Pages

Tuesday, September 9, 2008

ಅಲ್ಲಿ ನೋಡು ಗಣಪ ಇಲ್ಲಿ ನೋಡು ಗಣಪ

ಅಲ್ಲಿ ನೋಡು ಗಣಪ
ಇಲ್ಲಿ ನೋಡು ಗಣಪ
ಮೇಲೆ ನೋಡು ಗಣಪ
ಕೆಳಗೆ ನೋಡು ಗಣಪ

ಈ ಹಾಡು ನಾವು ಗಣೇಶನ ವಿಸರ್ಜನೆಗೆ ಹೋಗೋವಾಗ ಹಾಡ್ತಾಯಿದ್ವಿ. ಅಮೇರಿಕಾದಲ್ಲಿರುವ ನನ್ನ ಹಲವಾರು ಸ್ನೇಹಿತೆಯರು ಹಬ್ಬಕ್ಕೆ ತಾವೇ ಮಣ್ಣಿನಿಂದ, ಗೋಧಿಹಿಟ್ಟಿನಿಂದ, ಅರಿಶಿನದ ಗಣಪತಿಯನ್ನ ಮಾಡಿ ಪೂಜಿಸಿದ್ದರು, ಅವರು ಫೋಟೋಗಳನ್ನ ನನ್ನೊಂದಿಗೆ ಹಂಚಿಕೊಂಡರು. ಬನ್ನಿ ಅವರೆಲ್ಲರ ಮನೆ ಗಣೇಶ ದರ್ಶನ ಮಾಡಿ ಬರೋಣ.

ನಮ್ಮ ತಾಯಿ ಬೆಂಗಳೂರಿನಲ್ಲಿ ಹಬ್ಬದ ದಿನ ನನ್ನ ಗಣಪನ ಕಲೆಕ್ಶನ್ ನಲ್ಲಿ ಕೆಲವನ್ನು ಹೊರ ತೆಗೆದು ಜೋಡಿಸಿದ್ದರು.



ಶಿಕಾಗೋದಲ್ಲಿರುವ ಆತ್ಮೀಯ ಗೆಳತಿ ರೋಹಿಣಿ ಪ್ಲೇ ಡೋನಿಂದ ಗಣಪತಿಯನ್ನು ಮಾಡಿದ್ದು ಹೀಗೆ.



ಇವರು ೨೦೦೬ರಲ್ಲಿ ಮಾಡಿದ್ದ ವಿನಾಯಕನ ಮೂರ್ತಿ.


ಗೋಧಿ ಹಿಟ್ಟಿನಲ್ಲಿ ಮಾಡಿದ ಗಜಾನನ.



ಅರಿಶಿನದ ವಿನಾಯಕ.



ಮೈದಾ ಹಿಟ್ಟಿನ ಲಂಬೋದರ.




ಬ್ಲ್ಯಾಕ್ ಕ್ಲೇನಲ್ಲಿ ಮೂಡಿದ ವಿಘ್ನೇಶ್ವರ.


ಗಜಮುಖ


ಮಹೇಶ್ವರ ಪುತ್ರ


ಹೂವಿನ ರಂಗವಲ್ಲಿಯಲ್ಲಿ ಗಣಪ


ಸಿದ್ದಿವಿನಾಯಕನ ರಂಗೋಲಿ


ಮೂಶಿಕವಾಹನ



ಕಳೆದ ವಾರ ಗಣೇಶ ಹಬ್ಬದ ಸ್ಪೆಶಲ್ ಅನ್ನುವಂತೆ ಹಲವಾರು ಬ್ಲಾಗ್-ಗಳಲ್ಲಿ ಗಣಪನದ್ದೇ ವಿಷಯ.

ಕೇಕ್ ರಾಣಿ ಎಂದೇ ಸ್ನೇಹಿತರಲ್ಲಿ ಚಿರಪರಿಚಿತಳಾದ ಅಟ್ಲಾಂಟದಲ್ಲಿರುವ ನಮ್ರತಾ ಪ್ಲೇ ಡೊನಿಂದ ಮಾಡಿದ ಗೌರಿ-ಗಣೇಶ ಇಲ್ಲಿದೆ. ಬಾಯಲ್ಲಿ ನೀರೂರಿಸುವ ತಿಂಡಿಗಳನ್ನ ನೋಡ್ತಾ ಅಲ್ಲೇ ಇರ್ಬೇಡಿ, ವಾಪಸ್ ಇಲ್ಲಿಗೆ ಬನ್ನಿ ಇನ್ನೂ ಹಲವಾರು ಗಣೇಶಗಳಿವೆ ನೋಡೋಕೆ:)

ಮೊವಂಜ, ತಾಂಜನಿಯ,ಪೂರ್ವ ಆಫ್ರಿಕದಲ್ಲಿರುವ ಅಹರ್ನಿಶಿ ಶ್ರೀಧರ್ ಅವರು ನೂರಿಪ್ಪತ್ತಕ್ಕೂ ಹೆಚ್ಚು ಜನ ಸ್ನೇಹಿತರೊಡನೆ ಹಬ್ಬ ಆಚರಿಸಿದ್ದು ಹೀಗೆ.

ಆರ್ಕುಟ್ ನಲ್ಲಿರುವ Mrs South Indies ಎಂಬ ಬಳಗದ ಸದಸ್ಯೆಯರು ಹಬ್ಬ ಆಚರಿಸಿದ್ದು ಹೀಗೆ.

ಅಪ್ಪಟ ಹುಟ್ಟು ಮೈಸೂರು ಕನ್ನಡಿಗ ಎಂದು ಹೇಳಿಕೊಳ್ಳುವ ಶಂಕರ ಪ್ರಸಾದ ಅವರು ತಮ್ಮ ಸೋಮಾರಿ ಕಟ್ಟೇಲಿ ಗಣಪನ ಕೂರ್ಸಿದ್ದು ಹೀಗೆ:)


ಐರ್ ಲ್ಯಾಂಡಿನಲ್ಲಿರೋ ಕನ್ನಡಿಗರು ಸಂಭ್ರಮದಿಂದ ಗಣೇಶ ಹಬ್ಬ ಆಚರಿಸಿದರು. ಹಬ್ಬದ ಫೋಟೋಗಳು ಇಲ್ಲಿವೆ.


Ganesha Outsourced! ಶಿಕಾಗೋದಲ್ಲಿನ ನಮ್ಮ ಸಾಫ್ಟ್ ವೇರ್ ಇಂಜಿನೀಯರ್ ಸಾಹೇಬ್ರು ಚೀನಾದವರು ಮಾಡಿದ ಗಣಪನ ತಂದು ಪೂಜೆ ಮಾಡಿದ್ರು.


ಶುಭಾ ಅವರು ಚಿಕ್ಕಂದಿನ ದಿನಗಳ ಹಬ್ಬ ನೆನೆಯುತ್ತಾ ಬರೆದದ್ದು Gowri Ganesha..... and memories of 'GANPATI KOODSIDDIRA?


ಶ್ರೀ ಅವರು ತಮ್ಮ ಬ್ಲಾಗಿನಲ್ಲಿ ಗಣೇಶಹಬ್ಬದ ಆಚರಣೆಯ ಬಗ್ಗೆ ಪೂರ್ತಿ ವಿವರ ಕೊಟ್ಟಿದ್ದಾರೆ.


ಗಣೇಶ ಹಬ್ಬದ ಬಗ್ಗೆ ದಟ್ಸ್ ಕನ್ನಡದಲ್ಲಿ ಹಲವಾರು ಲೇಖನಗಳು ಮೂಡಿ ಬಂದಿವೆ. ಓದಿರಿ

Update : Part of this post has been posted here at Alaivani

9 comments:

Sreevidya said...

Hi Roopa,
tuMba oLLe saMgraha mADiddIra:) yellara mane gaNapati tuMba chennAgi ide. nimma snEhitarige hELibiDi. nimma mane gaNapati aMtu hELalEbEkAgilla, aShTu chennAgi mADiddIra:) nimagu hemanthgu nanna abhinaMdanegaLu.

L'Étranger said...

Super collection! :)

ರೂpaश्री said...

ವಿದ್ಯಾ,
ಎಲ್ಲಾ ಸ್ನೇಹಿತರಿಗೆ ನಿಮ್ಮ ಮಾತುಗಳನ್ನು ತಿಳಿಸುತ್ತೇನೆ. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು:)


ಥ್ಯಾಂಕ್ಯೂ SB:))

Spurthi Girish said...

ಎಷ್ಟ್ ಒಳ್ಳೆ ಸಂಗ್ರಹ ಮಾಡಿದೀರಾ ರೂಪ..ಎಲ್ಲ ಬೇರೆ ದೇಶಗಳಲ್ಲೂ ಗಣೇಶ ಹಬ್ಬ ಎಷ್ಟು ಚೆನ್ನಾಗಿ ಮಾಡಿದಾರೆ..ನಿಮ್ ಮನೆಯ ಗಣಪ ಅಂತು ತುಂಬ ಚೆನ್ನಾಗಿದೆ ..ಬ್ಲಾಗ್ ಸೂಪರ್..ಪ್ಲೀಸ್ ಕೀಪ್ ರೈಟಿಂಗ್..

ರೂpaश्री said...

ಥ್ಯಾಂಕ್ಸ್ ಅ ಲಾಟ್ ಸ್ಪೂರ್ತಿ !! ಹಬ್ಬ ಮಾಡೋದ್ರಲ್ಲಿ ನೀವೇನು ಕಮ್ಮಿಯಿಲ್ಲ:) ನಿಮ್ಮ ಈ ಮಾತುಗಳೆ ನನಗೆ ಹೆಚ್ಚು ಬರೆಯಲು ಸ್ಪೂರ್ತಿ:)

Anonymous said...

wonderful to see people staying abroad celebrating our festivals with so much enthusiasm :))

Chetan

ರೂpaश्री said...

Yes it indeed is wonderful to note that:)

Jen Kumar said...

You are amazing!!!
Thanks for sending me your link. I have some doubts about some of the photos, especially near the top. I can't see the details in the photos on the puja alters.. You have put so much time and efforts. Are there bigger size photos to see the details?

I have some more questions. I want to e-mail you sometime. I lefe my contact on my flickr where you left your links.

WOW!!!!! Thanks for sharing your creativity and enthu with us!

Unknown said...

ತುಂಬಾ ಚೆನ್ನಾಗಿ ಗಣೇಶನ ಹಬ್ಬವನ್ನು ಆಚರಣೆ ಮಾಡ್ತಿರಾ.
ವಿದೇಶದಲ್ಲಿದ್ರು ಭಾರತೀಯ ಸಂಸ್ಕ್ರತಿ, ಸಾಹಿತ್ಯ, ಆಚರಣೆ, ಮೇಲಿರುವ ನಿಮ್ಮ ಪ್ರೀತಿ ಕಂಡು ತುಂಬಾ ಸಂತೋಷವಾಯ್ತು...

ಅರವಿಂದ ಬಿರಾದಾರ
ಸುವರ್ಣನ್ಯೂಸ್ ೨೪*೭
ಬೆಂಗಳೂರು