ ಅದೆಲ್ಲಿಂದಲೋ ಅದರ ಪುಸ್ತಕ ಹುಡುಕಿ ಓದಿ ಮಾಹಿತಿ ನೀಡುತ್ತೀರಿ..ಈಗ ನೋಡಿದರೇ ಷೇಪ್ಡ್ ಪೊಯೆಟ್ರಿ..ಎನ್ನುವ ವಿಚಾರವನ್ನು ಹುಡುಕಿ ತಂದಿದ್ದೀರಿ...

ಎಲ್ಲಾ ವಿಚಾರದಲ್ಲೂ ನಿಮಗಿರುವ ಆಸಕ್ತಿ ಕಂಡು ನನಗೆ ಬೆರಗೆನಿಸಿದೆ. ಮತ್ತು ಯಾವುದೇ ಪೂರ್ವಗ್ರಹ ಪೀಡಿತರಾಗದೆ ಎಲ್ಲಾ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಾ ಖುಷಿಪಡುತ್ತೀರಿ...

ಹೀಗೆ ಮುಂದುವರಿಯಲಿ...ನಿಮ್ಮ ಕುತೂಹಲ...

ಧನ್ಯವಾದಗಳು.

Unknown said...

ಡಿಸೈನರ್ ಕವಿತೆಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಏ.ಕೆ.ರಾಮಾನುಜನ್ ಅವರ 'ಅಂಗುಲ ಹುಳುವಿನ ಪರಕಾಯ ಪ್ರವೇಶ' ಎಂಬ ಕವಿತೆಯ ಒಂದು ಸಾಲನ್ನು - ಬೆನ್ನೆಳೆದು ಕಮಾನಾಗಿ ಮೈ ಮಡಿಸಿ- ಅಂಗುಲದ ಹುಳುವಿನ ರೀತಿಯೇ ಮುದ್ರಿಸಲಾಗಿದೆ. ಆದರೆ ಇಡೀ ಕವಿತೆಯನ್ನೇ ಈ ರೀತಿ ವಿವಿಧ ಚಿತ್ರಗಳ ಆಕರತಿಯಲ್ಲಿ ನೋಡಿದ್ದು ಇದೇ ಮೊದಲು. ಧನ್ಯವಾದಗಳು

jithendra hindumane said...

idu tumba chennagide. makkalu istapaduttare...!

Santhosh Rao said...

hahah.... chennagide..

ಕ್ಷಣ... ಚಿಂತನೆ... said...

ರೂಪಶ್ರೀ ಮೇಡಂ, ಡಿಸೈನರ್‌ ಕವಿತೆ - ಟೈಟಲ್‌ ನೋಡಿದಾಗ ಏನಿರಬಹುದು ಎಂಬ ಕುತೂಹಲವಾಯಿತು. ಪುಟಕ್ಕೆ ಹೋಗಿ ನೋಡಿದರೆ ನಿಜಕ್ಕೂ ಅಚ್ಚರಿಯಾಯಿತು. ಇವುಗಳನ್ನು ನೋಡಿದಾಗ/ಓದಿದಾಗ ಹೊಸತನವನ್ನು, ಹುರುಪನ್ನು ಓದುಗರಲ್ಲಿ ಉಂಟುಮಾಡುತ್ತವೆ. ಮಕ್ಕಳ ಚಿತ್ರ ಕಲಿಕೆಗೆ, ನೆನಪಿಗೆ ಇವೆಲ್ಲ ಚೆನ್ನಾಗಿವೆ.

ಕೊನೆಯಲ್ಲಿ ಕೊಟ್ಟಿರುವ ಬಾತುಕೋಳಿ ಚಿತ್ರ+ಕವಿತೆ ತುಂಬಾ ಚೆನ್ನಾಗಿದೆ.

ಧನ್ಯವಾದಗಳು.

ಚಂದ್ರಶೇಖರ ಬಿ.ಎಚ್.

Guruprasad said...

wow.. very interesting....ತುಂಬ ಚೆನ್ನಾಗಿ ಇದೆ .... ಒಳ್ಳೆ ಕ್ರಿಯೇಟಿವಿಟಿ... ಮಕ್ಕಳಿಗೆ.....

ರೂpaश्री said...

ಶಿವು ಅವರೆ,
ನೀವು, ಮಲ್ಲಿಕಾರ್ಜುನ್ ಮತ್ತಿತರರು ಕುತೂಹಲ ಹುಟ್ಟಿಸುವ ಲೇಖನಗಳನ್ನ ಬರಿಯೋದೇ ಇದಕ್ಕೆಲ್ಲಾ ಕಾರಣ. ಹೊಸ ವಿಷಯದ ಬಗ್ಗೆ ಕೇಳಿದರೆ/ ಓದಿದರೆ ಅದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಏನಾದ್ರು ಸಿಕ್ಕುತ್ತಾ ಅಂತ ಹುಡುಕೋ ಅಭ್ಯಾಸವಾಗಿದೆ, ಅದ್ರಲ್ಲೂ ಅಂತರ್ಜಾಲದಲ್ಲಿ ಎಲ್ಲವೂ ಸಿಗುತ್ತೆ ಅನ್ನೋ ನಂಬಿಕೆಯಲ್ಲಿ:)
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ವಂದನೆಗಳು!

ರೂpaश्री said...

ಸತ್ಯ ಸರ್,

ಏ.ಕೆ.ರಾಮಾನುಜನ್ ಅವರ 'ಅಂಗುಲ ಹುಳುವಿನ ಪರಕಾಯ ಪ್ರವೇಶ' ಕವಿತೆಯಲ್ಲಿನ ಹುಳುವಿನ ಆಕಾರದ ಬಗ್ಗೆ ತಿಳಿಸಿದಕ್ಕೆ ವಂದನೆಗಳು.
ಹೀಗೆ ಬರ್ತಾಯಿರಿ, ಹೊಸ ಹೊಸ ಸಾಹಿತ್ಯದ ವಿಷಯಗಳನ್ನು ತಿಳಿಸ್ತಾಯಿರಿ.
ವಂದನೆಗಳು!

ರೂpaश्री said...

ಹೌದು ಜಿತೇಂದ್ರ ಅವರೆ ಮಕ್ಕಳಿಗೆ ಇದು ಬಹಳ ಇಷ್ಟವಾಗುತ್ತೆ ಅನ್ನೋದನ್ನ ಅಂದಿನ ಕ್ಲಾಸ್ ನಲ್ಲಿ ನಾ ನೋಡಿದೆ.
ಧನ್ಯವಾದಗಳು.

ರೂpaश्री said...

ಥ್ಯಾಂಕ್ಸ್ ಸಂತೋಷ್ ಅವರೆ ಬ್ಲಾಗಿಗೆ ಭೇಟಿ ಕೊಟ್ಟಿದಕ್ಕೆ, ಲೇಖನ್ ಓದಿ ಮೆಚ್ಚಿದಕ್ಕೆ, ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ!!

ರೂpaश्री said...

ಚಂದ್ರಶೇಖರ್ ಅವರೆ,
ಹೌದು ಇದು ಮಕ್ಕಳ ಭಾಷ ಕಲಿಕೆಗೆ ಬಹಳ ಉಪಯುಕ್ತ. "ಕಲಿ ನಲಿ" ಅನ್ನೋ ಕಾಂಸೆಪ್ಟ್ ಇಲ್ಲಿನ ಶಾಲೆಗಳಲ್ಲಿದೆ.
ಆ ಬಾತುಕೋಳಿ ಕವನ ನನಗೂ ಬಹಳ ಇಷ್ಟವಾಯಿತು:)

ರೂpaश्री said...

ಗುರು,
ಮಕ್ಕಳಿಗೆ ಮಾತ್ರವಲ್ಲ ನಮಗೂ, ಏನಂತೀರ? :)

Ramesh Avinahalli said...

designer kavithegalu ondu hosa
kalpane. Baashege Bhavane tumbi,
Aksharakke Roopavannu kottaga
Bangarada Hoovige Parimala Bandanthe.

Thumbaa Dhanvyavaadagalu.

Ramesh Avinahalli said...

Designer Kavithe Kalpane Chennagide.Baashege Bhaavane tumbi,
Barahakke Roopa Kottaga Bangaarada Hoovige Parimala Bandanthe Annisuttade.

Thanks

Sreevidya said...

Roopa,

designer poetry is a new and interesting topic for me. intaddu ide anta gottirlilla. idara bagge tiLisidakke dhanyavaadagaLu. heege hosa hosa vishayagaLa bagge baritaayiri :)

Rakesh Holla said...

Tumba chennagide...
In your blog every article has its own charm...
really nice...

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ಡಿಸೈನರ್ ಕವಿತೆಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಇದೇ ಮೊದಲ ಬಾರಿ ನೋಡಿದ್ದು. ಈ ಐಡಿಯಾನೇ ತುಂಬಾ ಚೆನ್ನಾಗಿದೆ. ಅದರಲ್ಲೂ ಅಲ್ಲಿ ಮಕ್ಕಳಲ್ಲಿ ಇಂತಹುದ್ದನ್ನು ಬರೆಯಲು ಪ್ರೇರೇಪಿಸುವುದನ್ನು ತಿಳಿದು ಖುಷಿಯಾಯಿತು ಮತ್ತು ಅಸೂಯೆಯೂ ಆಯಿತು! ಹೊಸ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.

ರೂpaश्री said...

ರಮೇಶ್ ಅವರೆ,
ಈ ರೂಪಕ ಪದ್ಯಗಳನ್ನ "ಬಂಗಾರದ ಹೂವಿಗೆ ಪರಿಮಳ ಬಂದಂತೆ" ಎಂದು ಸೊಗಸಾಗಿ ವರ್ಣಿಸಿದ್ದೀರಿ:)
ವಂದನೆಗಳು!!

ರೂpaश्री said...

ಖಂಡಿತವಾಗಿಯೂ ವಿದ್ಯ, ನನಗೆ ಈ ರೀತಿ ಹೊಸ ವಿಚಾರಗಳು ತಿಳಿದಾಗ ಇಲ್ಲಿ ನಿಮ್ಮೆಲ್ಲರೊಡನೆ ಹಂಚಿಕೊಳ್ಳುವೆ:)

ರೂpaश्री said...

Thanks Rakesh for visiting my blog, appreciating and commenting:)

ರೂpaश्री said...

ಮಲ್ಲಿಕಾರ್ಜುನ್ ಅವರೆ,
ಡಿಸೈನರ್ ಕವಿತೆಗಳನ್ನು ಮೆಚ್ಚಿದಕ್ಕೆ ವಂದನೆಗಳು. ಅಸೂಯೆ ಯಾಕೆ ಸರ್, ಹೊಸ ಐಡಿಯಾ ಸಿಕ್ಕಿದೆಯಲ್ಲಾ ಪ್ರಯೋಗ ಮಾಡಿನೋಡಿ:)

Ittigecement said...

ರೂಪಶ್ರೀಯವರೆ....

ಬಹಳ ತಡವಾಗಿ ಬಂದೆ ಕ್ಷಮಿಸಿ....
ಗೊತ್ತೇ ಆಗಲಿಲ್ಲ...

ಏನೆಲ್ಲ ಮಾಡುತ್ತಾರಪ್ಪ...!
ನಿಜಕ್ಕೂ ಖುಷಿಯಾಗುತ್ತದೆ...

ಇಂಥದ್ದೆಲ್ಲ ತುಂಬ ಆಸ್ಥೆಯಿಂದ ಹುಡುಕುವ ನಿಮ್ಮ ಬಗೆಗೂ ಸಂತೋಷವಾಗುತ್ತದೆ....
ಶಿವು, ಮಲ್ಲಿಕಾರ್ಜುನ್ ಬ್ಲಾಗಿನ ಪ್ರತಿಕ್ರಿಯೆಗಳಲ್ಲಿ ಗಮನಿಸಿದ್ದೇನೆ..
ಎಲ್ಲೆಲ್ಲಿಂದಲೋ ಲಿಂಕುಗಳನ್ನು ಕೊಡುತ್ತೀರಿ...

ಅಂಥಹ ಹುಡುಕುವ ಹವ್ಯಾಸ ಮುಂದುವರೆಯಲಿ...

ಶುಭ ಹಾರೈಕೆಗಳು...

Swaram said...

Really nice .. something very new to me. Thanks for sharing!

ರೂpaश्री said...

ಪ್ರಕಾಶ್ ಅವರೆ,
ತಡವಾದರೇನಂತೆ ಬಿಡಿ, ಪರ್ವಾಗಿಲ್ಲಾ..ಹುಡುಕಾಟದ ಕೆಲಸ ಏನಿದ್ರೂ ಗುರೂಸ್ ವರ್ಲ್ಡ್ ನ ಗುರು ಅವರಿಗೆ ಸರಿ. ನಾನೇದ್ರೂ ಶಿವು, ಮಲ್ಲಿಕಾರ್ಜುನ್, ಗುರು ಅಥ್ವಾ ಇನ್ಯಾರೋ ಹೊಸ ವಿಷಯಗಳನ್ನು ತಿಳಿಸಿದ್ರೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳ್ಕೊತೀನಿ ಅಷ್ಟೆ. ನಾನ್ ತಿಳ್ಕೊಂಡದ್ದನ್ನ ನಿಮ್ಮೊಂದಿಗೆ ಇಲ್ಲಿ ಹಂಚ್ಕೊತೀನಿ:)
ನಿಮ್ಮ ಹಾರೈಕೆಗಳಿಗೆ ವಂದನೆಗಳು!!

ರೂpaश्री said...

Swati,
Welcome to my blog!! Thanks for reading and appreciating:)

ಜಲನಯನ said...

ರೂಪश्री ಮೇಡಂ,
ನಿಜ ಶಿವು ಮಾತು ಅಕ್ಷರಶಃ...ನಿಮ್ಮ ಆಸಕ್ತಿಗೆ ಬಹುಪರಾಕ್.
Shaped poem ಮಕ್ಕಳ ಮನಗೆಲ್ಲುವ ಕವನ ರಚನಾವಿಧಾನ..ಚನ್ನಾಗಿ ತಿಳಿಸಿದ್ದೀರಿ...ಹಾಗೇ Link ಅನ್ನೂ ಕೊಟ್ಟಿದ್ದೀರಿ...ಆಸಕ್ತಿಯಿರುವವರಿಗೆ...

PARAANJAPE K.N. said...

Roopashri,
Quite interesting. ನಾನು ನಿಮ್ಮ ಬ್ಲಾಗಿಗೆ ಮೊದಲಿಗೆ ಬಂದೆ. ತು೦ಬ ಖುಷಿ ಕೊಟ್ಟಿತು.

ರೂpaश्री said...

ಆಜಾದ್ ಅವರೆ,
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು. ನೀವು ಈ ರೀತಿಯ ಕವನ ಬರೆಯಲು ಪ್ರಯತ್ನಿಸಿ ಚೆನ್ನಾಗಿರುತ್ತದೆ!

ರೂpaश्री said...

ಪರಾಂಜಪೆ ಅವರೆ,
ನನ್ನ ಬ್ಲಾಗಿಗೆ ಮತ್ತೊಮ್ಮೆ ಭೇಟ್ಟಿ ಕೊಟ್ಟು ಪ್ರತಿಕ್ರಿಯಿಸಿದಕ್ಕೆ ವಂದನೆಗಳು. ಆಗಾಗ್ಗೆ ಬನ್ನಿರಿ:)

ಗೌತಮ್ ಹೆಗಡೆ said...

abba blog lokada vividha kavanagalalli idu vibhinna.;)