Pages

Saturday, June 27, 2009

ನೋಡು ಬಾ ನೋಡು ಬಾ ನಮ್ಮ ತಾತನೂರ !!!

ಅಜ್ಜಿ-ತಾತನ ಊರು ಅಂದ್ರೆ ಎಲ್ಲರಿಗೂ ವಿಶೇಷವಾದ ಪ್ರೀತಿಯಿರುತ್ತೆ. ೩ ವರ್ಷದವಳಿದ್ದಾಲೇ ಅಜ್ಜಿ-ತಾತರನ್ನು ಕಳೆದುಕೊಂಡ ನನಗೆ ನಮ್ಮ್ ತಾತನ ಊರಿನ ಬಗ್ಗೆ ಪ್ರೀತಿ ಹುಟ್ಟಲು ಕಾರಣವೇ ಅಲ್ಲಿರುವ ದೇವಸ್ಥಾನ. ನನ್ನ ತಾತನ (ತಂದೆಯ ತಂದೆ) ಊರು ಮಂಡ್ಯ ಜಿಲ್ಲೆಯಲ್ಲಿರುವ ಹೊಸಹೊಳಲು, ಹೊಯ್ಸಳ ಶೈಲಿಯ ಗುಡಿಯಿರುವ ಊರು. 'ಹೊಳಲು' ಅಂದರೆ ಹಳೆಗನ್ನಡದಲ್ಲಿ ಪಟ್ಟಣವೆಂದು. ಊರಿನಲ್ಲಿರೋ ಶಿಲಾಶಾಸನದ ಪ್ರಕಾರ 1125 ADಯಲ್ಲಿ ವೀರ ಗಂಗನರಸಿಂಹ ಬಲ್ಲಾಳರ ಕಾಲದಲ್ಲಿ ನೊಳಂಬ ಶೆಟ್ಟಿ ಮತ್ತು ನಂದಿನಾಥ ವೀರಭದ್ರದೇವ ಅನ್ನೋರು ಈ ದೇವಸ್ಥಾನವನ್ನು ಕಟ್ಟಿಸಿದ್ದು. ಈ ಊರು ಹಿಂದೆ ಅಗ್ರಹಾರವಾಗಿತ್ತಂತೆ. ಇಲ್ಲಿರುವರೆಲ್ಲ ರೈತಾಪಿ ಹಾಗು ನೇಯ್ಗೆ ಆಧಾರಿತ ಕುಟುಂಬಗಳು.
ಹೊಯ್ಸಲ ತ್ರಿಕೂಟಾಚಲ ಶೈಲಿಯಲ್ಲಿ ನಿರ್ಮಿತವಾಗಿರುವ ಗುಡಿ ಒಂದು ಮೀಟರ್ ನಷ್ಟು ಎತ್ತರದ ಅಡಿಪಾಯದ ಮೇಲೆ ನಿಂತಿದೆ. ಪಶ್ಚಿಮಕ್ಕಿರುವ ಕೂಟವು ಹದಿನಾರು ಮೂಲೆಗಳಿರುವ ನಕ್ಷತ್ರದ ಆಕಾರದಲ್ಲಿದೆ, ಹಾಗು ಇದರ ಶಿಖರ ಮತ್ತು ಕಲಶ ಇಂದಿಗೂ ಭದ್ರವಾಗಿದೆ. ಉತ್ತರ-ದಕ್ಷಿಣದಲ್ಲಿರುವ ಕೂಟಗಳು ಚೌಕಟ್ಟಾಗಿವೆ. ಗುಡಿಗಿರುವುದು ಒಂದೇ ಗೋಪುರ.
ದೇವಸ್ಥಾನದ ಹೊರ ಗೋಡೆಗಳು ಸುಂದರವಾದ ಕೆತ್ತನೆಗಳಿಂದ ಆವೃತವಾಗಿದೆ. ಕೆಳಭಾಗದಲ್ಲಿ ಆನೆಗಳ ಸಾಲುಗಳ ಮದ್ಯೆ ಸಲಗನೊಡನೆ ಹೋರಾಡುತ್ತಿರುವ ವೀರನೊಬ್ಬನ ಕೆತ್ತನೆ. ನಂತರದ ಸಾಲಿನಲ್ಲಿ ರಾಮಾಯಣ, ಮಹಾಭಾರತ, ಭಾಗವತದ ಸನ್ನಿವೇಶಗಳನ್ನು ವರ್ಣಿಸುವ ಕೆತ್ತನೆಗಳು. ಹಂಸಗಳ ಸಾಲೂಯಿದೆ. ಎಲ್ಲಕ್ಕಿಂತ ಅಧ್ಭುತವಾಗಿರೋದು ಮಧ್ಯದ ಸಾಲು. ನಾಟ್ಯ ಗಣಪತಿ, ನಾಟ್ಯ ಸರಸ್ವತಿ, ಮಾಧವ, ಮೋಹಿನಿ, ಪಾರ್ವತಿ, ನರಸಿಂಹ ಮುಂತಾದ ದೇವರುಗಳನ್ನು ಅತಿ ಸುಂದರವಾಗಿ ಬಿತ್ತರಿಸಲಾಗಿದೆ.
ನವರಂಗದಲ್ಲಿರುವ ಕಂಬಗಳು ಸಣ್ಣ ಕುಸುರಿ ಕೆತ್ತನೆಗಳನ್ನೊಳಗೊಂಡಿದೆ. ಇಲ್ಲಿರುವ ಕೆಲವು ಕಂಭಗಳಲ್ಲೂ ಸಂಗೀತ ಹೊಮ್ಮುತ್ತದೆ. ಬೇಲೂರಿನಲ್ಲಿರುವ ಮದನಿಕೆಯನ್ನು ಹೋಲುವ ನಾಟ್ಯ ಭಂಗಿಗಳು ಇಲ್ಲೂ ಇವೆ. ದೇವಸ್ಥಾನದ ಮುಖ್ಯ ದೇವರು ಶ್ರೀಲಕ್ಷ್ಮಿನಾರಾಯಣ ವಿಗ್ರಹವು ಪಶ್ಚಿಮಕೂಟದಲ್ಲಿ ಪ್ರತಿಸ್ಥಾಪಿಸಲಾಗಿದೆ. ಗರ್ಭಗುಡಿಯ ಎದುರಿರುವ ಕಂಭದಲ್ಲಿ ಹೆಬ್ಬರಳಿನ ಅಂಗುಷ್ಟ ಗಾತ್ರದ ಸ್ಟ್ರಾ ನಲ್ಲಿ ಎಳನೀರು ಕುಡಿಯುತ್ತಿರೋ ಆಂಜನೇಯ ವಿಗ್ರಹವಿದೆ. ಬೆಳಕು ಹೆಚ್ಚಿಲ್ಲವಾದ್ದರಿಂದ ಕಾಣೋಲ್ಲ. ಪೂಜಾರಿಯವರನ್ನು ಕೇಳಿದರೆ ದೀಪದ ಬೆಳಕಿನಲ್ಲಿ ತೋರಿಸುವರು.

ನಮ್ಮೂರಿಗೆ ದಾರಿ:
ಮೈಸೂರಿನಿಂದ ಕೇವಲ 53ಕಿ.ಮಿ ದೂರದಲ್ಲಿರೋ ನಮ್ಮೂರಿಗೆ ಬೆಂಗಳೂರು/ ಮೈಸೂರು/ ಹಾಸನ ಎಲ್ಲಾ ಕಡೆಗಳಿಂದಲೂ ಬಸ್ ವ್ಯವಸ್ಥೆಯಿದೆ. ಕೃಷ್ಣರಾಜಪೇಟೆ(ಕೆ.ಆರ್.ಪೇಟೆ) ಅಲ್ಲಿಂದ ೨-೩ ಕಿ.ಮಿ, ಅಲ್ಲಿ ಸುಸಜ್ಜಿತ PWD ಗೆಸ್ಟ್ ಹೌಸ್ ಕೂಡ ಇದೆ.

ನಮ್ಮೂರಿಗೆ ಹೋಗಲು ಬೆಂಗಳೂರು-ಮೈಸೂರ್ ಹೆದ್ದಾರಿಯಲ್ಲಿ ಇನ್ನೇನು ಶ್ರೀರಂಗಪಟ್ಟಣ ಒಂದು ಕಿ.ಮಿ ಇದೆ ಅನ್ನೋವಾಗ ಬಲಗಡೆಗೆ ಒಂದು ತಿರುವು ಸಿಗುತ್ತೆ (ಕೃಷ್ಣರಾಜ ಪೇಟೆ ಅಂತ ಸಣ್ಣದೊಂದು ಬೋರ್ಡ್ ಇದೆ). ಅಲ್ಲಿ ಬಲಕ್ಕೆ ತಿರುಗಿ ನಲವತ್ತು ಕಿಲೋಮೀಟರ್ ಹೋದರೆ ಕೆ.ಆರ್. ಪೇಟೆ ಸಿಗುತ್ತೆ(ಮಾರ್ಗದಲ್ಲಿ ಪಾಂಡವಪುರ ಸಿಗುತ್ತೆ) . ಅಲ್ಲಿ ಸರ್ಕಲ್-ನಲ್ಲಿ ಎಡಕ್ಕೆ ತಿರುಗಿ ಎರಡೂವರೆ ಕಿಮಿ ಬಂದ್ರೆ ಹೊಸಹೊಳಲು ಸಿಗುತ್ತೆ.

ನಮ್ಮೂರಿನ ಬಗ್ಗೆ ವೈಕಿಪೀಡಿಯಾ ಹೀಗೆನ್ನುತ್ತದೆ.

ದೇವಸ್ಥಾನದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇದಕ್ಕೊಂದು ಸರಿಯಾದ ಕಾಂಪೊಂಡ್ ಹಾಕಿದ್ದು ಇತ್ತೀಚೆಗೆ. ನಾನು ಚಿಕ್ಕವಳಿದ್ದಾಗ ಮಕ್ಕಳು ದೇವಸ್ಥಾನದ ಗೋಪುರದ ಮೇಲೆಲ್ಲಾ ಹತ್ತಿ ಬಚ್ಚಿಟ್ಟುಕೊಳ್ಳುವ ಆಟ ಇತ್ಯಾದಿ ಆಡುತ್ತಿದ್ದರು. ಕೆತ್ತನೆಗಳನ್ನು ಕಲ್ಲಿನಿಂದ ಚೆಚ್ಚುತ್ತಿದ್ದರು:(

28 comments:

ಮನಸು said...

super place!!! thnx for the info

Vidya said...

Roopa,
Nimma taatana oorina bagge barediddakke dhanyavaadagaLu. devastaana, kettanegaLu tumba chennagide. ee ooru ondu prekshaNeeya sthaLa antaayitu. mundomme illige bheTi neeDalu plan madteeni.

ರೂpaश्री said...

Thank you manasu, omme bheTTi kOTTu nODi:)

ರೂpaश्री said...

haudu vidya, devasthana tuMbaa chennaagide.. aadroo nammooru heccu famous aagilla!
nimage saadhyavaadaaga omme bhETi maaDi!

ಸಂದೀಪ್ ಕಾಮತ್ said...

Nice one:)

L'Étranger said...

ಹೊಸಹೊಳಲಿನ ಹತ್ತಿರದಲ್ಲೇ ತುಂಬಾ ವರ್ಷ ಇದ್ರೂ, ಆ ಊರಿನ ಮೂಲಕ ಮತ್ತು ಸುತ್ತಮುತ್ತ ಓಡಾಡಿದ್ರೂ ಅಲ್ಲಿಯ ಈ ದೇವಸ್ಥಾನದ ಬಗ್ಗೆ ಗೊತ್ತೇ ಇರಲಿಲ್ಲ! ಮುಂದೊಮ್ಮೆ ಆ ಕಡೆ ಹೋದಾಗ ದೇವಸ್ಥಾನಕ್ಕೆ ಹೋಗಿ. ಕಲೆಯನ್ನು ನೋಡಿ ಆನಂದಿಸಿ, ಒಂದಷ್ಟು ಫೋಟೋ ತೊಗೊಂಡು ಬರಬೇಕು. :-)

ತುಂಬಾ ಒಳ್ಳೆ ವಿಷಯ ಬರೆದಿದ್ದು ನೋಡಿ ಸಂತೋಷ ಆಯ್ತು.

ನಮ್ಮಲ್ಲಿ ಶಿಲ್ಪಕಲೆ ಎಷ್ಟು ವಿಸ್ತಾರವಾಗಿ ಹರಡಿತ್ತು ಅಂದ್ರೆ, ಹೆಚ್ಚುಕಡಿಮೆ ಪ್ರತಿ ಊರಿನಲ್ಲೂ, ಹಳ್ಳಿ-ಹಳ್ಳಿಗಳಲ್ಲೂ ಒಂದಲ್ಲ ಒಂದು ರೀತಿಯ ಅಭಿವ್ಯಕ್ತಿ ಕಾಣತ್ತೆ. ಈ ಸಮೃದ್ಧತೆಯೇ ಬಹುಶಃ ನಮ್ಮ ತಾತ್ಸಾರಕ್ಕೆ ಕಾರಣ. ಹೊರಗಿನವರ ದಾಳಿಗೆ ಸಿಕ್ಕಿ ತುಂಬಾ ನಾಶವಾಗಿದ್ರೂ ಸಹ ನಮ್ಮ ಜಡತೆ ಮತ್ತು ಅವಿವೇಕದಿಂದಾಗಿ ಇರುವಷ್ಟನ್ನು ಉಳಿಸಿಕೊಳ್ಳುವುದು ಹಾಗಿರಲಿ ನಮ್ಮವರೇ ಮಾಡುತ್ತಿರುವ ನಾಶವನ್ನೂ ತಡೆಯಲಾರದಷ್ಟು ಬೇಜವಾಬ್ದಾರರಾಗಿದ್ದೀವಿ. ಮತ್ತದರ ಬಗ್ಗೆ ನಾಚಿಕೆ ಕೂಡ ನಮಗಾಗಲ್ಲ. :(

ಸಾಗರದಾಚೆಯ ಇಂಚರ said...

ರೂಪಶ್ರಿ,
ತುಂಬಾ ಸೊಗಸಾಗಿದೆ ಬರಹ, ಒಮ್ಮೆ ನಾವು ಬರುತ್ತೇವೆ ನಿಮ್ಮೊರಿಗೆ, ಕರೆದುಕೊಂಡು ಹೋಗಿ..

shivu.k said...

ರೂಪಶ್ರೀ...

ಓಹ್...ಎಷ್ಟ್ಯು ಚೆನ್ನಾಗಿದೆ. ಈ ಸ್ಥಳವೇಕೆ ನನ್ನ ಕಣ್ಣಿಗೆ ಬೀಳಲಿಲ್ಲ....ಬಿಡುವು ಮಾಡಿಕೊಂಡು ಹೋಗಬೇಕೆನಿಸಿದೆ...ನಿಮ್ಮ ಊರಿನ ಬಗ್ಗೆ ತುಂಬಾ ಚೆನ್ನಾದ ಸೊಗಸಾದ ಮಾಹಿತಿ ಮತ್ತು ಅದಕ್ಕೆ ತಕ್ಕಂತ ಫೋಟೋಗಳು...ಧನ್ಯವಾದಗಳು.

ಜಲನಯನ said...

Roopashri...
ನಿಮ್ಮ ತಾತನ ಊರನ್ನು ನಮಗೆ ಪರಿಚಯಿಸಿದ್ದರ ಜೊತೆಗೆ ನಮ್ಮ ಗತ ವೈಭವದತ್ತ ನಮ್ಮ ಚಿತ್ತ ಕೊಂಡೊಯ್ದಿದ್ದೀರಿ...
ಎಲ್ಲಿ ಬರುತ್ತೆ ಈ ಹೊಸ ಹೊಳಲು..? ನಾನು ಮಂಡ್ಯದ ವಿ.ಸಿ.ಫಾರಂ ನಲ್ಲಿ ಸಂಶೋಧನಾ ಸಹಾಯಕನಾಗಿ ಕೆಲಸಮಾಡಿದ್ದೇನೆ...ಮಂಡ್ಯದಿಂದ ಮೇಲುಕೋಟೆ ಕಡೆ ಹೋಗುವ ದಾರಿಯಲ್ಲಿ ಸುಮಾರು ೫-೬ ಕಿ.ಮೀ. ನಲ್ಲಿ ಒಂದು ಹೊಳಲು ಇದೆ...ನೀವು ಹೇಳ್ತಿರೋದು ಅದಲ್ಲ ಅಂದ್ಕೋತೀನಿ...

Ittigecement said...

ರೂಪಾರವರೆ...

ಬೇಲೂರು, ಹಳೆಬೀಡಿನಂತೇ ಕಾಣುತ್ತದಲ್ಲಾ...
ಅದ್ಭುತ ಶಿಲ್ಪ ಕಲೆ...

ಒಂದು ಹೋಗಿ ಬರಲೇ ಬೇಕಾದ ಜಾಗ...
ಉಪಯುಕ್ತ ಮಾಹಿತಿ ಕೂಡ ಕೊಟ್ಟಿದ್ದೀರಿ...

ನಾವು ಮತ್ತು ನಮ್ಮ ಕಸಿನ್ ಇಂಥಹ ಸಣ್ಣ ಟ್ರಿಪ್ ಗಳನ್ನು ಕಾಕುತ್ತಿರುತ್ತೇವೆ..
ಅವನಿಗೆ ಇಂದೇ ನಿಮ್ಮ ಬ್ಲಾಗ್ ತೋರಿಸುವೆ..
ಧನ್ಯವಾದಗಳು....

ರೂpaश्री said...

ಥ್ಯಾಂಕ್ ಯೂ, ಸಂದೀಪ್ ಕಾಮತ್!

ರೂpaश्री said...

ಅರ್ರೆ, ಶ್ರೀಕಾಂತ್ ನಿಮಗೆ ನಮ್ಮೂರು ಗೊತ್ತು ಅಂದ್ಕೊಂಡಿದ್ದೆ.. ಆ ಕಡೆ ಹೋದಾಗ ದೇವಸ್ಥಾನಕ್ಕೆ ಹೋಗಿ ಬನ್ನಿ, ನಿಮ್ಮ ಕ್ಯಾಮೆರಾದ ಫೋಟೋಗಳನ್ನು ನೋಡಲು ಕಾಯುವೆ!!
ಹೌದು, ನಿಮ್ಮ ಮಾತು ನಿಜ. ಬಹಳಷ್ಟು ಹಳ್ಳಿಗಳಲ್ಲಿ ಇಂಥ ದೇವಸ್ಥಾನಗಳಿವೆ.. ಚನ್ನರಾಯಪಟ್ಟಣದ ಹತ್ತಿರ ಇರೋ
ನುಗ್ಗೇಹಳ್ಳಿ ಯಲ್ಲಿ ಕೂಡ ಇಂಥಾ ದೇವಸ್ಥಾನವಿದೆ, ಚಿಕ್ಕವಳಿದ್ದಾಗ ನೋಡಿದ್ದೆ.

ರೂpaश्री said...

ಗುರುಮೂರ್ತಿ ಅವರೆ,
ಲೇಖನ ಮೆಚ್ಚಿದಕ್ಕೆ ವಂದನೆಗಳು. ಖಂಡಿತ,ಕರೆದೊಯ್ಯುವೆ. ಸದ್ಯಕ್ಕೆ virtual ಆಗಿ ನೋಡಿರಿ. ನೀವು ಮುಂದಿನ ಬಾರಿ ಭಾರತಕ್ಕೆ ಹೋದಾಗ ನಮ್ಮೂರಿಗೆ ಹೋಗಿ ಬನ್ನಿ.

ರೂpaश्री said...

ಶಿವು,
ಹೌದು ದೇವಸ್ಥಾನ ತುಂಬಾ ಚೆನ್ನಾಗಿದೆ. ಇದರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಒಮ್ಮೆ ಹೋಗಿ ಬನ್ನಿ, ನಿಮ್ಮ ಛಾಯಾಕನ್ನಡಿಯಲ್ಲಿ ನಮ್ಮೂರನ್ನು ನೋಡುವಾಸೆ!

ರೂpaश्री said...

ಪ್ರಕಾಶ್ ರವರೆ,

ಬೇಲೂರು, ಹಳೆಬೀಡಿನಂತೆಯೇ ಇದೆ.. ಆದ್ರೆ ಚಿಕ್ಕದು!
ಖಂಡಿತ ನಿಮ್ಮ ಸ್ನೇಹಿತರೊಡನೆ ಹೋಗಿ ಬನ್ನಿ ನಮ್ಮೂರಿಗೆ:)

ಕ್ಷಣ... ಚಿಂತನೆ... said...

ರೂಪಶ್ರೀ ಮೇಡಂ, ಹೊಸಹೊಳಲು ಹೆಸರನ್ನು ಕೇಳಿದ್ದರೂ ಅಲ್ಲಿ ಇಂತಹ ಒಂದು ಇತಿಹಾಸವಿದೆಯೆಂದು ತಿಳಿದಿರಲಿಲ್ಲ. ಸರಳ ಬರಹದಿಂದ ಅಲ್ಲಿನ ಐತಿಹಾಸಿಕ ಮಾಹಿತಿಯ ಜೊತೆಗೆ ಅಲ್ಲಿಗೆ ತಲುಪುವ ಮಾಹಿತಿಯನ್ನೂ ನೀಡಿದ್ದೀರಿ. ಆಂಜನೇಯನ ಬಗೆಗಿನ ಮಾಹಿತಿ ಕುತೂಹಲಕಾರಿಯಾಗಿದೆ. ಒಮ್ಮೆಯಾದರೂ ಅಲ್ಲಿಗೆ ಭೇಟಿ ನೀಡಬೇಕೆಂದು ಅನಿಸಿದೆ.

ಚಿತ್ರ-ಮಾಹಿತಿಗೆ ಧನ್ಯವಾದಗಳು.

ಚಂದ್ರಶೇಖರ ಬಿ.ಎಚ್.

ಮಲ್ಲಿಕಾರ್ಜುನ.ಡಿ.ಜಿ. said...

"ಹೊಸಹೊಳಲು" ನೋಡುವ ಹೊಸಆಸೆ ಮೂಡಿದೆ. ದೇವಾಲಯ ಅದ್ಭುತವಾಗಿದೆ. ಮೇಡಂ, ಸ್ವಲ್ಪ ದಾರಿ ಸರಿಯಾಗಿ ಹೇಳಿ. ಅಂದರೆ, ನಾವು ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಎಲ್ಲಿ ತಿರುಗಬೇಕು? ಆ ದಿಕ್ಕಿನಲ್ಲಿ ನಾವು ಫೋಟೋಗ್ರಫಿಗೆಂದು ಹೋಗುತ್ತಿರುತ್ತೇವೆ. ಹಾಗೆಯೇ ಇಲ್ಲಿಗೂ ಭೇಟಿಕೊಡಬಹುದೆಂದುಕೊಂಡೆ.

Guruprasad said...

ರೂಪಶ್ರಿ...
ನಿಮ್ಮ ತಾತನೊರಿನ ಬಗ್ಗೆ ಇರುವ ಅಭಿಮಾನ ಹಾಗು ಅದನ್ನು ಪರಿಚಯಿಸಿದ ರೀತಿ ತುಂಬ ಇಷ್ಟ ಆಯಿತು.....ದೇವಸ್ತಾನ ಚೆನ್ನಾಗಿ ಇದೆ....ಮೈಸೂರ್ ಕಡೆ ಹೋದಾಗ ಒಮ್ಮೆ ಹೋಗಿಬರುತ್ತೇವೆ....ಸ್ವಲ್ಪ ಸರಿಯಾಗಿ ಅಡ್ರೆಸ್ ಹೇಳಿ.....
ಗುರು

ರೂpaश्री said...

ಜಲನಯನ ಅವರೆ,
ನೀವು ಹೇಳುತ್ತಿರುವ ಹೊಳಲು ಬೇರೆ. ನಮ್ಮೂರಿಗೆ ಹೊಗಲು ಮಂಡ್ಯದಿಂದ ಮೈಸೊರಿಗೆ ಹೋಗೋ ಹೆದ್ದಾರಿಯಲ್ಲಿ ಇನ್ನೇನು ಶ್ರೀರಂಗಪಟ್ಟಣ ಒಂದು ಕಿ.ಮಿ ಇದೆ ಅನ್ನೋವಾಗ ಬಲಗಡೆಗೆ ಒಂದು ತಿರುವು ಸಿಗುತ್ತೆ (ಕೃಷ್ಣರಾಜ ಪೇಟೆ ಅಂತ ಸಣ್ಣದೊಂದು ಬೋರ್ಡ್ ಇದೆ). ಅಲ್ಲಿ ಬಲಕ್ಕೆ ತಿರುಗಿ ನಲವತ್ತು ಕಿಲೋಮೀಟರ್ ಹೋದರೆ ಕೆ.ಆರ್. ಪೇಟೆ ಸಿಗುತ್ತೆ. ಅಲ್ಲಿ ಸರ್ಕಲ್-ನಲ್ಲಿ ಎಡಕ್ಕೆ ತಿರುಗಿ ಎರಡೂವರೆ ಕಿಮಿ ಬಂದ್ರೆ ಹೊಸಹೊಳಲು ಸಿಗುತ್ತೆ.
ಒಮ್ಮೆ ಹೋಗಿ ಬನ್ನಿ..

ರೂpaश्री said...

ಚಂದ್ರಶೇಖರ್ ಅವರೆ,
ನಮ್ಮೂರಿನ ಹೆಸರು ಕೇಳಿದ್ದೀರೆಂದು ತಿಳಿದು ಸಂತೋಷವಾಯಿತು. ಒಮ್ಮೆ ಹೋಗಿ ಬನ್ನಿ. ಊರಿಗೆ ಹೋಗೋ ದಾರಿಯನ್ನು ಲೇಖನದಲ್ಲಿ ಸೇರಿಸಿರುವೆ:)

ರೂpaश्री said...

ಮಲ್ಲಿಕಾರ್ಜುನ ಅವರೆ,
ನಿಮ್ಮ ಹೊಸ ಆಸೆ ಬೇಗ ನೆರವೇರಿಸಿಕೊಳ್ಳಿ:) ಕ್ಷಮಿಸಿ ಊರಿಗೆ ಹೋಗೋ ದಾರಿ ತಿಳಿಸಲಿಲ್ಲ. ಈಗ ಲೆಖನದಲ್ಲಿ ಸೇರಿಸಿರುವೆ.
ನಮ್ಮೂರಿಗೆ ಹೋಗಲು ಮಂಡ್ಯದಿಂದ ಮೈಸೊರಿಗೆ ಹೋಗೋ ಹೆದ್ದಾರಿಯಲ್ಲಿ ಇನ್ನೇನು ಶ್ರೀರಂಗಪಟ್ಟಣ ಒಂದು ಕಿ.ಮಿ ಇದೆ ಅನ್ನೋವಾಗ ಬಲಗಡೆಗೆ ಒಂದು ತಿರುವು ಸಿಗುತ್ತೆ (ಕೃಷ್ಣರಾಜ ಪೇಟೆ ಅಂತ ಸಣ್ಣದೊಂದು ಬೋರ್ಡ್ ಇದೆ). ಅಲ್ಲಿ ಬಲಕ್ಕೆ ತಿರುಗಿ ನಲವತ್ತು ಕಿಲೋಮೀಟರ್ ಹೋದರೆ ಕೆ.ಆರ್. ಪೇಟೆ ಸಿಗುತ್ತೆ. ಅಲ್ಲಿ ಸರ್ಕಲ್-ನಲ್ಲಿ ಎಡಕ್ಕೆ ತಿರುಗಿ ಎರಡೂವರೆ ಕಿಮಿ ಬಂದ್ರೆ ಹೊಸಹೊಳಲು ಸಿಗುತ್ತೆ. ನಿಮಗೆ ಬೇಕಿದ್ದಲ್ಲಿ ನನ್ನ ಊರಿನಲ್ಲಿ ಈಗ ಇರೋ ಚಿಕ್ಕಪ್ಪನ ಫೋನ್ ನಂ ಕೊಡುವೆ.

ರೂpaश्री said...

ಗುರು ಅವರೆ,
ಲೇಖನ ಮೆಚ್ಚಿದಕ್ಕೆ ಥ್ಯಾಂಕ್ಸ್. ದೇವಸ್ಥಾನ ನಾನು ಹೇಳಿರೋದಕ್ಕಿಂತ ತುಂಬಾ ಚೆನ್ನಾಗಿದೆ. ಕ್ಷಮಿಸಿ ಊರಿಗೆ ಹೋಗೋ ದಾರಿ ತಿಳಿಸಲಿಲ್ಲ. ಈಗ ಲೇಖನದಲ್ಲಿ ಸೇರಿಸಿರುವೆ.
ನಿಮಗೆ ಬೇಕಿದ್ದಲ್ಲಿ ನನ್ನ ಊರಿನಲ್ಲಿ ಈಗ ಇರೋ ಚಿಕ್ಕಪ್ಪನ ಫೋನ್ ನಂ ಕೊಡುವೆ.

ಜಲನಯನ said...

ರೂಪश्री ನಿಮ್ಮ ಮಾರ್ಗದರ್ಶನಕ್ಕೆ ಧನ್ಯವಾದ....ಪಾಂಡವಪುರ ಕ್ರಾಸ್ ವರೆಗೂ ಹೋಗಿದ್ದೀನಿ...ಆನಂತರ ಶ್ರೀರಂಗಪಟ್ಟಣ, ಅದು ಬಿಟ್ರೆ ನೆಕ್ಸ್ಟ್ ಸ್ಟಪು ಮೈಸೂರೇ...!!! ನಿಮ್ಮ ಊರ ಕಡೆ ಹೋಗಿಲ್ಲ...ಎಚ್,ಡಿ. ಕೋಟೆಗೆ ಹೋಗಿದ್ದೇನೆ...ನೋಡೋಣ ತಾಯ್ನಾಡಿಗೆ ಹೋದಾಗ..ಆಗುತ್ತೋ ಅಂತ...thanks.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ಮುಂದಿನ ತಿಂಗಳಲ್ಲಿ ನಾನು, ಶಿವು ಮತ್ತು ಪ್ರಕಾಶ್ ಹೆಗಡೆ(ಇಟ್ಟಿಗೆ ಸಿಮೆಂಟು) ಮೂವರೂ ಮೈಸೂರಿಗೆ ಹೋಗುವುದಿದೆ. ಹಾಗೇ ಹೋಗಿಬರುವೆವು. ಹೊರಡುವ ಮುನ್ನ ನಿಮಗೆ ತಿಳಿಸಿ ಫೋನ್ ನಂಬರ್ ಪಡೆಯುವೆವು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ಮುಂದಿನ ತಿಂಗಳಲ್ಲಿ ನಾನು, ಶಿವು ಮತ್ತು ಪ್ರಕಾಶ್ ಹೆಗಡೆ(ಇಟ್ಟಿಗೆ ಸಿಮೆಂಟು) ಮೂವರೂ ಮೈಸೂರಿಗೆ ಹೋಗುವುದಿದೆ. ಹಾಗೇ ಹೋಗಿಬರುವೆವು. ಹೊರಡುವ ಮುನ್ನ ನಿಮಗೆ ತಿಳಿಸಿ ಫೋನ್ ನಂಬರ್ ಪಡೆಯುವೆವು. ಧನ್ಯವಾದಗಳು.

ರೂpaश्री said...

ಮಲ್ಲಿಕಾರ್ಜುನ್ ಅವರೆ,
ಮೂರೂ ಜನ ಒಟ್ಟಿಗೆ ಹೋಗ್ತಿದ್ದೀರ ಅಂತ ತಿಳಿದು ಖುಶಿ ಆಯ್ತು, ಹೋಗಿಬನ್ನಿ. ಹೊರಡುವ ಮುನ್ನ ನನ್ಗೊಂದು ಈಮೈಲ್ ಮಾಡಿ ನಂಬರ್ ಕೊಡುವೆ.

Rakesh Holla said...

Che...definitely I planed to go this place after reading this article. Really excellent great heritage place this is.
Thanks to introducing this good place.
Good photos too…

ರೂpaश्री said...

Rakesh,
Welcome to my blog!
Do plan your visit, im sure you will enjoy it:)
Cheers